ಪುತ್ತೂರು (ದಕ್ಷಿಣ ಕನ್ನಡ): ಶಾಯಿಯಲ್ಲಿ ಅದ್ದುವ ಪೆನ್ ಬಳಸಿ, ಕುರ್ ಆನ್ ಬರೆದು ತಾಲ್ಲೂಕಿನ ಕುಂಬ್ರದ ಮರ್ಕಝುಲ್ ಹುದಾ ಮಹಿಳಾ ಕಾಲೇಜು ವಿದ್ಯಾರ್ಥಿನಿ ಗಮನ ಸೆಳೆದಿದ್ದಾರೆ.

ಕಾಲೇಜಿನಲ್ಲಿ ಬಿ.ಕಾಂ ವಿದ್ಯಾರ್ಥಿನಿ, ಕಡಬ ತಾಲ್ಲೂಕಿನ ಕಾಣಿಯೂರು ಗ್ರಾಮದ ಬೈತಡ್ಕ ನಿವಾಸಿ ಇಸ್ಮಾಯಿಲ್– ಝಹ್ರಾ ಜಾಸ್ಮಿನ್ ದಂಪತಿ ಪುತ್ರಿ ಸಜ್ಲಾ ಈ ಸಾಧನೆ ಮಾಡಿದವರು.

ಸಜ್ಲಾ ಸುಮಾರು 5 ವರ್ಷ ಪರಿಶ್ರಮದಿಂದ ಇದನ್ನು ಸಾಧಿಸಿದ್ದಾರೆ. 2021ರ ಜನವರಿಯಲ್ಲಿ ಬರವಣಿಗೆ ಆರಂಭಿಸಿ, 2025ರ ಆಗಸ್ಟ್ನಲ್ಲಿ ಪೂರ್ಣಗೊಳಿಸಿದ್ದಾರೆ.

ಬರವಣಿಗೆಗೆ ಬಿಳಿ, ತಿಳಿನೀಲಿ, ತಿಳಿ ಹಸಿರು ಬಣ್ಣದ ಕಾಗದ ಹಾಗೂ ಕಪ್ಪು ಶಾಯಿಯಲ್ಲಿ ಅದ್ದುವ ಪೆನ್ ಬಳಸಲಾಗಿದೆ. ಗ್ರಂಥ 604 ಪುಟಗಳಿದ್ದು, ಗ್ರಂಥಕ್ಕೆ ಕೆಂಪು ಜತೆಗೆ ಚಿನ್ನ ಮಿಶ್ರಿತ ಬಣ್ಣದ ರಕ್ಷಾಪುಟವಿದೆ. ಕೃತಿಯು ಸುಮಾರು 14 ಕೆ.ಜಿ ಭಾರ ಇದೆ.

‘ಒಂದು ಪುಟ ಬರೆಯಲು 4 ಗಂಟೆ ಬೇಕಾಗುತ್ತಿತ್ತು. ಕೆಲವು ದಿನ 8 ಗಂಟೆ ಬಳಸಿ 2 ಪುಟ ಬರೆದಿದ್ದೇನೆ. 302 ದಿನದಲ್ಲಿ (2,416 ಗಂಟೆ) ಈ ಕಾರ್ಯ ಪೂರ್ಣಗೊಳಿಸಿದ್ದೇನೆ’ ಎಂದು ಸಜ್ಲಾ ಇಸ್ಮಾಯಿಲ್ ಅವರು ಪ್ರತಿಕ್ರಿಯಿಸಿದರು.

ಕೈಬರಹ ಪ್ರತಿ ಮತ್ತು ಸಾಧನೆಯ ಅನಾವರಣ ಕಾರ್ಯಕ್ರಮ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ನಡೆಯಿತು. ಕೇರಳದ ಮರ್ಕಝ್ ನಾಲೇಜ್ ಸಿಟಿ ಮುದರ್ರಿಸ್ ಯಾಸೀನ್ ಸಖಾಫಿ ಅಲ್ ಅಝ್ಹರಿ ಅವರು ಪ್ರತಿಯನ್ನು ಲೋಕಾರ್ಪಣೆಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.