ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೋರುವ ಡಿಸಿ ಕಚೇರಿ: ಹೊಸ ಕಟ್ಟಡ ಅರೆಬರೆ

Published 13 ಜೂನ್ 2024, 16:11 IST
Last Updated 13 ಜೂನ್ 2024, 16:11 IST
ಅಕ್ಷರ ಗಾತ್ರ

ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್ ವೃತ್ತದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಕಟ್ಟಡವು ಹಲವಾರು ಕಡೆಗಳಲ್ಲಿ ಸೋರುತ್ತಿದೆ. ಹೊಸ ಕಟ್ಟಡ ಇದ್ದರೂ ಅರೆಬರೆ ಕಾಮಗಾರಿಯ ಕಾರಣಕ್ಕೆ ಬಳಕೆಗೆ ಬಾರದಂತಾಗಿದೆ.

ಹಳೆಯದಾಗಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ವಿವಿಧ ಕೊಠಡಿಗಳು ಜೋರು ಮಳೆ ಬಂದಾಗ ಸೋರುತ್ತವೆ. ಅಲ್ಲಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ. ಹೊಸ ಕಟ್ಟಡ ಪೂರ್ಣಗೊಂಡು ಕಚೇರಿ ಅಲ್ಲಿಗೆ ಸ್ಥಳಾಂತರಗೊಳ್ಳುವ ನಿರೀಕ್ಷೆಯಲ್ಲಿ ಹಳೆ ಕಟ್ಟಡವೂ ದುರಸ್ತಿ ಕಾಣುತ್ತಿಲ್ಲ ಎಂಬುದು ಅಲ್ಲಿನ ಸಿಬ್ಬಂದಿ ಅಳಲು.

2014ರಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತ ನಂತರ ಪಡೀಲ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಾಮಗಾರಿ ಆರಂಭವಾಗಿದೆ. ಇದಕ್ಕೆ ₹55 ಕೋಟಿ ವೆಚ್ಚ ಮಾಡಲಾಗಿದೆ. ಪೂರ್ಣಗೊಳ್ಳಲು ಇನ್ನೂ ₹32 ಕೋಟಿ ಅನುದಾನದ ಅಗತ್ಯ ಇದೆ. ಹೀಗಾಗಿ, ಕಾಮಗಾರಿ ನನೆಗುದಿಗೆ ಬಿದ್ದಿದೆ. ಅರೆಬರೆಯಾಗಿರುವ ಕಟ್ಟಡದಲ್ಲಿ ಮಳೆ ಬಂದಾಗ ನೀರು ನುಗ್ಗುತ್ತದೆ. ಸುತ್ತಲೂ ಗಿಡ–ಗಂಟಿಗಳು ಬೆಳೆದು ನಿಂತಿವೆ. ಮಳೆ ನೀರಿನಿಂದ ಗೋಡೆಗಳು ಪಾಚಿಗಟ್ಟಿವೆ. ಕಾಮಗಾರಿ ವಿಳಂಬ ಆಗುತ್ತಿದ್ದರೆ, ನಿರ್ಮಾಣವಾಗಿರುವ ಭಾಗವೂ ಶಿಥಿಲಗೊಳ್ಳುತ್ತದೆ. ಸ್ಮಾರ್ಟ್ ಸಿಟಿ ಅನುದಾನದಲ್ಲಿ ಒಂದು ಮಹಡಿಯನ್ನಾದರೂ ಪೂರ್ಣಗೊಳಿಸಿ, ಕಚೇರಿ ಸ್ಥಳಾಂತರಿಸುವ ಬಗ್ಗೆ ಚರ್ಚೆ ನಡೆಯುತ್ತಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘2021ರಲ್ಲಿ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಎರಡನೇ ಹಂತದ ಕಾಮಗಾರಿ ವಿಳಂಬವಾಗಿದೆ. ಕಳೆದ ಆಗಸ್ಟ್‌ನಲ್ಲಿ ನಗರಕ್ಕೆ ಭೇಟಿ ನೀಡಿದ್ದ ಕಂದಾಯ ಸಚಿವರು ಅನುದಾನ ಒದಗಿಸುವ ಭರವಸೆ ನೀಡಿದ್ದರು. ಆದರೆ, ಯಾವುದೇ ಪ್ರಗತಿ ಕಂಡಿಲ್ಲ’ ಎಂದು ಅವರು ಬೇಸರಿಸ

ಹೊಸ ಕಟ್ಟಡ ಪೂರ್ಣಗೊಳಿಸಿ ಕಚೇರಿ ಸ್ಥಳಾಂತರಿಸಲು ಪ್ರಯತ್ನಗಳು ನಡೆಯುತ್ತಿವೆ. ನಡುವೆ ಚುನಾವಣೆ ಕಾರ್ಯ ಬಂದಿದ್ದರಿಂದ ಸ್ವಲ್ಪ ವಿಳಂಬವಾಗಿದೆ.
-ಮುಲ್ಲೈ ಮುಗಿಲನ್ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT