ಭಾನುವಾರ, ಜನವರಿ 17, 2021
28 °C

ಮಂಗಳೂರು: ಇಂದು ಸಂಪೂರ್ಣ ಲಾಕ್‌ಡೌನ್‌, ಸರಳ ಈದ್ ಉಲ್ ಫಿತ್ರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಸಂಪೂರ್ಣ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾನುವಾರ ಮುಸ್ಲಿಮರು ತಮ್ಮ ತಮ್ಮ ಮನೆಗಳಲ್ಲಿ ಈದ್ ಉಲ್ ಫಿತ್ರ್ ಸರಳವಾಗಿ ಆಚರಿಸಿದರು.

ಕುಟುಂಬದವರೆಲ್ಲ ಒಟ್ಟು ಸೇರಿ ಮನೆಯಲ್ಲಿಯೇ ಹಬ್ಬದ ವಿಶೇಷ ನಮಾಜನ್ನು ನಿರ್ವಹಿಸಿ, ಬಳಿಕ ಪರಸ್ಪರ ಶುಭಾಶಯ ಕೋರಿದರು. 

ಲಾಕ್‌ಡೌನ್ ಕಾರಣ ಮಸೀದಿ ಅಥವಾ ಸಾಮೂಹಿಕವಾಗಿ ಈದ್ ನಮಾಜ್ ನಿರ್ವಹಿಸಲು ಅವಕಾಶ ಇರಲಿಲ್ಲ. ಇದರಿಂದ ನಗರದ ಬಾವುಟ ಗುಡ್ಡ ಸೇರಿದಂತೆ ಬಹುತೇಕ ಪ್ರಾರ್ಥನಾ ಮೈದಾನಗಳಲ್ಲಿ ಹಬ್ಬದ ರಂಗು ಇರಲಿಲ್ಲ. ರಸ್ತೆಗಳೂ ಬಿಕೋ ಎನ್ನುತ್ತಿದ್ದವು. ಕೆಲವು ಮಸೀದಿಗಳಿಂದ ಈದ್ ಸಂದೇಶವನ್ನು ಯೂಟ್ಯೂಬ್ ಮೂಲಕ ನೀಡಲಾಯಿತು. ಸರಳ ಈದ್ ಆಚರಿಸುವಂತೆ ಖಾಜಿ ಸಂದೇಶ ನೀಡಿದ್ದ ಹಿನ್ನೆಲೆಯಲ್ಲಿ ಈದ್ ಹಿಂದಿನ ದಿನಗಳಲ್ಲಿ ಬಟ್ಟೆ ಇತ್ಯಾದಿ ಖರೀದಿಯ ಅಬ್ಬರವೂ ಇರಲಿಲ್ಲ.

ಹಬ್ಬ ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು