ಭಾನುವಾರ, ಆಗಸ್ಟ್ 1, 2021
21 °C
ಶಾಸಕ ಯು.ಟಿ. ಖಾದರ್‌ ಘೋಷಣೆ

‘ಉಳ್ಳಾಲ’ ಕ್ಷೇತ್ರದಲ್ಲಿ ಕ್ವಾರಂಟೈನ್‌ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಹೊರ ರಾಜ್ಯಗಳಿಂದ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವವರಿಗೆ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಗಳ ಮೂಲಕ ಕ್ವಾರಂಟೈನ್‌ ನಿರ್ವಹಣೆ ಮಾಡಲಾಗುತ್ತಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸ್ಥಳೀಯ ಶಾಸಕ ಯು.ಟಿ.ಖಾದರ್‌, ‘ಹೊರ ರಾಜ್ಯದಿಂದ ಬರುವವರನ್ನು ಕ್ವಾರಂಟೈನ್‌ ಇಲ್ಲದೇ ಮನೆಗೆ ಕಳುಹಿಸುವುದರಿಂದ ಸೋಂಕು ಹರಡುವ ಅಪಾಯವಿದೆ. ಅಲ್ಲದೇ, ಹೊರಗಿನಿಂದ ಬಂದವರನ್ನು ಅನು
ಮಾನದಿಂದ ನೋಡುವ, ದೂರ ಇಡುವ ಮತ್ತು ವೈಮನಸ್ಸು ಸೃಷ್ಟಿಸುವುದಕ್ಕೂ ಕಾರಣವಾಗಬಹುದು. ಇದೆಲ್ಲವನ್ನೂ ತಡೆಯಲು ಸ್ಥಳೀಯವಾಗಿ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ’ ಎಂದರು.

ನೋಡಲ್‌ ಅಧಿಕಾರಿ ನೇಮಕ: ಬೆಳ್ಮ ಗ್ರಾಮ ಪಂಚಾಯಿತಿಯನ್ನು ಕ್ವಾರಂಟೈನ್‌ ಸೌಲಭ್ಯದ ನೋಡಲ್‌ ಗ್ರಾಮ ಪಂಚಾಯಿತಿಯನ್ನಾಗಿ ಆಯ್ಕೆ ಮಾಡಲಾಗಿದೆ. ಅಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.

‘ನಮ್ಮ ಕ್ಷೇತ್ರಕ್ಕೆ ಯಾವುದೇ ರಾಜ್ಯದಲ್ಲಿರುವವರೂ ವಾಪಸ್‌ ಬರಬಹುದು. ಯಾರನ್ನೂ ನಾವು ತಡೆಯುವುದಿಲ್ಲ. ಕ್ಷೇತ್ರಕ್ಕೆ ಬಂದವರು ಬೆಳ್ಮಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಬೇಕು. ಅವರು ಸೂಚಿಸುವ ಸರ್ಕಾರಿ ವಿದ್ಯಾರ್ಥಿ ವಸತಿ ನಿಯಲ ಅಥವಾ ಶಾಲೆಯಲ್ಲಿ ಏಳುದಿನಗಳ ಕಾಲ ಇರಬೇಕು. ಈ ಕೇಂದ್ರಗಳಲ್ಲಿ ಕನಿಷ್ಠ ಸೌಲಭ್ಯಒದಗಿಸಲಾಗಿದೆ. ಕ್ವಾರಂಟೈನ್‌ನಲ್ಲಿ ಇರುವವರಿಗೆ ಅವರ ಮನೆಯವರೇ ಊಟ ಪೂರೈಸಬೇಕು’ ಎಂದು ಖಾದರ್‌ ಹೇಳಿದರು.

ಎಲ್ಲಿವೆ ಸೌಲಭ್ಯ?: ‘ಕ್ವಾರಂಟೈನ್‌ಗೆ 10,000 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿತ್ತು. ಕ್ವಾರಂಟೈನ್‌ಗಾಗಿ ರೈಲುಗಳನ್ನೂ ಪರಿವರ್ತನೆ ಮಾಡಿರುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಈಗ ಕ್ವಾರಂಟೈನ್‌ಇಲ್ಲ ಎನ್ನುತ್ತಿದ್ದಾರೆ. ಆ ಸೌಲಭ್ಯಗಳು ಏನಾದವು’ ಎಂದು ಶಾಸಕರು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು