ವಿಟ್ಲ: ಕೃಷಿ ಶ್ರೇಷ್ಠವಾಗಿದ್ದು, ಹೃದಯಕ್ಕೂ, ಭೂಮಿಯಲ್ಲೂ ಕೃಷಿ ನಡೆಯಬೇಕು. ಅಂತರಂಗದ ಕೃಷಿ, ಅಧ್ಯಾತ್ಮದ ಕೃಷಿ ಜತೆಯಾಗಿ ನಡೆಯಬೇಕು. ಆಧ್ಯಾತ್ಮದ ಜಾಗೃತಿಯಿಂದ ಬದುಕು ಸುಂದರವಾಗುತ್ತದೆ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಬನಾರಿಯಲ್ಲಿರುವ ಒಡಿಯೂರು ಸಂಸ್ಥಾನದ ಸಾಗುವಳಿ ಭೂಮಿಯಲ್ಲಿ ಒಡಿಯೂರು ಶ್ರೀಗಳ ಜನ್ಮದಿನೋತ್ಸವ - ಗ್ರಾಮೋತ್ಸವದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಕೆಸರ್ದ ಕಂಡೊಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಸಮಾಜದ ಒಳಿತಿಗಾಗಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮಣ್ಣಿನ ಸ್ನಾನಕ್ಕೆ ಆಯುರ್ವೇದದಲ್ಲಿ ವಿಶೇಷ ಸ್ಥಾನವಿದ್ದು, ಕೃಷಿಚಟುವಟಿಕೆಯ ಮೂಲಕ ಇದನ್ನು ಮಾಡಬೇಕು ಎಂದರು.

ಶ್ರೀಗಳು ಎಸೆದ ತೆಂಗಿನ ಕಾಯಿ ತ್ವರಿತವಾಗಿ ಹುಡುಕುವ ಮೂಲಕ ನಗದು ಬಹುಮಾನವನ್ನು ಕೀರ್ತನ್ ರೈ ಪಡೆದುಕೊಂಡರು. ನಿಧಿ ಶೋಧ ಸೇರಿ ವಿವಿಧ ವಿಭಾಗಗಳ ಮೂಲಕ ಆಟೋಟಗಳು ನಡೆದವು.

ಸಾಧ್ವಿ ಮಾತಾನಂದಮಯಿ ಸಾನ್ನಿಧ್ಯ ವಹಿಸಿದ್ದರು. ಜನ್ಮದಿನೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಎ.ಸುರೇಶ್ ರೈ, ಸಂಘಟನಾ ಕಾರ್ಯದರ್ಶಿ ನವನೀತ್ ಶೆಟ್ಟಿ ಕದ್ರಿ, ಕ್ರೀಡಾಕೂಟದ ಸಂಚಾಲಕ ಶಶಿಧರ ಶೆಟ್ಟಿ ಜಮ್ಮದ ಮನೆ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಪ್ರಮುಖರಾದ ಕೃಷ್ಣ ಶೆಟ್ಟಿ, ಲೋಕನಾಥ ಶೆಟ್ಟಿ, ಒಡಿಯೂರು ಐಟಿಐ ಪ್ರಾಂಶುಪಾಲ ಪ್ರವೀಣ್, ಯೋಜನೆಯ ನಿರ್ದೇಶಕ ಕಿರಣ್ ಉರ್ವ, ಗುರುದೇವ ವಿದ್ಯಾಪೀಠದ ಮುಖ್ಯ ಶಿಕ್ಷಕಿ ರೇಣುಕಾ ಎಸ್.ರೈ, ತೀರ್ಪುಗಾರರಾದ ಚಂದ್ರಹಾಸ ಅಳಿಕೆ, ರವೀಂದ್ರ ಚೆಂಡುಕಳ ಭಾಗವಹಿಸಿದ್ದರು.

ಯಶವಂತ ವಿಟ್ಲ ಸ್ವಾಗತಿಸಿದರು. ಗಣಪತಿ ಭಟ್ ಸೇರಾಜೆ ವಂದಿಸಿದರು. ದೇವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.