ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಬ್ಬುಕಟ್ಟೆ ಹೊಂಡಮಯ ರಸ್ತೆ: ಭಿತ್ತಿಪತ್ರ ಅಂಟಿಸಿದ ಡಿವೈಎಫ್‌ಐ

Published 25 ಜನವರಿ 2024, 5:26 IST
Last Updated 25 ಜನವರಿ 2024, 5:26 IST
ಅಕ್ಷರ ಗಾತ್ರ

ಉಳ್ಳಾಲ: ತೊಕ್ಕೊಟ್ಟು- ಮಂಗಳೂರು ವಿಶ್ವವಿದ್ಯಾಲಯ ರಸ್ತೆಯ ಬಬ್ಬುಕಟ್ಟೆ ಪ್ರದೇಶದಲ್ಲಿ ಹೊಂಡಗಳಿಂದ ಕೂಡಿರುವ ರಸ್ತೆಯ ದುರಸ್ತಿ ಕಾರ್ಯಕ್ಕೆ ಆಗ್ರಹಿಸಿ ‘ಸ್ಪೀಕರ್ ಖಾದರ್ ಅವರೇ ದುರಸ್ತಿ ಕಾರ್ಯ ಯಾವಾಗ?’ ಎಂದು ಬರೆದಿರುವ ಭಿತ್ತಿಪತ್ರವನ್ನು ರಸ್ತೆಯಲ್ಲಿಟ್ಟಿರುವ ಬ್ಯಾರಿಕೇಡ್‌ಗೆ ಡಿವೈಎಫ್‌ಐನಿಂದ ಅಂಟಿಸಲಾಗಿದೆ.

ವಿ.ವಿ ರಸ್ತೆಯ ಅಭಿವೃದ್ಧಿ ಕಾರ್ಯ ಹಂತಹಂತವಾಗಿ ನಡೆಯುತ್ತಿದೆ. ಕೆಲವೆಡೆ ಸಮರ್ಪಕ ಚರಂಡಿ ಇಲ್ಲದೆ ರಸ್ತೆ ಹೊಂಡಮಯವಾಗಿದೆ. ಮಳೆಗಾಲ ಮುಗಿದರೂ ಹೊಂಡ ಮುಚ್ಚುವ ಕಾರ್ಯಕ್ಕೆ ಗುತ್ತಿಗೆದಾರರು ಮುಂದಾಗಿಲ್ಲ. ವರ್ಷದೊಳಗೆ ರಸ್ತೆ ಹದಗೆಟ್ಟಿರುವುದರ ಹಿಂದೆ ಎಷ್ಟು ಭ್ರಷ್ಟಾಚಾರ ನಡೆದಿದೆ ಅನ್ನುವುದನ್ನು ಭಿತ್ತಿಪತ್ರದಲ್ಲಿ ಬರೆದು ರಸ್ತೆಬದಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT