ಅಲ್ಪ ಪ್ರಮಾಣದ ಮರಳು ಮತ್ತು ಕೆಲವೇ ಕೆಲವು ಕಲ್ಲುಗಳು ಉಳಿದುಕೊಂಡಿರುವುದರಿಂದ ಕಟ್ಟಡದ ಕೆಲಸ ಸ್ಥಗಿತಗೊಂಡಿರುವುದು
ಸ್ಯಾಂಡ್ ಬಜಾರ್ ಅ್ಯಾಪ್ ಮೂಲಕ ತರಿಸಿದ ಮರಳನ್ನು ಗಾಳಿಸಿಯೇ ಬಳಸಬೇಕಾದ ಪರಿಸ್ಥಿತಿ ಎಂದು ದೂರಲಾಗಿದೆ
ಎಲ್ಲವನ್ನೂ ಕಾನೂನುಬದ್ಧಗೊಳಿಸಲು ಪ್ರಯತ್ನ ನಡೆಯುತ್ತಿದೆ. ಸರ್ಕಾರದ ಮಟ್ಟದಲ್ಲೇ ಇದು ಆಗಬೇಕು. ಹೀಗಾಗಿ ಇನ್ನೂ ಸುಮಾರು ಒಂದು ತಿಂಗಳ ವರೆಗೆ ಪರಿಸ್ಥಿತಿ ಹೀಗೆಯೇ ಮುಂದುವರಿಯುವ ಸಾಧ್ಯತೆ ಇದೆ.
ರಾಜು ಹೆಚ್ಚುವರಿ ಜಿಲ್ಲಾಧಿಕಾರಿ
ಸ್ಯಾಂಡ್ ಬಜಾರ್‌ನಲ್ಲಿ ಸಿಗುವ ಮರಳಿನ ಗುಣಮಟ್ಟ ಚೆನ್ನಾಗಿಲ್ಲ. ಆದ್ದರಿಂದ ಗಾಳಿಸಿದ ನಂತರ ಸಿಗುವುದು ಅಲ್ಪಪ್ರಮಾಣ. ಗಾಳಿಸಲು ಎರಡು ದಿನ ಇಬ್ಬರಿಗೆ ಕೂಲಿ ಕೊಡಬೇಕು. ನಾವು ಹೇಳಿದ ಸಮಯದಲ್ಲಿ ತಂದು ಹಾಕುವುದೂ ಇಲ್ಲ.
ಲತೀಫ್ ಗುತ್ತಿಗೆದಾರ ತುಂಬೆ
ಅನೇಕ ಮೇಸ್ತ್ರಿಗಳು ಸೆಂಟ್ರಿಂಗ್ ಮತ್ತು ಇತರ ಕೆಲಸದ ಸಾಮಗ್ರಿಗಳನ್ನು ನನ್ನ ವಾಹನದಲ್ಲೇ ಸಾಗಿಸುತ್ತಿದ್ದರು. ಈಗ ಬಾಡಿಗೆಗೆ ಕರೆಯುವುದು ಕಡಿಮೆಯಾಗಿದೆ. ಆದ್ದರಿಂದ ಕೆಲಸವೇ ಇಲ್ಲ. ಬೇರೆ ಕೆಲಸ ಗೊತ್ತೂ ಇಲ್ಲ.
ಸಚಿನ್ ಟೆಂಪೊ ಚಾಲಕ ಪಾಣೆಮಂಗಳೂರು
ವಾಸ್ತವದಲ್ಲಿ ಹಣ ಮಾಡಿಕೊಂಡರು ಈಗ ಖುಷಿಯಲ್ಲಿದ್ದಾರೆ. ಹಲವರು ಈಗಾಗಲೇ ಕುಟುಂಬಸಮೇತರಾಗಿ ಪ್ರವಾಸಕ್ಕೆ ಹೋಗಿದ್ದಾರೆ. ನಿತ್ಯ ದುಡಿದು ತಿನ್ನುವವರಿಗೆ ಮತ್ತು ಸಣ್ಣ ಗುತ್ತಿಗೆದಾರರಿಗೆ ಸಮಸ್ಯೆಯಾಗಿದೆ.