ಗುರುವಾರ , ಆಗಸ್ಟ್ 5, 2021
26 °C

ದಕ್ಷಿಣ ಕನ್ನಡ: ಈಶ್ವರಮಂಗಲ ಬಳಿ ಮನೆಯ ಕೊಟ್ಟಿಗೆ ‌ಚಾವಣಿ ಮೇಲೆ‌ ಉರುಳಿದ ಬಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

KSRTC Bus

ಮಂಗಳೂರು: ಪುತ್ತೂರಿನಿಂದ ಈಶ್ವರಮಂಗಲ ಕಡೆಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸೊಂದು ಈಶ್ವರಮಂಗಲದ ಸಮೀಪ ಸಾಂತ್ಯ ಎಂಬಲ್ಲಿ ಚಾಲಕ ನಿಯಂತ್ರಣ ತಪ್ಪಿ ಮನೆಯೊಂದರ ಕೊಟ್ಟಿಗೆಯ ಮೇಲ್ಚಾವಣಿ ಮೇಲೆ ಬಿದ್ದಿದೆ.‌

ಘಟನೆಯಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಅಲ್ಪ ಸ್ವಲ್ಪ ಗಾಯವಾಗಿದೆ. ಉಳಿದಂತೆ ಬಸ್‌ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಈಶ್ವರಮಂಗಲದ ಸಾಂತ್ಯ ಎಂಬಲ್ಲಿನ ತಿರುವಿನಲ್ಲಿ ಈ ಬುಧವಾರ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರಣ ಬಸ್ ಉರುಳಿ ಬಿದ್ದಿದೆ. ಸುಮಾರು 20 ಅಡಿಯಷ್ಟು ಕೆಳಗಿರುವ ಮನೆಯ ಕೊಟ್ಟಿಗೆಯ ಚಾವಣಿಯ ಮೇಲೆ ಸರಕಾರಿ ಬಸ್ ಉರುಳಿ ಬಿದ್ದಿದೆ.

ಬಸ್ ಉರುಳಿ ಬಿದ್ದ ಜಾಗದಲ್ಲಿ ಮನೆಮಂದಿ ಯಾರೂ ಇರದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಕೋವಿಡ್ ಕಳವಳದ ಕಾರಣ ಬಸ್ ನಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇರಲಿಲ್ಲ ಎನ್ನಲಾಗಿದೆ. ಸದ್ಯ ಬಸ್ ಮೇಲೆತ್ತುವ ಕಾರ್ಯಾಚರಣೆ ನಡೆಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು