ಮಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 21 ಶಿಕ್ಷಕರನ್ನು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿಭಾಗಗಳಿಂದ ತಲಾ ಒಬ್ಬರು ಶಿಕ್ಷಕರಂತೆ ಪ್ರತಿ ತಾಲ್ಲೂಕು/ ವಲಯದಲ್ಲಿ ಮೂವರು ಶಿಕ್ಷಕರು ಈ ಮನ್ನಣೆಗೆ ಪಾತ್ರರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದಪುತ್ತೂರು ತಾಲ್ಲೂಕಿ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇದೇ 5ರಂದು ಬೆಳಿಗ್ಗೆ 10ರಿಂದ ಏರ್ಪಡಿಸಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ವಿವರ ಇಂತಿದೆ:

ಬೆಳ್ತಂಗಡಿ ವಲಯ: ನೆಕ್ಕಿಲ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಬಸನಗೌಡ ಎಸ್.ಬಿರಾದಾರ; ಗುತ್ಯಡ್ಕ, ಎಳನೀರು ಹಿರಿಯ ಪ್ರಾಥಮಿಕ ಶಾಲೆಯಪ್ರಭಾರ ಮುಖ್ಯ ಶಿಕ್ಷಕ ರವೀಂದ್ರ ಡಿ.ಎನ್.; ಕೊಯ್ಯೂರು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ರಾಮಚಂದ್ರ ದೊಡಮನಿ

ಬಂಟ್ವಾಳ ತಾಲ್ಲೂಕು: ನೆಟ್ಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪ್ರವೀಣ ಬಿ. (ಕಿರಿಯ ಪ್ರಾಥಮಿಕ ವಿಭಾಗ); ಮೂಡುಪಡುಕೋಡಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸುನಿಲ್ ಸೀಕ್ವೆರಾ; ಸಾಲೆತ್ತೂರು ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಘವೇಂದ್ರ.

ಮಂಗಳೂರು ಉತ್ತರ ವಲಯ: ಕೆಂಜಾರು ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ರೋಸ್ಲಿನ್ ಆರ್.ಎಸ್ (ಕಿರಿಯ ಪ್ರಾಥಮಿಕ ವಿಭಾಗ); ಮರಕಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರೇತರ ಮುಖ್ಯ ಶಿಕ್ಷಕಿ ನೇತ್ರಾವತಿ ಎ.; ಡೊಂಗರಕೇರಿ ಅನುದಾನಿತ ಕೆನರಾ ಪ್ರೌಢಶಾಲೆಯ ಚಿತ್ರಕಲಾ ಸಹ ಶಿಕ್ಷಕಿ ರಾಜೇಶ್ವರಿ ಕೆ.

ಮಂಗಳೂರು ದಕ್ಷಿಣ ವಲಯ: ಪಾವೂರು ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಅಬ್ದುಲ್ ಮಜೀದ್ ಎಂ. (ಕಿರಿಯ ಪ್ರಾಥಮಿಕ ವಿಭಾಗ); ಬಗಂಬಿಲ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ವಸಂತ ರೈ ಬಿ.ಕೆ.; ಪದುವ ಅನುದಾನಿತ ಪ್ರೌಢಶಾಲೆಯ ಸಹ ಶಿಕ್ಷಕ ಸ್ಟೇನಿ ಗೇಬ್ರಿಯಲ್ ತಾವ್ರೊ.

ಮೂಡುಬಿದ್ರೆ ವಲಯ: ಕಂಚರ್ಲಗುಡ್ಡೆ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸುಜಾತಾ; ಮೂಡುಮಾರ್ನಾಡು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ಡಿಸೋಜ; ಅಳಿಯೂರು ಪ್ರೌಢಶಾಲೆಯ ಸಹ ಶಿಕ್ಷಕ ಸುಬ್ರಹ್ಮಣ್ಯ ವಿ.

ಪುತ್ತೂರು ತಾಲ್ಲೂಕು: ಮೀನಡಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಗೋವಿಂದ ನಾಯ್ಕ ಬಿ.; ಪಾಪೆಮಜಲು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ತೆರೇಜ್ ಎಂ.ಸಿಕ್ವೇರಾ; ಸರ್ವೆ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಜಯರಾಮ ಶೆಟ್ಟಿ

ಸುಳ್ಯ ತಾಲ್ಲೂಕು: ಕೇನ್ಯ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ರೇವತಿ ಕೊಡಿಪಾಡಿ; ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪದವೀಧರ ಮುಖ್ಯ ಶಿಕ್ಷಕ ಮಾಯಿಲ ಮೇರ ಯಾನೆ ಜಿ.ಮಾಯಿಲಪ್ಪ; ಪಂಜ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ ಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.