ಮಂಗಳವಾರ, ಏಪ್ರಿಲ್ 13, 2021
29 °C

ಸ್ಯಾನಿಟರಿ ಪ್ಯಾಡ್‌ನಲ್ಲಿ ಸಾಗಿಸುತ್ತಿದ್ದ ₹1.10 ಕೋಟಿ ಮೌಲ್ಯದ ಚಿನ್ನ‌ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಮಂಗಳೂರು: ದುಬೈನಿಂದ ಇಲ್ಲಿ‌‌ನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆಯೊಬ್ಬಳಿಂದ ₹1.10 ಕೋಟಿ ಮೌಲ್ಯದ‌ 2.41 ಕೆ.ಜಿ.‌ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ಗುಪ್ತಚರ ಮಾಹಿತಿಯಂತೆ ಕಾಸರಗೋಡಿನ ಮಹಮ್ಮದ್ ಅಲಿ ಸಮೀರಾಳನ್ನು ತಪಾಸಣೆ ಮಾಡಲಾಯಿತು.‌ ಸ್ಯಾನಿಟರಿ ಪ್ಯಾಡ್, ಒಳ ಉಡುಪಿನಲ್ಲಿ ಅಡಗಿಸಿ ಇಡಲಾಗಿದ್ದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ವಿದೇಶಿ ಸಿಗರೇಟ್‌ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

ಕಸ್ಟಮ್ಸ್ ಉಪ ಆಯುಕ್ತ ಡಾ.ಕಪಿಲ್‌ಗಡೆ ನೇತೃತ್ವದಲ್ಲಿ ಅಧಿಕಾರಿಗಳಾದ ಪ್ರೀತಿ ಸುಮಾ, ರಾಕೇಶ್ ಕುಮಾರ್, ಕ್ಷತಿ‌ನಾಯಕ್ ಅವರನ್ನು ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು