ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿಯನ್ನೇ ಬಿಟ್ಟಿಲ್ಲ ನಾವು ಎಂದಿದ್ದ ಹಿಂದೂ ಮಹಾಸಭಾದ ಧರ್ಮೇಂದ್ರ ಬಂಧನ

ಹಿಂದೂಗಳ ವಿಚಾರಕ್ಕೆ ಬಂದ್ರೆ ಗಾಂಧಿಯನ್ನೇ ಬಿಟ್ಟಿಲ್ಲ ನಾವು ಎಂದಿದ್ದ ಧರ್ಮೇಂದ್ರ
Last Updated 19 ಸೆಪ್ಟೆಂಬರ್ 2021, 13:22 IST
ಅಕ್ಷರ ಗಾತ್ರ

ಮಂಗಳೂರು: ‘ಹಿಂದೂ ವಿರೋಧಿ ವಿಚಾರ ಬಂದಾಗ ನಾವು ಗಾಂಧೀಜಿಯನ್ನೇ ಬಿಟ್ಟಿಲ್ಲ.ನೀವು ಯಾವ ಲೆಕ್ಕ?’ ಎಂದು ಮುಖ್ಯಮಂತ್ರಿ ವಿರುದ್ಧ ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಘಟಕದಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರನ್ನು ಮಂಗಳೂರು ನಗರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಮೈಸೂರಿನಲ್ಲಿ ದೇಗುಲ ತೆರವು ವಿಷಯಕ್ಕೆ ಸಂಬಂಧಿಸಿದಂತೆ ಶನಿವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಧರ್ಮೇಂದ್ರ, ‘ಹಿಂದೂಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿ, ಗಾಂಧಿ ಹತ್ಯೆ ಮಾಡಲಿಕ್ಕಾಗುತ್ತದೆ ಎಂದಾದರೆ, ನಿಮ್ಮ ವಿಚಾರದಲ್ಲಿ ನಾವು ಆಲೋಚನೆ ಮಾಡಲು ಸಾಧ್ಯವಿಲ್ಲ ಎನ್ನುತ್ತೀರಾ’ ಎಂದು ಪ್ರಶ್ನಿಸಿದ್ದರು.

ಧರ್ಮೇಂದ್ರ ವಿರುದ್ಧ ಬೆಂಗಳೂರಿನ ಲೋಹಿತ್ ಕುಮಾರ್ ಸುವರ್ಣ ಎಂಬುವರು ಮಂಗಳೂರಿನ ಬರ್ಕೆ ಪೊಲೀಸರಿಗೆ ದೂರು ನೀಡಿದ್ದರು.ಆದರೆ, ಆ ಬಳಿಕ ಧರ್ಮೇಂದ್ರ ವಿಡಿಯೊ ಮೂಲಕ ‘ಗಾಂಧಿ ಹತ್ಯೆ’ ಎಂಬ ಪದ ಬಳಕೆ ಮಾಡಿದ್ದಕ್ಕೆ ಕ್ಷಮೆಯಾಚಿಸಿದ್ದರು.

ಸಮರ್ಥನೆ:‘ಮಹಾಸಭಾದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ನೀಡಿದ ಹೇಳಿಕೆ ಸರಿಯಾಗಿದೆ’ ಎಂದು ಸಮರ್ಥಿಸಿಕೊಂಡಿರುವಮಹಾಸಭಾದ ರಾಜ್ಯ ಘಟಕದಅಧ್ಯಕ್ಷ ರಾಜೇಶ್ ಪವಿತ್ರನ್, ‘ಮಹಾಸಭಾದಿಂದ ಉಚ್ಚಾಟಿತ ವ್ಯಕ್ತಿಯ ಪ್ರಚೋದನೆಯಿಂದ ಬಿಜೆಪಿ ಈ ಷಡ್ಯಂತ್ರ ಮಾಡುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ಇಲ್ಲದವರ ವಿರುದ್ಧವೂ ಎಫ್‌ಐಆರ್ ಮಾಡಲಾಗುತ್ತಿದೆ’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT