ಗುರುವಾರ , ಮೇ 26, 2022
24 °C
ರಸ್ತೆ ದುರವಸ್ಥೆ: ಡಿವೈಎಫ್‌ಐಯಿಂದ ಪ್ರತಿಕೃತಿ ದಹಿಸಿ ಪ್ರತಿಭಟನೆ, ಆಕ್ರೋಶ

ಕಾನ: ರಸ್ತೆ ದುರಸ್ತಿಗೆ 15 ದಿನ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರತ್ಕಲ್‌: ಕಾನ, ಸುರತ್ಕಲ್, ಎಂಆರ್‌ಪಿಎಲ್, ಜನತಾ ಕಾಲೊನಿ ರಸ್ತೆ ಹದಗೆಟ್ಟಿದ್ದು, ಗುಂಡಿಗಳನ್ನು ಮುಚ್ಚದ ಮಹಾನಗರ ಪಾಲಿಕೆ ಬೇಜವಾಬ್ದಾರಿತನ ಖಂಡಿಸಿ, ಕಾನ ಜಂಕ್ಷನ್‌ನಲ್ಲಿ ಡಿವೈಎಫ್ಐ ನೇತೃತ್ವದಲ್ಲಿ ಮೆರವಣಿಗೆ, ಪಾಲಿಕೆ ಪ್ರತಿಕೃತಿ ದಹನ ಪ್ರತಿಭಟನೆ ನಡೆಯಿತು. 15 ದಿನಗಳಲ್ಲಿ ರಸ್ತೆ ದುರಸ್ತಿ ಆಗದಿದ್ದರೆ ಸ್ಥಳೀಯ ಶಾಸಕರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ, ‘ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವುದರಲ್ಲಿ ಶಾಸಕ ಭರತ್ ಶೆಟ್ಟಿ ವಿಫಲರಾಗಿದ್ದಾರೆ. ಹಿಂದಿನ ಶಾಸಕರ ಅವಧಿಯಲ್ಲಿ ಮಂಜೂರಾಗಿದ್ದ ಹೊಸ ರಸ್ತೆ ನಿರ್ಮಾಣ ಯೋಜನೆ ಭರತ್ ಶೆಟ್ಟಿ ಅವರ ನಿರ್ಲಕ್ಷ್ಯದಿಂದ ರದ್ದಾಗಿದೆ. ಸುರತ್ಕಲ್, ಕೃಷ್ಣಾಪುರ ಮಾರುಕಟ್ಟೆ ಕಾಮಗಾರಿಗಳಿಗೂ ತಡೆ ಬಿದ್ದಿದೆ. ಅಭಿವೃದ್ಧಿ ಕಾರ್ಯ ನಡೆಸಲಾಗದ ಭರತ್ ಶೆಟ್ಟರು ಮತೀಯ ಭಾವನೆಗಳನ್ನು ಕೆರಳಿಸಿ ತಮ್ಮ ವೈಫಲ್ಯಗಳನ್ನು ಮುಚ್ಚಿಡಲು ನೋಡುತ್ತಿದ್ದಾರೆ’ ಎಂದು ಆರೋಪಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಬಿ. ಕೆ. ಇಮ್ತಿಯಾಜ್ ಮಾತನಾಡಿದರು. ಡಿವೈಎಫ್ಐ ಪ್ರಮುಖರಾದ ಶ್ರೀನಾಥ್ ಕುಲಾಲ್, ಮಕ್ಸೂದ್ ಬಿ. ಕೆ., ಅಜ್ಮಲ್ ಅಹ್ಮದ್, ಜೋಯ್ ಡಿಸೋಜ, ಮುಹಮ್ಮದ್, ಜಾಯ್, ಅಬೂಬಕ್ಕರ್ ಬಾವಾ, ನವಾಜ್ ಕುಳಾಯಿ, ಗಿರೀಶ್ ಜನತಾಕಾಲೊನಿ, ಮೆಹಬೂಬ್ ಖಾನ್, ಫ್ರಾನ್ಸಿಸ್ ಕಾನ, ಟ್ಯಾಂಕರ್ ಚಾಲಕರ ಸಂಘದ ಅಧ್ಯಕ್ಷ ಬಾಲು, ರಿಕ್ಷಾ ಚಾಲಕರ ಸಂಘದ ಪ್ರಮುಖರಾದ ಹಂಝ, ಇಬ್ರಾಹಿಂ, ಲಕ್ಷ್ಮೀಶ , ಬಶೀರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು