ಮಂಗಳೂರು: ಕಸ ವಿಲೇವಾರಿ ವ್ಯವಸ್ಥೆಯನ್ನು ಸರಿದಾರಿಗೆ ತರಲು ಇಲ್ಲಿನ ಮಹಾನಗರ ಪಾಲಿಕೆಯು ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಹಸಿ, ಒಣ ಕಸವನ್ನು ಮಾತ್ರ ವಿಂಗಡಿಸಿ ನೀಡಲಾಗುತ್ತಿತ್ತು. ಇನ್ನು ಮುಂದೆ ನೈರ್ಮಲ್ಯ ಕಸವನ್ನೂ ಪ್ರತ್ಯೇಕ ಬುಟ್ಟಿಯಲ್ಲಿಟ್ಟು ಪೌರಕಾರ್ಮಿಕರಿಗೆ ಒದಗಿಸುವುದು ಕಡ್ಡಾಯ ಮಾಡಲಾಗಿದೆ. ಕಸವನ್ನು ಸರಿಯಾಗಿ ವಿಂಗಡಿಸದವರಿಗೆ ದಂಡ ವಿಧಿಸಲಿದೆ.

‘ಸಾರ್ವಜನಿಕರು ಹಸಿ, ಒಣ ಕಸವನ್ನು ವಿಂಗಡಿಸಿ ನೀಡುತ್ತಿದ್ದಾರೆ. ಇನ್ನು ಸ್ಯಾನಿಟರಿ ಪ್ಯಾಡ್, ಮಕ್ಕಳ ಡೈಪರ್, ಹಿರಿಯರು ಬಳಸುವ ಡೈಪರ್ ಮೊದಲಾದ ನೈರ್ಮಲ್ಯ ಕಸವನ್ನು ಹಸಿ ಕಸದ ಜೊತೆ ಸೇರಿಸಿ ನೀಡುತ್ತಿದ್ದಾರೆ. ಇನ್ನು ಇವುಗಳನ್ನು ಪ್ರತ್ಯೇಕ ಬುಟ್ಟಿಯಲ್ಲಿಟ್ಟು ಪೌರಕಾರ್ಮಿಕರಿಗೆ ನೀಡಬೇಕು. ನಗರದಲ್ಲಿ ನಿತ್ಯ 5 ಟನ್– 10 ಟನ್ಗಳಷ್ಟು ನೈರ್ಮಲ್ಯ ಕಸ ಉತ್ಪತ್ತಿಯಾಗುತ್ತಿದ್ದು, ಇವುಗಳ ವಿಲೇವಾರಿ ಸವಾಲಿನದು. ಕೆಲವರು ಹಸಿ ಕಸದಲ್ಲಿ ಪ್ಲಾಸ್ಟಿಕ್ನ ತೊಟ್ಟೆ, ಬಾಟಲಿಗಳನ್ನೂ ಸೇರಿಸುತ್ತಿದ್ದಾರೆ. ಇದಕ್ಕಿನ್ನು ಅವಕಾಶವಿಲ್ಲ. ಕಸ ವಿಂಗಡಣೆ ಸರಿಯಾಗಿ ಮಾಡದಿದ್ದರೆ ಆರಂಭದಲ್ಲಿ ₹ 500 ದಂಡ ವಿಧಿಸುತ್ತೇವೆ. ನಂತರ ದಂಡದ ಮೊತ್ತ ಹೆಚ್ಚಿಸುತ್ತೇವೆ’ ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದರು.

ಕಸ ವಿಂಗಡಣೆ ಹೇಗೆ ಮಾಡಬೇಕು ಎಂಬ ಕರಪತ್ರ ಹಾಗೂ ಕಸ ವಿಂಗಡಿಸದಿದ್ದರೆ ಕೈಗೊಳ್ಳುವ ಕ್ರಮಗಳ ಕುರಿತ ನೋಟಿಸ್ಗಳನ್ನು ಈ ವಾರ ಜಾರಿಗೊಳಿಸಲಿದ್ದೇವೆ. ಕಸವನ್ನು ಪ್ರತ್ಯೇಕಿಸಿ ನೀಡಲು ಏ. 21ರವರೆಗೆ ಕಾಲಾವಕಾಶ ನೀಡುತ್ತೇವೆ. ಬಳಿಕ ದಂಡ ವಿಧಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ನೀರು ಪೂರೈಕೆ ಸ್ಥಗಿತ: ಕಸ ವಿಂಗಡಣೆ ನಾಗರಿಕರ ಜವಾಬ್ದಾರಿ. ಕೆಲವರು ದಂಡ ವಿಧಿಸಿದ ಬಳಿಕವೂ ಮತ್ತೆ ಮತ್ತೆ ತಪ್ಪೆಸಗುತ್ತಾರೆ. ಅಂತಹವರ ಮನೆಗ ನೀರಿನ ಸಂಪರ್ಕವನ್ನು ಕಡಿತಗೊಳಿಸುವಂತಹ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆಯುಕ್ತರು ಎಚ್ಚರಿಸಿದರು

ಹಸಿ, ಒಣ ಹಾಗೂ ನೈರ್ಮಲ್ಯ ಕಸಕ್ಕೆ ಪ್ರತ್ಯೇಕ ತೊಟ್ಟಿ ಇಡಬೇಕು ₹ 500ರಿಂದ ₹ 25 ಸಾವಿರದವರೆಗೆ ದಂಡ ವಿಧಿಸಲು ಅವಕಾಶ ಕಸ ವಿಂಗಡಿಸದೇ ದಂಡ ತೆತ್ತವರ ವಿವರ ಬಹಿರಂಗ: ಪಾಲಿಕೆ

‘ಕ್ಯು.ಆರ್.ಕೋಡ್’ಗೆ ಮರುಜೀವ ಮನೆ ಮನೆಯಿಂದ ಕಸ ಸಂಗ್ರಹಕ್ಕಾಗಿ ಪಾಲಿಕೆಯು ಮನೆ/ ವಸತಿ ಸಮುಚ್ಚಯಗಳ ಕಸ ಸಂಗ್ರಹ ತಾಣದ ಬಳಿ ಕ್ಯು.ಆರ್.ಕೋಡ್ ಅಳವಡಿಸಿತ್ತು. ಅದನ್ನು ಸ್ಕ್ಯಾನ್ ಮಾಡಲು ಪೌರ ಕಾರ್ಮಿಕರಿಗೆ ಸಾಧನವನ್ನು ನೀಡಲಾಗಿತ್ತು. ಕೆಲವು ಸಾಧನಗಳು ಕೆಟ್ಟುಹೋಗಿದ್ದವು. ಹಾಗಾಗಿ ಕ್ಯು.ಆರ್.ಕೋಡ್ ಬಳಕೆ ಬಹುತೇಕ ಸ್ಥಗಿತವಾಗಿತ್ತು. ಈಗ ಕ್ಯು.ಆರ್.ಕೋಡ್ಗಳನ್ನು ಮತ್ತೆ ಬಳಸಲು ಪಾಲಿಕೆ ಮುಂದಾಗಿದೆ. ಈ ಬಗ್ಗೆ ಪೌರಕಾರ್ಮಿಕರಿಗೆ ಲೋಡರ್ಗಳಿಗೆ ಹಾಗೂ ವಾಹನ ಚಾಲಕರಿಗೆ ಮಂಗಳವಾರ ಪುರಭವನದಲ್ಲಿ ತರಬೇತಿ ನೀಡಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅವರೂ ಇದನ್ನು ವೀಕ್ಷಿಸಿದರು. ಕ್ಯು.ಆರ್.ಕೋಡ್ ಸ್ಕ್ಯಾನ್ ಮಾಡಲು ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸಿದ್ದೇವೆ. ಪೌರಕಾರ್ಮಿಕರು ಸ್ಮಾರ್ಟ್ ಫೋನನ್ನಲ್ಲೇ ಇದನ್ನು ಅಳವಡಿಸಿಕೊಂಡು ಕ್ಯು.ಆರ್.ಕೋಡ್ ಸ್ಯ್ಕಾನ್ ಮಾಡಬಹುದು ಎಂದು ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರಾಜು ತಿಳಿಸಿದರು. ‘ಪಾಲಿಕೆ ವ್ಯಾಪ್ತಿಯಲ್ಲಿ ಮನೆಗಳು ಹೋಟೆಲ್ಗಳು ವಾಣಿಜ್ಯ ಸಂಸ್ಥೆಗಳು ಸೇರಿ ಕಸ ಉತ್ಪಾದಿಸುವ 2.37 ಲಕ್ಷ ಆಸ್ತಿಗಳಿವೆ. ಸದ್ಯ 60 ವಾರ್ಡ್ಗಳಲ್ಲಿ 90 ಸಾವಿರ ಜಾಗಗಳಲ್ಲಿ ಕ್ಯು.ಆರ್.ಕೋಡ್ ಅಳವಡಿದ್ದೇವೆ. ಕ್ಯು.ಆರ್.ಕೋಡ್ ಸ್ಕ್ಯಾನಿಂಗ್ ಆಧಾರದಲ್ಲಿ ಆಯಾ ದಿನ ಯಾವೆಲ್ಲ ಮನೆಗಳಿಂದ ಕಸ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಪಾಲಿಕೆಯ ಸಮಗ್ರ ಕಮಾಂಡ್ ನಿಯಂತ್ರಣ ಕೇಂದ್ರವನ್ನು (ಐಸಿಸಿಸಿ) ತಲುಪುತ್ತದೆ. ಯಾರೆಲ್ಲ ಕೆಲಸಕ್ಕೆ ಗೈರಾಗಿದ್ದಾರೆ ಎಂಬ ಮಾಹಿತಿ ನಮಗೆ ಸಮರ್ಪಕವಾಗಿ ಸಿಗುತ್ತಿಲ್ಲ. ಇನ್ನು ಈ ವಿವರವೂ ಸಿಗಲಿದೆ ಎಂದು ರವಿಚಂದ್ರ ನಾಯಕ್ ತಿಳಿಸಿದರು.

ಬ್ಲ್ಯಾಕ್ ಸ್ಪಾಟ್ ನಿವಾರಣೆಗೆ ಕ್ರಮ ‘ನಗರದಲ್ಲಿ 60 ಕಡೆ ಬ್ಲ್ಯಾಕ್ ಸ್ಪಾಟ್ಗಳನ್ನುಗುರುತಿಸಲಾಗಿದೆ. ಇಲ್ಲಿ ಯಾರು ಕಸ ಬಿಸಾಡುತ್ತಿದ್ದಾರೆ ಎಂದು ಕಣ್ಗಾವಲು ಇಡು 60 ಕಡೆಯು ಸಿಸಿಟಿವಿ ಕ್ಯಾಮೆರಾ ಅಳವಡಿಸಲಿದ್ದೇವೆ. ಸಾರ್ವಜನಿಕ ಪ್ರದೇಶದಲ್ಲಿ ಕಸ ಬಿಸಾಡಿದವರನ್ನು ಪತ್ತೆ ಹಚ್ಚಿ ಅವರಿವ ವಿರುದ್ಧ ಕ್ರಮಕೈಗೊಳ್ಳಲು ಇದರಿಂದ ನೆರವಾಗಲಿದೆ ಎಂದು ಪಾಳಿಕೆ ಆಯುಕ್ತರು ತಿಳಿಸಿದರು. ಸಾರ್ವಜನಿಕ ಜಾಗದಲ್ಲಿ ಯಾರಾದರೂ ಕಸ ಬಿಸಾಡಿದರೆ ಅದರ ಫೊಟೊ ತೆಗೆದು 9449007722 ಸಂಖ್ಯೆಗೆ ಕಳುಹಿಸಬಹುದು. ಅಥವಾ 0824–2220306ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದರು.

ಅಂಕಿ ಅಂಶ 120 ಟನ್ ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ ಉತ್ಪಾದನೆಯಾಗುತ್ತಿರುವ ಹಸಿ ಕಸ 80 ಟನ್ ನಿತ್ಯ ಉತ್ಪಾದನೆಯಾಗುವ ಒಣ ಕಸ 500 ಮನೆ ಮನೆಯಿಂದ ಕಸ ಸಂಗ್ರಹಿಸುವ ಲೋಡರ್ ಹಾಗೂ ಚಾಲಕ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.