ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಕಾಡಂಚಿನ ಜನವಸತಿ ಪ್ರದೇಶಗಳಲ್ಲಿ 144 ಕಡೆ ಮಾನವ-ವನ್ಯಪ್ರಾಣಿ ಸಂಘರ್ಷ ಪ್ರಕರಣಗಳು ವರದಿಯಾಗಿದೆ. ಇವುಗಳಲ್ಲಿ ಕಾಡಾನೆ ದಾಳಿಯದ್ದೇ ಸಿಂಹಪಾಲು. ಐದು ವರ್ಷಗಳಿಂದ ಈಚೆಗೆ ಜಿಲ್ಲೆಯಲ್ಲಿ ಆನೆ– ಮಾನವ ಸಂಘರ್ಷದಿಂದ ಏಳು ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಸಂಘರ್ಷವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಜಿಲ್ಲೆಗೂ ಆನೆ ಕಾರ್ಯಪಡೆ ಬೇಕು ಎಂದು ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಕುದುರೆಮುಖ ವನ್ಯಜೀವಿ ವಿಭಾಗ, ಮೂಡಿಗೆರೆ, ಸಕಲೇಶಪುರ, ಬಿಸಿಲೆ, ಪುಷ್ಪಗಿರಿ ವನ್ಯಜೀವಿಧಾಮ, ತಲಕಾವೇರಿ ವನ್ಯಜೀವಿಧಾಮ, ಸಂಪಾಜೆ ಹಾಗೂ ಕೇರಳದ ಗಡಿಗೆ ಹೊಂದಿಕೊಂಡಿರುವ ಮಂಗಳೂರು ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ 95 ಕಿ.ಮೀ. ಉದ್ದದ ಆನೆ ಸಂಚಾರದ ನೈಸರ್ಗಿಕ ಪಥಗಳಿವೆ. ಚಾರ್ಮಾಡಿಯಿಂದ ಸುಳ್ಯದವರೆಗೆ ವ್ಯಾಪಿಸಿರುವ ಈ ಪಥಗಳ ಇಕ್ಕೆಲಗಳಲ್ಲಿ ಜನವಸತಿ ಪ್ರದೇಶ ಹಾಗೂ ಕೃಷಿ ಜಮೀನುಗಳಿವೆ. ಸುಳ್ಯ, ಸುಬ್ರಹ್ಮಣ್ಯ, ಪಂಜ, ಬೆಳ್ತಂಗಡಿ, ಉಪ್ಪಿನಂಗಡಿ ಹಾಗೂ ಪುತ್ತೂರು ವಲಯದ 49 ಗ್ರಾಮಗಳಲ್ಲಿ ಅಂದಾಜು 71 ಆನೆಗಳು ಸಂಚರಿಸುತ್ತಿರುವುದನ್ನು ಅರಣ್ಯ ಇಲಾಖೆ ಪತ್ತೆಹಚ್ಚಿದೆ. ಈ ವಲಯಗಳಲ್ಲಿ 24 ಗ್ರಾಮಗಳಲ್ಲಿ ಆನೆಗಳು ಪದೇ ಪದೇ ಕಾಣಿಸಿಕೊಂಡಿವೆ. 16 ಗ್ರಾಮಗಳಲ್ಲಿ ಕೆಲವೊಮ್ಮೆ ಹಾಗೂ 9 ಗ್ರಾಮಗಳಲ್ಲಿ ಅಪರೂಪಕ್ಕೆ ಒಮ್ಮೊಮ್ಮೆ ಕಾಣಿಸಿಕೊಂಡಿವೆ. ಆನೆಗಳ ಸೆರೆ ಹಿಡಿಯುವ ಹಾಗೂ ಹಿಮ್ಮೆಟ್ಟಿಸುವ ಕಾರ್ಯಾಚರಣೆಗಳನ್ನು ಇಲಾಖೆ ಆಗಾಗ್ಗೆ ನಡೆಸುತ್ತಿರುತ್ತದೆ.

ಜಿಲ್ಲೆಯಲ್ಲಿ ದಟ್ಟ ಅರಣ್ಯ ಪ್ರದೇಶಗಳಲ್ಲಿ ಆನೆ ಕಾರಿಡಾರ್ ಇರುವಲ್ಲಿ ರಾಷ್ಟ್ರೀಯ ಹೆದ್ದಾರಿ 73 (ಚಾರ್ಮಾಡಿ ಘಾಟಿ), ರಾಷ್ಟ್ರೀಯ ಹೆದ್ದಾರಿ 75 (ಶಿರಾಡಿ ಘಾಟಿ), ರಾಷ್ಟ್ರೀಯ ಹದ್ದಾರಿ 273 (ಮಾಣಿ-ಮಡಿಕೇರಿ ಹೆದ್ದಾರಿ) ಹಾದುಹೋಗಿವೆ. ಈ ಹೆದ್ದಾರಿಗಳಲ್ಲಿಆನೆಗಳು ಕಾಣಿಸಿಕೊಂಡ, ವಾಹನ ಸವಾರರ ಮೇಲೆ ದಾಳಿ ನಡೆಸಿದ ಉದಾಹರಣೆಗಳಿವೆ.

ಆನೆ ಕಾರಿಡಾರ್ಗಳಿರುವಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯೂ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಆನೆ ದಾರಿ ಛಿದ್ರವಾಗಿದೆ. ಅಭಿವೃದ್ಧಿ ಚಟುವಟಿಕೆಗೆ ಅರಣ್ಯ ಜಾಗವನ್ನೂ ಬಳಸಲಾಗಿದೆ. ಕಾಡಿನ ವ್ಯಾಪ್ತಿ ಕಡಿಮೆಯಾಗಿದ್ದು, ಕಾಡಾನೆಗಳ ಆವಾಸಗಳು ವಿಭಜನೆಯಾಗಿವೆ. ಕಾಡಾನೆಗಳು ಹೊಸ ಪ್ರದೇಶಗಳಿಗೆ ಸಂಚಾರ ಮಾಡುತ್ತಿವೆ. ಕೃಷಿ ಜಮೀನುಗಳಿಗೂ ದಾಳಿ ನಡೆಸುತ್ತಿವೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಆನೆ– ಮಾನವ ಸಂಘರ್ಷ ನಿಯಂತ್ರಣಕ್ಕಾಗಿ ಇಲಾಖೆಯು ಜನಸಂಪರ್ಕ ಸಭೆ ನಡೆಸಿ ಸಹಬಾಳ್ವೆಯ ಜಾಗೃತಿ ಮೂಡಿಸುತ್ತಿದೆ. ಬೆಳೆ, ಜೀವ ಹಾನಿ, ಗಾಯಾಳುಗಳಿಗೆ ಪರಿಹಾರ ನೀಡುತ್ತಿದೆ. ಸೌರ ಬೇಲಿ ನಿರ್ಮಾಣಕ್ಕೆ ಸಬ್ಸಿಡಿ, ಇಲಾಖೆ ವತಿಯಿಂದ ಸೌರ ಬೇಲಿ ನಿರ್ಮಾಣ, ಕಂದಕ ನಿರ್ಮಾಣ, ಸೋಲಾರ್ ಟೆಂಟಕಲ್ ಬೇಲಿ ನಿರ್ಮಾಣ, ಕಾಡಾನೆ ಹಿಮ್ಮೆಟ್ಟಿಸುವುದು, ಸೆರೆ ಹಿಡಿಯುವುದು, ಕಾಡಾನೆ ದಾರಿಗಳಿರುವಲ್ಲಿ ಸೂಚನಾ ಫಲಕ ಅಳವಡಿಕೆ, ರಾತ್ರಿ ಗಸ್ತು ಮುಂತಾದ ಕ್ರಮಗಳನ್ನು ಮಾಡಲಾಗುತ್ತಿದೆ. ಆದರೂ ಕಾಡಾನೆ– ಮಾನವ ಸಂಘರ್ಷ ಪರಿಣಾಮಕಾರಿಯಾಗಿ ಹತ್ತಿಕ್ಕಲು ಆನೆ ಕಾರ್ಯಪಡೆಯ ಅಗತ್ಯ ಎನ್ನುತ್ತಾರೆ ಜಿಲ್ಲೆಯ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ.

‘ಆನೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಸುಳ್ಯ ವಲಯವನ್ನು ಕೇಂದ್ರಸ್ಥಾನವನ್ನಾಗಿಸಿ ಕಾರ್ಯಪಡೆ ರಚಿಸುವ ಪ್ರಸ್ತಾವವಿದೆ. ಕೇಂದ್ರಸ್ಥಾನದಲ್ಲಿ ಒಬ್ಬರು ಉಪಅರಣ್ಯ ಸಂರಕ್ಷಣಾಧಿಕಾರಿ, ಒಬ್ಬರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಒಬ್ಬರು ವಲಯ ಅರಣ್ಯ ಸಂರಕ್ಷಣಾಧಿಕಾರಿ ಇರಲಿದ್ದಾರೆ. ಕಾರ್ಯಪಡೆಯು ಸುಳ್ಯ ಮತ್ತು ಗುಂಡ್ಯದಲ್ಲಿ ಎರಡು ಘಟಕಗಳನ್ನು ಹೊಂದಲಿದ್ದು, ಪ್ರತಿ ಘಟಕದಲ್ಲೂ ತಲಾ ಇಬ್ಬರು ಉಪ ವಲಯ ಅರಣ್ಯ ಅಧಿಕಾರಿಗಳು, ಇಬ್ಬರು ಗಸ್ತು ಅರಣ್ಯ ಪಾಲಕರು, ತಲಾ 16 ಮಂದಿ ಹೊರಗುತ್ತಿಗೆ ಕಾವಲುಗಾರರು, ತಲಾ ಒಬ್ಬರು ವಾಹನ ಚಾಲಕ ಹಾಗೂ ತಲಾ ಒಂದು ವಾಹನದ ಅಗತ್ಯ ಇದೆ’ ಎಂದು ಅವರು ಮಾಹಿತಿ ನೀಡಿದರು.

‘ಕಚೇರಿ ಕಟ್ಟಡ, ನಿಯಂತ್ರಣ ಕೊಠಡಿ, ನಿಯಂತ್ರಣ ಕಚೇರಿ ನಿರ್ವಹಣೆಗೆ ಸಿಬ್ಬಂದಿ, ಕಚೇರಿಯ ಕಾವಲು ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ಎರಡು ಸುಸಜ್ಜಿತ ವಾಹನ ಹಾಗೂ ಇಬ್ಬರು ಚಾಲಕರನ್ನು ನೇಮಿಸಬೇಕಾಗುತ್ತದೆ’ ಎಂದು ಅವರು ವಿವರಿಸಿದರು.

ಜಿಲ್ಲೆಗೆ ಆನೆ ಕಾರ್ಯಪಡೆಯನ್ನು ಹೊಂದುವ ಬಗ್ಗೆ ಈ ಹಿಂದೆ ವಿಧಾನ ಮಂಡಲ ಅಧಿವೇಶನದಲ್ಲೂ ಪ್ರಸ್ತಾವವಾಗಿತ್ತು. ಈ ಪ್ರಸ್ತಾವ ಪರಿಶೀಲನೆಯಲ್ಲಿದೆ ಎಂದು ಅರಣ್ಯ ಸಚಿವರು ಉತ್ತರಿಸಿದ್ದರು. ಈ ಬೇಡಿಕೆ 2026–17ನೇ ಸಾಲಿನ ಬಜೆಟ್ನಲ್ಲಾದರೂ ಕೈಗೂಡಲಿದೆಯೇ ಕಾದು ನೋಡಬೇಕಿದೆ.

ಆನೆ ಕಾರ್ಯಪಡೆಯ ಹೊಸ ಮೂಲಸೌಕರ್ಯ ಕಲ್ಪಿಸಲು ಹಾಗೂ ವಾರ್ಷಿಕ ನಿರ್ವಹಣೆಗೆ ಆರಂಭಿಕವಾಗಿ ₹1.72 ಕೋಟಿ ಅನುದಾನ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ
ಆಂಟೊನಿ ಮರಿಯಪ್ಪ ಡಿಸಿಎಫ್ ದಕ್ಷಿಣ ಕನ್ನಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.