ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಣಂಬೂರು: ಸಮುದ್ರ ಪಾಲಾದ ಇಬ್ಬರ ಮೃತದೇಹ ಪತ್ತೆ

Published 5 ಮಾರ್ಚ್ 2024, 5:12 IST
Last Updated 5 ಮಾರ್ಚ್ 2024, 5:12 IST
ಅಕ್ಷರ ಗಾತ್ರ

ಸುರತ್ಕಲ್‌: ಪಣಂಬೂರು ಕಡಲ ಕಿನಾರೆ ಬಳಿ ಭಾನುವಾರ ಸಮುದ್ರ ಪಾಲಾದ ಮೂವರು ಯುವಕರಲ್ಲಿ ಇಬ್ಬರ ಮೃತದೇಹಗಳು ಪಣಂಬೂರು ಸಮೀಪದ ಕೋರಿಕಟ್ಟ ಬಳಿ ಅರಬ್ಬಿಸಮುದ್ರದಲ್ಲಿ ಸೋಮವಾರ ಪತ್ತೆಯಾಗಿವೆ. ಇನ್ನೊಬ್ಬ ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

‘ನಿರು ಪಾಲಾಗಿದ್ದ ಮಿಲನ್‌ (20 ವರ್ಷ) ಹಾಗೂ ನಾಗರಾಜ್‌ (24) ಅವರ ಮೃತದೇಹಗಳು ಪತ್ತೆಯಾಗಿದೆ. ಲಖಿತ್‌ (18) ಅವರಿಗಾಗಿ ಸೋಮವಾರ ದಿನವಿಡಿ ಸ್ಥಳೀಯ ಮೀನುಗಾರರು, ಇಲಾಖೆ ಸಿಬ್ಬಂದಿ ಅರಬ್ಬಿ ಸಮುದ್ರದಲ್ಲಿ ಹುಡುಕಾಟ ನಡೆಸಿದ್ದಾರೆ. ಅವರ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ಶೋಧ ಕಾರ್ಯವನ್ನು ನಾಳೆಯೂ ಮುಂದುವರಿಸಲಿದ್ದೇವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪಣಂಬೂರು ಕಡಲ ಕಿನಾರೆ ಬಳಿ ವಿಹಾರಕ್ಕೆ ತೆರಳಿದ್ದ ಬಜಪೆ ಪೊರ್ಕೋಡಿಯ ಮಿಲನ್‌, ಲಿಖಿತ್ ಹಾಗೂ ನಾಗರಾಜ ಸಮುದ್ರ ಪಾಲಾಗಿದ್ದರು. ಮಿಲನ್‌ ಅವರು ಮೀಷೊ ಕಂಪನಿಯ ಸರಕು ವಿತರಕರಾಗಿದ್ದರು. ನಾಗರಾಜ್‌ ಅವರು ಬೈಕಂಪಾಡಿ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿರುವ ಎಂಎಂಆರ್‌ ಕಂಪನಿಯಲ್ಲಿ ಮೇಲ್ವಿಚಾರಕರಾಗಿದ್ದರು. ಲಿಖಿತ್‌ ಕೈಕಂಬದ ರೋಸಾ ಮಿಸ್ಟಿಕಾ ಕಾಲೇಜಿನ ಪ್ರಥಮ ಪಿ.ಯು. ವಿದ್ಯಾರ್ಥಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT