ಮಂಗಳೂರು: ಅಂಕ ಗಳಿಕೆಯನ್ನೇ ಪ್ರೋತ್ಸಾಹಿಸುವ ಶಿಕ್ಷಣ ವ್ಯವಸ್ಥೆಯನ್ನು ಟೀಕಿಸಿದ ಶಾಸಕ ಉಮಾನಾಥ ಕೋಟ್ಯಾನ್ ‘ಪರೀಕ್ಷೆಯಲ್ಲಿ ಪೂರ್ಣ ಅಂಕ ಗಳಿಸಿದವರನ್ನು ಅಹಂ ಕಾಡುವ ಸಾಧ್ಯತೆ ಇದೆ. ಹಾಗೆ ಆಗದೇ ಇರಲು ಗಮನ ಹರಿಸಬೇಕು ಎಂದು ಹೇಳಿದರು.

ನಗರದ ನಾರಾಯಣ ಗುರು ಯುವ ವೇದಿಕೆ ಭಾನುವಾರ ಆಯೋಜಿಸಿದ್ದ ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ, ಗುರು ವಂದನೆ, ಸಾಧಕರಿಗೆ ಸನ್ಮಾನ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿಕ್ಷಣ ಮತ್ತು ಪರೀಕ್ಷಾ ಪದ್ಧತಿಯಲ್ಲಿ ತುಂಬ ದೋಷಗಳು ಇವೆ. ಪಠ್ಯದಲ್ಲಿ ಅನೇಕ ತಪ್ಪು ಮಾಹಿತಿಗಳಿದ್ದು ಅದನ್ನು ಹಾಗೆಯೇ ಬರೆದವರಿಗೆ ಅಂಕ ಕೊಡಲಾಗುತ್ತದೆ ಎಂದರು.

‘ತಪ್ಪುಗಳನ್ನೇ ಸರಿ ಎಂದು ಹೇಳುವ ಪಾಠಗಳನ್ನು ಕಲಿತು ಆ ತಪ್ಪುಗಳನ್ನೇ ಬರೆದ ಪರೀಕ್ಷೆಯಲ್ಲಿ ತೇರ್ಗಡೆ ಮಾಡುವ ಪದ್ಧತಿಯನ್ನು ಅನುಸರಿಸುವ ಗುರುಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಹೀಗೆ ಮಾಡುವುದರ ಮೂಲಕ 625ಕ್ಕೆ 625 ಅಂಕ ಗಳಿಸಿದವರೇ ಸಮಾಜದಲ್ಲಿ ದೊಡ್ಡವರು ಎಂಬ ಭಾವನೆ ಮೂಡಿದೆ. ಇದು ಇಲ್ಲದಾಗಿ ಬದುಕುವ ವಿದ್ಯೆ ಕಲಿಸುವ ಪದ್ಧತಿ ಜಾರಿಗೆ ಬರಬೇಕು’ ಎಂದು ಅವರು ಆಶಿಸಿದರು.

ಬ್ರಹ್ಮಶ್ರೀ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಮುಖಂಡ ವಿನಯಕುಮಾರ್ ಸೊರಕೆ, ‘ತಾವೇ ದೇವಸ್ಥಾನ ನಿರ್ಮಿಸಿ ಸಮಾಜದ ಮೇಲೆ ಬೆಳಕು ಚೆಲ್ಲಿದವರು ನಾರಾಯಣ ಗುರು. ಅವರ ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ತತ್ವವು ವಿಶ್ವಮಾನವ ಸಂದೇಶ ಎಂದು ಕ್ರೈಸ್ತ ಧರ್ಮದ ಪರಮೋನ್ನತ ಗುರು, ಈಚೆಗೆ ತೀರಿಕೊಂಡ ಪಾಪ್ ಫ್ರಾನ್ಸಿಸ್ ಅವರು ಹೇಳಿದ್ದರು. ಅದರಿಂದ ನಾರಾಯಣ ಗುರುಗಳು ಎಷ್ಟು ಶ್ರೇಷ್ಠರು ಎಂದು ತಿಳಿಯುತ್ತದೆ’ ಎಂದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಆಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್ ಮಾತನಾಡಿ ಖಾಸಗಿ ಉದ್ಯೋಗವು ಆದಾಯವನ್ನು ಮಾತ್ರ ಗುರಿಯಾಗಿರಿಸುತ್ತದೆ. ಸರ್ಕಾರಿ ಸೇವೆಯಲ್ಲಿದ್ದ ಸಮಾಜಕ್ಕೆ ಒಳಿತು ತರುವ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಸರ್ಕಾರಿ ಉದ್ಯೋಗ ಪಡೆಯಲು ಯುವಜನರು ಮುಂದಾಗಬೇಕು ಎಂದರು.

‘ಜಾತಿ ಮತ್ತು ಜನಾಂಗೀಯ ದ್ವೇಷ ಎಂಬ ರೋಗಕ್ಕೆ ನಾರಾಯಣ ಗುರು ಔಷಧಿ ಇದ್ದಂತೆ. ಸಮಾಜದಲ್ಲಿ ನಾರಾಯಣ ಗುರು ವೇದಿಕೆಗಳು ಮತ್ತು ಗುರುವಿನ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕೊರತೆ ಇಲ್ಲ. ಆದರೆ ಅವರ ಸಂದೇಶಗಳು ಎಷ್ಟರ ಮಟ್ಟಿಗೆ ಪಾಲನೆ ಆಗುತ್ತವೆ ಎಂಬುದರ ವಿಮರ್ಶೆ ಅಗಬೇಕು’ ಎಂದು ಪದ್ಮರಾಜ್ ನುಡಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ಜಯರಾಜ್ ಸೋಮಸುಂದರ, ನಾರಾಯಣಗುರು ಯುವ ವೇದಿಕೆಯ ಅಧ್ಯಕ್ಷ ಸುದರ್ಶನ್ ಡಿ.ಸುವರ್ಣ, ಮುಖಂಡ ಕೃಷ್ಣ ಜೆ.ಪಾಲೆಮಾರ್, ಬಿಲ್ಲವ ಮಹಿಳಾ ಸಂಘ ಕುದ್ರೋಳಿ ಅಧ್ಯಕ್ಷೆ ಸುಮಲತಾ ಸುವರ್ಣ ಪಾಲ್ಗೊಂಡಿದ್ದರು. ನಿವೃತ್ತ ಉಪನ್ಯಾಸಕ ಗಣೇಶ್ ಅಮೀನ್ ಸಂಕಮಾರ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಸಾಮಾಜಿಕ ಕಾರ್ಯಕರ್ತೆ ರಾಧಾ ದಾಸ್ ಮತ್ತು ನಟ ದೀಕ್ಷಿತ್ ಅಂಡಿಂಜೆ ಅವರನ್ನು ಗೌರವಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ಪ್ರಾರ್ಥನಾ ಅವರಿಗೆ ಚಿನ್ನದ ಪದಕ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಶ್ರೀಯಾಗೆ ಪುರಸ್ಕಾರ, 200 ಮಂದಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಸಂಕಷ್ಟದಲ್ಲಿರುವವರಿಗೆ ಉದ್ಯೋಗ:

ಬಿಲ್ಲವ ಮಹಿಳಾ ಸಂಘ ಕುದ್ರೋಳಿ ಅಧ್ಯಕ್ಷೆ ಸುಮಲತಾ ಸುವರ್ಣ ಮಾತನಾಡಿ ಬಿಲ್ಲವ ಮಹಿಳೆಯರ ಸಂಘಟನೆ ಈಚೆಗೆ ಹೆಚ್ಚಾಗಿರುವುದು ಖುಷಿಯ ವಿಷಯ. ನಮ್ಮ ಸ್ವಸಹಾಯ ಗುಂಪುಗಳು ಶೇಕಡಾ 5ರ ಬಡ್ಡಿ ದರದಲ್ಲಿ ಸಾಲ ಕೊಡುತ್ತಿದ್ದು ಇದರಿಂದ ಅನೇಕ ಮಂದಿಗೆ ಅನುಕೂಲ ಆಗಿದೆ ಎಂದು ತಿಳಿಸಿದರು. ‘ಮಹಿಳೆಯರೇ ನಿರ್ವಹಿಸುವ ಬ್ಯಾಂಕ್ಗಳು ಮತ್ತು ಸೊಸೈಟಿಗಳು ಈಚೆಗೆ ಆರಂಭವಾಗಿವೆ. ಸೊಸೈಟಿಗಳಲ್ಲಿ ಮಹಿಳೆಯರೇ ಕೆಲಸ. ಉದ್ಯೋಗ ನಿರ್ವಹಿಸುವಷ್ಟು ಶಿಕ್ಷಣ ಇಲ್ಲದೆ ಇದ್ದರೆ ತರಬೇತಿ ಕೊಡಲಾಗುತ್ತದೆ. ಸರ್ಕಾರದಿಂದ ಯಾವ ಸಹಾಯವನ್ನೂ ಕೇಳುವುದಿಲ್ಲ. ಕೇಳಿದರೆ ಅವರು ಹೇಳಿದಂತೆ ಕೇಳಬೇಕಾಗುತ್ತದೆ. ಅದು ನಮಗೆ ಇಷ್ಟವಿಲ್ಲ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.