ಪುತ್ತೂರು: ‘ಅನ್ನ ಬೆಳೆಯುವ ಮಾಂತ್ರಿಕನಾದ ರೈತನಿಗೆ ಇಂದು ಹಲವಾರು ಸವಾಲುಗಳು ಎದುರಾಗಿವೆ. ಅಡಿಕೆಯೂ ಸೇರಿ ಎಲ್ಲ ಕೃಷಿಗಳನ್ನು ಬಾಧಿಸುತ್ತಿರುವ ಹಲವು ರೋಗಗಳು ರೈತನನ್ನು ಕಂಗೆಡಿಸಿವೆ. ಕೃಷಿಯಲ್ಲಿ ರೈತರಿಗೆ ಸರಿಯಾದ ಮಾಹಿತಿ ಅಗತ್ಯವಾಗಿದ್ದು, ಈ ಸಂಬಂಧ ಜ.10 ರಿಂದ 12ರವರೆಗೆ ಪುತ್ತೂರಲ್ಲಿ ಕೃಷಿ ಮೇಳ, ಸಸ್ಯ ಜಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ದ.ಕ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಹೇಳಿದರು.

ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಕುಂಬ್ರದ ನವೋದಯ ರೈತ ಸಭಾಭವನದಲ್ಲಿ ದ.ಕ ಜಿಲ್ಲಾ ಕೃಷಿಕ ಸಮಾಜ, ಪುತ್ತೂರು ತಾಲ್ಲೂಕು ಕೃಷಿಕ ಸಮಾಜ ಮತ್ತು ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಮಂಗಳವಾರ ರೈತ ದಿನಾಚರಣೆ, ವಿಚಾರ ಗೋಷ್ಠಿ-ಸಂವಾದ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಕೃಷಿಕ ಸಮಾಜದ ನಿರ್ದೇಶಕ ಸಂಜೀವ ಮಠಂದೂರು ಮಾತನಾಡಿ, ಈ ವರ್ಷ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬಂದಿದ್ದರೂ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರದಲ್ಲಿ ಪೂರ್ಣ ಮೊತ್ತ ಪಾವತಿಯಾಗಿಲ್ಲ. ಈಗಾಗಲೇ ಜಿಲ್ಲೆಯಲ್ಲಿ 238 ಕಡೆ ಅಳವಡಿಸಿದ ಮಳೆ ಮಾಪಕಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸದೆ ಇರುವುದರಿಂದ ಸಮಸ್ಯೆಯಾಗಿದೆ. ರೈತರಿಗೆ ಪೂರ್ಣ ಪ್ರಮಾಣದದಲ್ಲಿ ಬೆಳೆ ವಿಮೆ ಪರಿಹಾರ ಮೊತ್ತ ಪಾವತಿಸುವಂತೆ ನಿರಂತರ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಅಧ್ಯಕ್ಷತೆ ವಹಿಸಿದ್ದರು.

ದ.ಕ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೋವಿಂದ ಗೌಡ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಪುತ್ತೂರು ತೋಟಗಾರಿಕಾ ಇಲಾಖೆಯ ನಿರ್ದೇಶಕಿ ರೇಖಾ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಇಒ ಭವಾನಿ ಬಿ.ಆರ್., ಮಾಜಿ ನಿರ್ದೇಶಕ ವಿನೋದ್ ಶೆಟ್ಟಿ ಅರಿಯಡ್ಕ ಭಾಗವಹಿಸಿದ್ದರು. ರಾಜ್ಯ ರೈತ ರತ್ನ ಪ್ರಶಸ್ತಿ ಪುರಸ್ಕೃತ ಕೃಷಿಕ ವೆಂಕಟೇಶ್ವರ ಶರ್ಮ ಅವರನ್ನು ಗೌರವಿಸಲಾಯಿತು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಶ್ ರೈ ಅವರು ಗೇರು ಕೃಷಿಯ ಬಗ್ಗೆ, ಪುತ್ತೂರು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಚೆಲುವ ರಂಗಪ್ಪ ಅವರು ಭತ್ತದ ಕೃಷಿಯ ಕುರಿತು, ಪುತ್ತೂರು ಸಹಾಯಕ ತೋಟಗಾರಿಕಾ ನಿರ್ದೇಶಕ ಶಿವಪ್ರಕಾಶ್ ಅವರು ಅಡಿಕೆ ಕೃಷಿಯ ಬಗ್ಗೆ ಮಾಹಿತಿ ನೀಡಿದರು.

ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಂಘದ ಮಾಜಿ ಉಪಾಧ್ಯಕ್ಷ ಉಮೇಶ್ ಗೌಡ ಕನ್ನಯ, ನಿರ್ದೇಶಕರಾದ ವಸಂತ ಕುಮಾರ್, ಶ್ರೀನಿವಾಸ್ ಪ್ರಸಾದ್, ಸತೀಶ್ ಕರ್ಕೇರ, ಅಮರನಾಥ ರೈ ಇದ್ದರು.