ಉಳ್ಳಾಲ: ಭಾರತದ ಮೇಲೆ ಆದ ಆಕ್ರಮಣಗಳಿಗೆ ಇಲ್ಲಿನ ಸಂಸ್ಕೃತಿ ನಾಶ ಮಾಡಲು ಸಾಧ್ಯವಾಗಿಲ್ಲ ಎಂದು ವಕೀಲ ಪ್ರಸಾದ್ ಕುಮಾರ್ ರೈ ಬಿ.ಸಿ.ರೋಡ್ ಹೇಳಿದರು.

ಉಳ್ಳಾಲ ತಾಲ್ಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಕುರ್ನಾಡು, ಪಜೀರು, ಬೋಳಿಯಾರ್, ಚೇಳೂರು, ಸಜಿಪನಡು, ಸಜಿಪಪಡು ಗ್ರಾಮಗಳನ್ನೊಳಗೊಂಡ ಕುರ್ನಾಡು ಮಂಡಲದ ಮುಡಿಪುವಿನಲ್ಲಿ ಭಾನುವಾರ ನಡೆದ ಹಿಂದೂ ಸಂಗಮದಲ್ಲಿ ಮಾತನಾಡಿದರು.

ಎಲ್ಲರಿಗೂ ಒಳಿತಾಗಲಿ ಎನ್ನುವ ಸಂಸ್ಕೃತಿ ನಮ್ಮದು. ಶತ್ರು ಪಾಳಯದ ಮೇಲೆ ದಾಳಿ ಮಾಡುವುದೂ ನಮಗೆ ತಿಳಿದಿದೆ. ನಮ್ಮ ಶಕ್ತಿಯನ್ನು, ಸಾಮರ್ಥ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಅಗತ್ಯವಿದೆ. ಕುಟುಂಬ ಪದ್ಧತಿ ಸುದೃಢಗೊಳಿಸಬೇಕಿದೆ. ಸಾಮಾಜಿಕ ಸಾಮರಸ್ಯ ಬೆಳೆಸೋಣ ಎಂದರು.

ಹಿರಿಯರಾದ ಸೇಸಪ್ಪ ಟೈಲರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಡಿಪ್ರದಾನರಾದ ಗುಣಕರ ಆಳ್ವ ಯಾನೆ ರಾಮ ರೈ, ಕೃಷಿಕರಾದ ಪರಮೇಶ್ವರ ಸಪಲ್ಯ, ಹಿರಿಯರಾದ ಚಿನ್ನಯ್ಯ ಸಾಲಿಯಾನ್, ಸೂರ್ಯನಾರಾಯಣ ಭಟ್, ವಿಠಲ ಆಚಾರ್ಯ, ದೈವ ನರ್ತಕ ಸುಂದರ ನಲಿಕೆ, ಧರ್ಮಣ್ಣ ಬೆಳ್ಚಾಡ ರಾಮಣ್ಣ ನಾಯಕ್ ಉಪಸ್ಥಿತರಿದ್ದರು. ಮಹಿಳಾ ಸಂಚಾಲಕಿ ತುಳಸಿ ನಿತಿನ್ ಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ್ ಸ್ವಾಗತಿಸಿದರು. ಶ್ರೇಯಸ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.