ಮಂಗಳವಾರ, ಸೆಪ್ಟೆಂಬರ್ 28, 2021
21 °C

ಧರ್ಮಸ್ಥಳ: ವಸತಿಗಾಗಿ ಯಾತ್ರಿಕರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಜಿರೆ: ಭಾನುವಾರ ರಾತ್ರಿ ಧರ್ಮಸ್ಥಳಕ್ಕೆ ಬಂದ ಯಾತ್ರಿಕರು ಊಟ, ವಸತಿ ಇಲ್ಲದೆ ಪರದಾಡಬೇಕಾಯಿತು. ಜಿಲ್ಲಾಡಳಿತದ ನಿರ್ದೇಶನದಂತೆ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದೆ. ಸೇವೆ ಹಾಗೂ ಪ್ರಸಾದಕ್ಕೆ ಅವಕಾಶವಿಲ್ಲ. ಊಟ, ವಸತಿ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ.

ಜಡಿ ಮಳೆಯ ನಡುವೆ ಯಾತ್ರಿಕರು ಅಂಗಡಿ-ಮುಗ್ಗಟ್ಟುಗಳ ಎದುರು ಮಲಗಿ ರಾತ್ರಿ ಕಳೆದರು. ಕೆಲವರು ಹೊದಿಕೆ ಇಲ್ಲದೆ ಜಾಗರಣೆ ಮಾಡಿದರು. ಧರ್ಮಸ್ಥಳದಲ್ಲಿ ಮುಡಿಸೇವೆ (ತಲೆಕೂದಲು ತೆಗೆಯುವುದು)ಗೂ ಅವಕಾಶವಿಲ್ಲ. ಹಾಗಾಗಿ ಬಂದವರೆಲ್ಲ ಉಜಿರೆಗೆ ಹೋಗೆ ಸೆಲೂನ್‍ಗಳಲ್ಲಿ ತಲೆ ಕೂದಲು ತೆಗೆಸಿದರು. ಉಜಿರೆಯಲ್ಲಿ ಎಲ್ಲ ಹೋಟೆಲ್‍ಗಳ ಕೊಠಡಿಗಳೂ ಭರ್ತಿಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.