ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

374 ಮಂದಿಗೆ ಕೋವಿಡ್ ದೃಢ

ಪ್ರಾಥಮಿಕ ಸಂಪರ್ಕದಿಂದ ಸೋಂಕಿಲ್ಲ: 232 ಮಂದಿ ಗುಣಮುಖ
Last Updated 9 ಸೆಪ್ಟೆಂಬರ್ 2020, 2:36 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸತತ ಎರಡನೇ ದಿನವೂ ಪ್ರಾಥಮಿಕ ಸಂಪರ್ಕದಿಂದ ಯಾರೊಬ್ಬರಿಗೂ ಸೋಂಕು ತಗಲದೇ ಇರುವುದು ವಿಶೇಷವಾಗಿದೆ.

ಮಂಗಳವಾರ ಜಿಲ್ಲೆಯಲ್ಲಿ ಒಟ್ಟು 374 ಮಂದಿಗೆ ಕೋವಿಡ್–19 ದೃಢವಾಗಿದ್ದು, 232 ಮಂದಿ ಗುಣಮುಖರಾಗಿದ್ದಾರೆ. ಮೂವರು ಮೃತಪಟ್ಟಿದ್ದು, ಅವರಿಗೆ ಕೋವಿಡ್–19 ಇರುವುದು ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಮಂಗಳೂರು ತಾಲ್ಲೂಕಿನಲ್ಲಿ 219, ಬಂಟ್ವಾಳ 61, ಪುತ್ತೂರು 36, ಸುಳ್ಯ 6, ಬೆಳ್ತಂಗಡಿ ತಾಲ್ಲೂಕಿನಲ್ಲಿ 32 ಹಾಗೂ ಬೇರೆ ಜಿಲ್ಲೆಯ 20 ಮಂದಿ ಸೇರಿದ್ದಾರೆ. 236 ಮಂದಿಯಲ್ಲಿ ಶೀತ ಜ್ವರ (ಐಎಲ್‌ಐ) ಹಾಗೂ 18 ಜನರಲ್ಲಿ ತೀವ್ರ ಉಸಿರಾಟದ ತೊಂದರೆ (ಎಸ್‌ಎಆರ್‌ಐ)ಯಿಂದ ಕೋವಿಡ್‌–19 ದೃಢವಾಗಿದೆ. 120 ಮಂದಿಯ ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಸೋಂಕಿತರ ಪೈಕಿ 164 ಪುರುಷರು ಹಾಗೂ 90 ಮಹಿಳೆಯರು ಸೇರಿದಂತೆ 254 ಜನರಲ್ಲಿ ರೋಗ ಲಕ್ಷಣಗಳು ಕಂಡು ಬಂದಿವೆ.

60 ಪುರುಷರು ಹಾಗೂ 60 ಮಹಿಳೆಯರು ಸೇರಿದಂತೆ 120 ಜನರಲ್ಲಿ ರೋಗ ಲಕ್ಷಣಗಳಿಲ್ಲ.

232 ಗುಣಮುಖ: ಜಿಲ್ಲೆಯಲ್ಲಿ ಮಂಗಳವಾರ 232 ಜನರು ಗುಣಮುಖರಾಗಿದ್ದು, ಅವರನ್ನು 14 ದಿನಗಳ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿದ್ದ 35, ಹೋಂ ಐಸೋಲೇಷನ್‌ನಲ್ಲಿದ್ದ 148 ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 49 ಜನರ ಗಂಟಲು ದ್ರವದ ಮಾದರಿ ವರದಿ ನೆಗೆಟಿವ್‌ ಬಂದಿದೆ.

3 ಸಾವು: ಜಿಲ್ಲೆಯಲ್ಲಿ ಮೂವರು ಮೃತಪಟ್ಟಿದ್ದು, ಅವರಿಗೆ ಕೋವಿಡ್‌–19 ಇರುವುದು ಪತ್ತೆಯಾಗಿದೆ. ಪುತ್ತೂರು ತಾಲ್ಲೂಕಿನ ಒಬ್ಬರು ಹಾಗೂ ಬೇರೆ ಜಿಲ್ಲೆಗಳ ಇಬ್ಬರು ಮೃತಪಟ್ಟಿದ್ದಾರೆ.

ಕಾಸರಗೋಡು: 166 ಪ್ರಕರಣ

ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 166 ಮಂದಿಗೆ ಕೋವಿಡ್‌–19 ದೃಢವಾಗಿದೆ. 163 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಹೊರರಾಜ್ಯದಿಂದ ಬಂದ ಒಬ್ಬರು, ವಿದೇಶದಿಂದ ಬಂದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. 92 ಮಂದಿ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT