ಶನಿವಾರ, ಏಪ್ರಿಲ್ 1, 2023
32 °C

ಶರಣ್‌ ಪಂಪ್‌ವೆಲ್‌ ಬಂಧನಕ್ಕೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಳ್ಳಾಲ: ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತಿಕಾರವಾಗಿ ಮೊಹಮ್ಮದ್ ಫಾಝಿಲ್ ಅವರನ್ನು ನಾವೇ ಕೊಲೆ ಮಾಡಿರುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿರುವ ಶರಣ್ ಪಂಪ್‌ವೆಲ್ ಅವರನ್ನು ಕೂಡಲೇ ಬಂಧಿಸಿ, ಕಾನೂನಿನ‌ ಅಡಿಯಲ್ಲಿ ಮೊಕದ್ದಮೆ ದಾಖಲಿಸಬೇಕು ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಳ್ಳಾಲ ಠಾಣೆಗೆ ಮನವಿ ನೀಡಲಾಯಿತು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಸುರೇಶ್ ಭಟ್ನಗರ, ರಹ್ಮಾನ್ ಕೋಡಿಜಾಲ್, ಕರ್ನಾಟಕ ಪ್ರದೇಶ್ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಖಾ ಚಂದ್ರಹಾಸ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಕೆ. ರಹ್ಮಾನ್ ಕೋಡಿಜಾಲ್, ಅಚ್ಚುತ ಗಟ್ಟಿ, ಉಳ್ಳಾಲ ಬ್ಲಾಕ್ ಹಿಂದುಳಿದ ವರ್ಗಗಳ ಅಧ್ಯಕ್ಷ ದೀಪಕ್ ಪಿಲಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಿಕಾ ರೈ, ಸೇವಾದಳ ಅಧ್ಯಕ್ಷ ರೂಪೇಶ್ ಭಟ್‌ನಗರ, ಕಿಸಾನ್ ಘಟಕದ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಪಿಲಾರ್, ತಾಲ್ಲೂಕು ಪಂಚಾಯಿತಿ ಮಾಜಿ ಅದ್ಯಕ್ಷ ಮೊಹಮ್ಮದ್ ಮೋ‌ನು, ಸಿದ್ದೀಕ್ ತಲಪಾಡಿ, ಜಬ್ಬಾರ್ ಬೋಳಿಯಾರ್, ಅಯ್ಯೂಬ್ ಮಂಚಿಲ, ಮುಹಮ್ಮದ್ ಮುಕ್ಕಚ್ಚೇರಿ, ಭಾರತಿ, ಝಕರಿಯ್ಯಾ ಮಲಾರ್, ಹಾರೀಸ್ ಕೋಡಿಜಾಲ್, ಮೊಯಿದ್ದೀನ್ ಬಾವ ಕೆ.ಸಿ.ರೋಡ್, ವಿಶಾಲ್ ಕೊಲ್ಯ, ದೇವಣ್ಣ ಶೆಟ್ಟಿ, ಸಾಜಿದ್ ಉಳ್ಳಾಲ್, ಹಸನ್ ಕುಂಞಿ, ದನು ಗಟ್ಟಿ, ರಾಜು ಭಂಡಶಾಲೆ, ಮೊಹಮ್ಮದ್ ಬೋಳಿಯಾರ್, ಪ್ರೇಮಾ, ಮೀರಾ, ವಾರಿಜ, ಪ್ರಭಾವತಿ ಶೆಟ್ಟಿ, ತಾಯಿರಾ, ಸಫಿಯಾ, ಮನೋರಮಾ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು