ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದೊಳಗೆ ನೂತನ ಕಟ್ಟಡ ನಿರ್ಮಾಣ, ಉದ್ಘಾಟನೆ; ಬಿ.ವಿಠಲ ಶೆಟ್ಟಿ

Published 8 ಏಪ್ರಿಲ್ 2024, 5:10 IST
Last Updated 8 ಏಪ್ರಿಲ್ 2024, 5:10 IST
ಅಕ್ಷರ ಗಾತ್ರ

ಉಜಿರೆ: ‘ಸಂಘದ ಸದಸ್ಯರಾದ ಅಚ್ಚಿನಡ್ಕ ವೀರಮ್ಮ ಅವರು ಬೆಳ್ತಂಗಡಿಯ ಕೆಲ್ಲಗುತ್ತು ಪರಿಸರದಲ್ಲಿ ಕೊಡುಗೆಯಾಗಿ ನೀಡಿದ ಹತ್ತು ಸೆಂಟ್ಸ್ ನಿವೇಶನದಲ್ಲಿ ಒಂದು ವರ್ಷದೊಳಗೆ ಸುಸಜ್ಜಿತ ಕಟ್ಟಡ ನಿರ್ಮಿಸಿ ಉದ್ಘಾಟಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಬೆಳ್ತಂಗಡಿ ತಾಲ್ಲೂಕು ಘಟಕದ ಅಧ್ಯಕ್ಷ, ನಿವೃತ್ತ ಶಿಕ್ಷಣಾಧಿಕಾರಿ ಬಿ.ವಿಠಲ ಶೆಟ್ಟಿ ಹೇಳಿದರು.

ಬೆಳ್ತಂಗಡಿಯ ರಾಜ್ಯ ಸರ್ಕಾರಿ ನೌಕರರ ಸಭಾಭವನದಲ್ಲಿ ನಡೆದ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘದ ಹಿರಿಯ ಸದಸ್ಯರಾದ ಎಂ.ಕೆ.ಆರಿಗ, ಮಹಾಬಲ ಹೆಗ್ಡೆ, ಲಲಿತಾ, ಬಾಬುಗೌಡ, ಆಗ್ನೇಸ್ ಡೇಸಾ, ದೇವಪ್ಪ ಗೌಡ, ಪ್ರೊ.ಕೆ.ವಿಷ್ಣುಮೂರ್ತಿ ಭಟ್, ವಿಕ್ಟರ್ ಮೊರಾಸ್, ನಿವೃತ್ತ ಉಪನ್ಯಾಸಕ ಸುಬ್ರಹ್ಮಣ್ಯ ಮಧ್ಯಸ್ತ, ಸೋಮನಾಥ ಮಯ್ಯ ಅಳದಂಗಡಿ, ಜುಲಿಯಾನಾ ಲೋಬೊ, ಪ್ರೊ.ಉದಯಕುಮಾರ ಮಲ್ಲ ಬೆಳ್ತಂಗಡಿ, ಬಾಬು ಪೂಜಾರಿ ಕೆದ್ದು, ರಾಮ ಕಾರಂತ ಉಜಿರೆ, ಬಾಬು ಗೌಡ ಮುಂಡಾಜೆ ಅವರನ್ನು ಗೌರವಿಸಲಾಯಿತು.

ಇತ್ತೀಚೆಗೆ ನಿಧನರಾದ ಪ್ರೊ.ನಾವುಜಿರೆ ಅವರಿಗೆ ಆರ್.ಎನ್.ಪೂವಣಿ ಹಾಗೂ ನಿವೃತ್ತ ಶಿಕ್ಷಕ ಜಯರಾಜ ಕಾಡ ಕುತ್ಲೂರು ಅವರಿಗೆ ವಸಂತರಾವ್ ನುಡಿನಮನ ಸಲ್ಲಿಸಿದರು.

ಕೋಶಾಧಿಕಾರಿ ಜಗನ್ನಿವಾಸ ರಾವ್, ಉಪಾಧ್ಯಕ್ಷೆ ಕುಸುಮಾವತಿ ಭಾಗವಹಿಸಿದ್ದರು.

ಕಾರ್ಯದರ್ಶಿ ಪದ್ಮಕುಮಾರ್ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ಸನ್ಮತ್ ಕುಮಾರ್ ನಾರಾವಿ ಸ್ವಾಗತಿಸಿದರು. ಪದ್ಮಕುಮಾರ್ ವಂದಿಸಿದರು.

ಪದಾಧಿಕಾರಿಗಳ ಆಯ್ಕೆ: ಮೂರು ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಬಿ.ವಿಠಲ ಶೆಟ್ಟಿ (ಅಧ್ಯಕ್ಷ), ಸನ್ಮತ್ ಕುಮಾರ್, ಕುಸುಮಾವತಿ (ಉಪಾಧ್ಯಕ್ಷರು) ವಿಶ್ವಾಸ್ ರಾವ್ ಉಜಿರೆ (ಕಾರ್ಯದರ್ಶಿ), ವಾರಿಜ (ಜತೆ ಕಾರ್ಯದರ್ಶಿ), ಜಗನ್ನಿವಾಸ ರಾವ್ (ಕೋಶಾಧಿಕಾರಿ).

ವಾರ್ಷಿಕ ಮಹಾಸಭೆಯಲ್ಲಿ ಹಿರಿಯ ನಾಗರಿಕರನ್ನು ಗೌರವಿಸಲಾಯಿತು
ವಾರ್ಷಿಕ ಮಹಾಸಭೆಯಲ್ಲಿ ಹಿರಿಯ ನಾಗರಿಕರನ್ನು ಗೌರವಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT