ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರದಾ ಕಾಲೇಜಿನಲ್ಲಿ ಆಯುರ್ವೇದ ದಿನಾಚರಣೆ: ಜಾಗೃತಿ, ತಪಾಸಣೆ, ಚಿಕಿತ್ಸೆ

Last Updated 29 ಸೆಪ್ಟೆಂಬರ್ 2022, 13:46 IST
ಅಕ್ಷರ ಗಾತ್ರ

ಮಂಗಳೂರು: ಆಯುರ್ವೇದ ದಿನಾಚರಣೆಯ ಅಂಗವಾಗಿ ತಲಪಾಡಿಯ ಶಾರದಾ ಆಯುರ್ವೇದ ಕಾಲೇಜು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಜಾಗೃತಿ, ತಪಾಸಣೆ ಮತ್ತು ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ ಎಂದು ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೃದ್ರೋಗ ತಪಾಸಣೆ ಮಾಸಾಚರಣೆ ಈ ತಿಂಗಳ 26ರಂದು ಆರಂಭಗೊಂಡಿದ್ದು ಮುಂದಿನ ತಿಂಗಳ 23ರ ವರೆಗೆ ನಡೆಯಲಿದೆ. ಮಾನಸಿಕ ಆರೋಗ್ಯ ಸಪ್ತಾಹ ಅಕ್ಟೋಬರ್ 10ರಿಂದ 16ರ ವರೆಗೆ ನಡೆಯಲಿದೆ. ಮೂಳೆ ಮತ್ತು ಸಂಧಿಗೆ ಸಂಬಂಧಿಸಿದ ತೊಂದರೆಗಳಿಗೆ ಚಿಕಿತ್ಸೆ ಅಕ್ಟೋಬರ್ 17ರಿಂದ 23ರ ವರೆಗೆ ನಡೆಯಲಿದೆ ಎಂದು ವಿವರಿಸಿದರು.

ಹೃದ್ರೋಗ ಮಾಸಾಚರಣೆಯಲ್ಲಿ ಉಚಿತ ತಪಾಸಣೆ ಮತ್ತು ಸಲಹೆ, ರಿಯಾಯಿತಿ ದರದಲ್ಲಿ ಇಸಿಜಿ ಪರೀಕ್ಷೆ ನಡೆಸಲಾಗುವುದು. ಉಚಿತ ಸಿಪಿಆರ್ ಕಾರ್ಯಕ್ರಮ ಇರುತ್ತದೆ. ಮಾನಸಿಕ ಆರೋಗ್ಯ ಸಪ್ತಾಹದ ಅಂಗವಾಗಿ ಉಚಿತ ಸಂದರ್ಶನ, ಮಕ್ಕಳಿಗೆ ಮತ್ತು ವಯಸ್ಕರಿಗೆ ನೆನಪಿನ ಶಕ್ತಿ ಪರೀಕ್ಷೆ ನಡೆಯಲಿದೆ. ಅ.19ರಂದು ಉಚಿತ ಮೂಳೆ ಸಾಂದ್ರತೆ ಪರೀಕ್ಷೆ ಮತ್ತು ಉಳಿದ ದಿನಗಳಲ್ಲಿ ಸಂಧು ರೋಗ ಪರೀಕ್ಷೆ, ಚಿಕಿತ್ಸೆ ನಡೆಯಲಿದೆ ಎಂದು ಅವರು ತಿಳಿಸಿದರು.

ಪ್ರಾಂಶುಪಾಲ ಡಾ.ರವಿಗಣೇಶ ಮೊಗ್ರ, ಉಪಪ್ರಾಂಶುಪಾಲ ಡಾ.ಸಂದೀಪ್ ಬೇಕಲ್‌, ವೈದ್ಯಕೀಯ ಅಧೀಕ್ಷಕಿ ಡಾ.ಸಪ್ನಾ ಡಿ. ಭಂಡಾರಿ ಹಾಗೂ ವ್ಯವಸ್ಥಾಪಕ ಹರ್ಷಿತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT