ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಅಡ್ಯಾರ್ ಐಸ್ ಕ್ರೀಮ್ ಘಟಕದಲ್ಲಿ ಬೆಂಕಿ:  ₹ 4 ಕೋಟಿ ನಷ್ಟ 

Last Updated 28 ಮಾರ್ಚ್ 2023, 8:02 IST
ಅಕ್ಷರ ಗಾತ್ರ

ಮಂಗಳೂರು: ನಗರದ ಹೊರವಲಯದ ಅಡ್ಯಾರ್ ಕಟ್ಟೆ ಎಂಬಲ್ಲಿ ಕಾರ್ಯಾಚರಿಸುತ್ತಿದ್ದ ಐಸ್ ಕ್ರೀಮ್ ಘಟಕದಲ್ಲಿ ಸೋಮವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದೆ.

ಘಟಕದಲ್ಲಿ ದಾಸ್ತಾನಿದ್ದ ₹1 ಕೋಟಿಗೂ ಅಧಿಕ ಮೌಲ್ಯದ ಐಸ್ ಕ್ರೀಮ್, 3 ಶೈತ್ಯಾಗಾರಗಳು ಹಾಗೂ ಶೈತ್ಯಾಗಾರ ಘಟಕ ಅಳವಡಿಸಿದ್ದ ಒಂದು ವಾಹನವು ಬೆಂಕಿಗಾಹುತಿಯಾಗಿದೆ.

ಈ ಬೆಂಕಿ ಅವಘಡದಿಂದ ಸುಮಾರು ₹ 4 ಕೋಟಿಗಳಷ್ಟು ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ ಎಂದು ಐಸ್ಕ್ರೀಮ್ ಘಟಕದ ಸಿಬ್ಬಂದಿಯೊಬ್ಬರು 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

'ಕಾಸರಗೋಡಿನಿಂದ ಕಾರವಾರದವರೆಗೆ ಕರಾವಳಿ ಜಿಲ್ಲೆಯ ವಿತರಕರಿಗೆ ಈ ಘಟಕದ ಮೂಲಕವೇ ಕೆಎಂಎಫ್ ನಂದಿನಿ ಬ್ರಾಂಡ್ ನ ಐಸ್ ಕ್ರೀಮ್ ಅನ್ನು ತಲುಪಿಸಲಾಗುತ್ತಿತ್ತು. ಐಸ್ ಕ್ರೀಂ ತಿನ್ನಲು ಬಳಸುವ ಚಮಚಗಳನ್ನೂ ಈ ಘಟಕದಲ್ಲೇ ತಯಾರಿಸಲಾಗುತ್ತಿತ್ತು. 18 ವರ್ಷಗಳಿಂದ ಈ ಘಟಕವು ಕಾರ್ಯಾಚರಿಸುತ್ತಿದೆ' ಎಂದು ಅವರು ತಿಳಿಸಿದರು.

'ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಮಧ್ಯರಾತ್ರಿ ವೇಳೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಅಗ್ನಿಶಾಮಕ ದಳದ ಮೂರು ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದವು. ಘಟಕದಲ್ಲಿದ್ದ ಬಹುತೇಕ ವಸ್ತುಗಳು ಅಷ್ಟರಲ್ಲಿ ಸುಟ್ಟು ಕರಕಲಾಗಿದ್ದವು' ಎಂದು ಘಟಕದ ಸಿಬ್ಬಂದಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT