ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 2022-23ನೇ ಸಾಲಿನಯುವಜನೋತ್ಸವವನ್ನು ಇದೇ 27ರಂದು ಶಿಬರೂರಿನ ಪದ್ಮಾವತಿ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಹಾಗೂ ಮಂಗಳೂರು ತಾಲ್ಲೂಕು ಯುವಜನ ಒಕ್ಕೂಟ, ಸೂರಿಂಜೆ ಗ್ರಾಮ ಪಂಚಾಯಿತಿ, ಶಿಬರೂರಿನ ದೇಲಂತಬೆಟ್ಟು ಯುವಕ ಹಾಗೂ ಮಹಿಳಾ ಮಂಡಲದ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಯುವಜನರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಆಸಕ್ತ ಯುವಕ, ಯುವತಿಯರು ಅಂದು ಬೆಳಿಗ್ಗೆ 8 ಗಂಟೆಗೆ ಕಾರ್ಯಕ್ರಮದ ಸ್ಥಳದಲ್ಲಿ ಹೆಸರು ನೋಂದಾಯಿಸಬಹುದು. ಸ್ಪರ್ಧಾಳುಗಳು 15 ರಿಂದ 29 ವರ್ಷದೊಳಗಿನವರಾಗಿರಬೇಕು. ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ಜಿಲ್ಲೆಯಲ್ಲೇ ವಾಸವಾಗಿರಬೇಕು. ಜನ್ಮ ದಿನಾಂಕ ದೃಢೀಕರಣಕ್ಕೆ ದಾಖಲೆಯನ್ನು ಹಾಜರುಪಡಿಸಬೇಕು ಎಂದುಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಧೆಗಳ ವಿವರ: ಗುಂಪು ಸ್ಪರ್ಧೆಗಳು: ಜಾನಪದ ನೃತ್ಯ, ಜಾನಪದ ಗೀತೆ, 4ರಿಂದ 8 ಮಂದಿ ಭಾಗವಹಿಸಬಹುದು. 10 ನಿಮಿಷ ಕಾಲಾವಕಾಶ. ವೈಯಕ್ತಿಕ ಸ್ಪರ್ಧೆ: ಕನ್ನಡ, ಇಂಗ್ಲಿಷ್ ಅಥವಾ ಹಿಂದಿಯ ಏಕಾಂಕ ನಾಟಕ ಸ್ಪರ್ಧೆ: 5 ನಿಮಿಷ ಕಾಲಾವಕಾಶ, ಒಬ್ಬರಿಗೆ ಅವಕಾಶ.
ಶಾಸ್ತ್ರೀಯ ಗಾಯನ (ಕರ್ನಾಟಕ, ಹಿಂದೂಸ್ತಾನಿ): ಒಬ್ಬರಿಗೆ 15 ನಿಮಿಷ, ಶಾಸ್ತ್ರೀಯ ವಾದ್ಯಗಳಾದ ಸಿತಾರ್, ಕೊಳಲು, ವೀಣೆ, ತಬಲಾ, ಮೃದಂಗ ಬಳಸಬಹುದು. ಒಬ್ಬರಿಗೆ 10 ನಿಮಿಷ. ಶಾಸ್ತ್ರೀಯ ನೃತ್ಯ (ಭರತನಾಟ್ಯ, ಓಡಿಸ್ಸಿ, ಮಣಿಪುರಿ, ಕೂಚುಪುಡಿ, ಕಥಕ್), ಹಾರ್ಮೋನಿಯಂ ಹಾಗೂ ಗಿಟಾರ್ನಲ್ಲಿ ಒಬ್ಬರಿಗೆ 10 ನಿಮಿಷ. ಆಶುಭಾಷಣ ಸ್ಪರ್ಧೆ (ಕನ್ನಡ, ಹಿಂದಿ ಅಥವಾ ಇಂಗ್ಲಿಷ್): ಒಬ್ಬರಿಗೆ 4 ನಿಮಿಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.