ಮಂಗಳವಾರ, ಜೂನ್ 2, 2020
27 °C

ನಾಪತ್ತೆಯಾಗಿದ್ದ ಅಪ್ಪ, ಮಗನ ಶವ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಫೆಬ್ರುವರಿ 16ರ ನಸುಕಿನ ಜಾವ ಇಲ್ಲಿನ ಕಲ್ಲಾಪು ಬಳಿಯ ನೇತ್ರಾವತಿ ಸೇತುವೆ ಮೇಲೆ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಬಂಟ್ವಾಳ ತಾಲ್ಲೂಕಿನ ಬಾಳ್ತಿಲ ನಿವಾಸಿ ಗೋಪಾಲಕೃಷ್ಣ ರೈ (55) ಮತ್ತು ಅವರ ಮಗ ನಮೀಶ್‌ ರೈ (6) ಶವ ಉಡುಪಿ ಜಿಲ್ಲೆ ಕಟಪಾಡಿ ಸಮೀಪದ ಪಡುಕೆರೆ ಸಮುದ್ರ ಕಿನಾರೆಯಲ್ಲಿ ಶುಕ್ರವಾರ ರಾತ್ರಿ ಪತ್ತೆಯಾಗಿದೆ.

ಮುಂಬೈನಲ್ಲಿ ಹೋಟೆಲ್‌ ಉದ್ಯಮಿಯಾಗಿದ್ದ ಗೋಪಾಲಕೃಷ್ಣ ರೈ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಫೆ. 16ರ ನಸುಕಿನ ಜಾವ ‘ಮರಣ ಪತ್ರ’ ಬರೆದಿಟ್ಟು ಮಗನೊಂದಿಗೆ ನಾಪತ್ತೆಯಾಗಿದ್ದರು. ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. 12 ದಿನಗಳಾದರೂ ಸುಳಿವು ಸಿಕ್ಕಿರಲಿಲ್ಲ.

ಶುಕ್ರವಾರ ರಾತ್ರಿ ವೇಳೆಗೆ ಅಪ್ಪ ಮತ್ತು ಮಗನ ಮೃತ ದೇಹಗಳು ಪಡುಕೆರೆ ಕಿನಾರೆಯಲ್ಲಿ ತೇಲಿ ಬಂದಿವೆ. ಪೋಷಕರೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರು ಇಬ್ಬರ ಗುರುತು ಪತ್ತೆ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು