ಸೋಮವಾರ, ಜೂನ್ 21, 2021
24 °C

ನೋಡಿ: ಲಾಕ್‌ಡೌನ್ ನಡುವೆ ಮಂಗಳೂರಲ್ಲಿ ಅದ್ಧೂರಿ ಮದುವೆ: ವಿಡಿಯೊ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ರಾಜ್ಯದಲ್ಲಿ ಕೋವಿಡ್ ಕರ್ಫ್ಯೂ ವಿಧಿಸಿದ್ದರೂ, ಮಂಗಳೂರಿನ ಹೊರವಲಯದ ಅಡ್ಯಾರ್‌ ಗ್ರಾಮದಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಅದ್ಧೂರಿ ಮದುವೆ ಸಮಾರಂಭ ನಡೆದಿದೆ.

ಜಿಲ್ಲೆಯಲ್ಲಿ ಕೇವಲ 25 ಮಂದಿಗೆ ಅವಕಾಶ ಕೊಡಲಾಗಿದೆ. ಆದರೆ ಈ ನಿಯಮಗಳನ್ನು ಮೀರಿ ಮದುವೆ ಕಾರ್ಯಕ್ರಮವೊಂದರಲ್ಲಿ ಡಿಜೆ ಸೌಂಡ್‌ಗೆ ನೂರಕ್ಕೂ ಅಧಿಕ ಮಂದಿ ಅಂತರವನ್ನು ಮರೆತು ಕುಣಿದು ಕುಪ್ಪಳಿಸಿದ್ದಾರೆ.

ಸ್ಥಳೀಯ ಪಂಚಾಯಿತಿಯಿಂದ ಈ ಮದುವೆ ಕಾರ್ಯಕ್ರಮದಲ್ಲಿ 25 ಮಂದಿ ಪಾಲ್ಗೊಳ್ಳುವುದಕ್ಕೆ ಅವಕಾಶ ಕೊಡಲಾಗಿತ್ತು. ಆದರೆ, ನಿಯಮಗಳನ್ನು ಮೀರಿ ಕಾರ್ಯಕ್ರಮ ನಡೆದಿದ್ದು, ನೂರಾರು ಮಂದಿ ಗುಂಪು ಗುಂಪಾಗಿ ನೃತ್ಯ ಮಾಡಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು