ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಪ್ಪಿನಂಗಡಿ: ಪೈಗಂಬರರ ಸಂದೇಶ ಪಾಲನೆಗೆ ಆದ್ಯತೆ ನೀಡಿ

ಗಂಡಿಬಾಗಿಲು ಮಸೀದಿಯಲ್ಲಿ ಈದ್-ಮಿಲಾದ್ ಸಮಾರಂಭ
Published : 16 ಸೆಪ್ಟೆಂಬರ್ 2024, 14:29 IST
Last Updated : 16 ಸೆಪ್ಟೆಂಬರ್ 2024, 14:29 IST
ಫಾಲೋ ಮಾಡಿ
Comments

ಉಪ್ಪಿನಂಗಡಿ: ಪ್ರವಾದಿ ಮಹಮ್ಮದ್ ಪೈಗಂಬರರು ಸೌಹಾರ್ದ, ಸಹೋದರತೆ ಹಾಗೂ ಏಕತೆಗೆ ಒತ್ತು ಕೊಟ್ಟಿದ್ದು, ಅವರ ಸಂದೇಶ ಪಾಲನೆಯಾದರೆ ಆದರೆ ಮಾತ್ರ ನೆಬಿ ದಿನ ಆಚರಣೆ ಸಾರ್ಥಕ ಆಗಲು ಸಾಧ್ಯ ಎಂದು ಗಂಡಿಬಾಗಿಲು ಮಸೀದಿ ಖತೀಬ್ ಅಬ್ದುಲ್ ಹಮೀದ್ ಶೌಕತ್ ಅಲಿ ಫೈಝಿ ಹೇಳಿದರು.

ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿಯಲ್ಲಿ ನುಜೂಮುಲ್ ಇಸ್ಲಾಂ ಯಂಗ್‌ಮೆನ್ಸ್‌ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಈದ್-ಮಿಲಾದ್ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಾಹನ ಜಾಥಾ, ಮೆರವಣಿಗೆ: ಗಂಡಿಬಾಗಿಲುನಿಂದ ಹೊರಟ ಮಿಲಾದ್ ಮೆರವಣಿಗೆ ಕೊಯಿಲ, ನೀರಾಜೆ ಮದ್ರಸದಲ್ಲಿ ಸಮಾಗಮಗೊಂಡು ಅಲ್ಲಿಂದ ಕೆಮ್ಮಾರ ಶಾಲೆಯ ಬಳಿಯವರೆಗೆ ಸಾಗಿ ಮರಳಿ ಗಂಡಿಬಾಗಿಲು ಶಾಲೆ ವರೆಗೆ ಸಾಗಿತು. ಅಲ್ಲಿಂದ ಮಸೀದಿ ಬಳಿ ಸಮಾಪನಗೊಂಡಿತು. ಮೆರವಣಿಗೆ ಬಳಿಕ ಮಸೀದಿಯಲ್ಲಿ ಮೌಲೀದ್ ಪಾರಾಯಣ, ಅನ್ನ ಸಂತರ್ಪಣೆ ನಡೆಯಿತು. ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮವನ್ನು ಯಂಗ್‌ಮೆನ್ಸ್‌ ಅಧ್ಯಕ್ಷ ಪಿ.ಲತೀಫ್ ನೆರವೇರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ: ಭಾನುವಾರ ರಾತ್ರಿ ಮದ್ರಸ ಸಭಾಂಗಣದಲ್ಲಿ ಮದ್ರಸ ವಿದ್ಯಾರ್ಥಿಗಳಿಂದ ನೆಬಿವರ್ಯರ ಗುಣಗಾನದ ಹಾಡು, ಮತಪ್ರಭಾಷಣ, ಬುರ್ದ ಮಜ್ಲಿಸ್ ಕಾರ್ಯಕ್ರಮ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಮಸೀದಿ ಅಧ್ಯಕ್ಷ ಆದಂ, ಪ್ರಧಾನ ಕಾರ್ಯದರ್ಶಿ ಎಸ್.ಆದಂ, ಉಪಾಧ್ಯಕ್ಷ ಜಿ.ಮಹಮ್ಮದ್ ರಫೀಕ್, ಖಜಾಂಚಿ ಹಸೈನಾರ್, ಜತೆ ಕಾರ್ಯದರ್ಶಿ ಅಬ್ದುಲ್ ರಜಾಕ್ ಮರ್ವೇಲ್, ಜಿ.ಅಬ್ದುಲ್ ರಜಾಕ್, ನಝೀರ್ ಪೂರಿಂಗ, ಎಸ್.ಅಬ್ದುಲ್ ರಹಿಮಾನ್, ಝಕರಿಯಾ ನೇರೆಂಕಿ, ಎಸ್.ರಜಾಕ್, ಅಬ್ದುಲ್ ರಹಿಮಾನ್ ಅದ್ದ, ಗಂಡಿಬಾಗಿಲು ನುಜೂಮುಲ್ ಇಸ್ಲಾಂ ಯಂಗ್‌ಮೆನ್‌ ಅಧ್ಯಕ್ಷ ಪಿ.ಅಬ್ದುಲ್ ಲತೀಫ್, ಕಾರ್ಯದರ್ಶಿ ಝಿಯಾದ್, ಸದರ್ ಮುಅಲ್ಲಿಂ ಅಬ್ದುಲ್ ರಹಿಮಾನ್ ಫೈಝಿ, ಬದ್ರುದ್ದೀನ್ ಮುಸ್ಲಿಯಾರ್, ಇಬ್ರಾಹಿಂ ಮುಸ್ಲಿಯಾರ್, ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷ ಇಸಾಕ್ ಬೊಲುಂಬುಡ, ಪದಾಧಿಕಾರಿಗಳಾದ ಖಲಂದರ್ ಎಸ್.ಪಿ., ಆಶಿಫ್ ಜಿ.ಎಂ., ಅನಸ್, ರಾಹಿಲ್, ಸಾಕಿರ್, ಮುಸ್ತಫಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT