ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಸಿತ ಭಾರತದ ಕನಸು ನನಸಾಗುತ್ತಿದೆ: ನಳಿನ್

Published 13 ಮಾರ್ಚ್ 2024, 15:37 IST
Last Updated 13 ಮಾರ್ಚ್ 2024, 15:37 IST
ಅಕ್ಷರ ಗಾತ್ರ

ಮೂಡುಬಿದಿರೆ: ಮೂಡುಬಿದಿರೆಯ ಶಿರ್ತಾಡಿ ಕಜೆ ಗುಂಡಡಪ್ಪು - ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಹೊಸಂಗಡಿಗೆ ಸಂಪರ್ಕ ಕಲ್ಪಿಸುವ ಕೂಡು ರಸ್ತೆ ಸಹಿತ ನಿರ್ಮಿಸಲಾದ ಸೇತುವೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್‌ ಮಂಗಳವಾರ ಲೋಕಾರ್ಪಣೆ ಮಾಡಿದರು.

ದ.ಕ.ಜಿಲ್ಲೆಗೆ ಗ್ರಾಮ ಸಡಕ್ ಯೋಜನೆಯ ಮೂಲಕ ₹400 ಕೋಟಿ ಬಿಡುಗಡೆಯಾಗಿದೆ. ಕೇಂದ್ರೀಯ ರಸ್ತೆ ನಿಧಿಯಿಂದ ₹159 ಕೋಟಿ ಅನುದಾನ ಬಂದಿದೆ. ಹೆಚ್ಚಿನ ರಾಷ್ಟ್ರೀಯ ಹೆದ್ದಾರಿಗಳು ಚತುಷ್ಪಥವಾಗುತ್ತಿದ್ದು ಪ್ರಯಾಣದ ಅವಧಿ ತಗ್ಗಲಿದೆ’ ಎಂದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ‘ಸೇತುವೆ ಲೋಕಾರ್ಪಣೆಯಿಂದ ಎರಡು ತಾಲ್ಲೂಕುಗಳನ್ನು ಸಂಪರ್ಕ ಹತ್ತಿರವಾಗಿದೆ’ ಎಂದರು.

ಶಿರ್ತಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಲತಾ ಹೆಗ್ಡೆ, ಮಾಂಟ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ ಪೂಜಾರಿ, ವಾಲ್ಪಾಡಿ ಗ್ರಾ.ಪಂ.ಸದಸ್ಯ ಪ್ರದೀಪ್, ಕಂದೀರು ಕ್ಷೇತ್ರದ ಆಡಳಿತದಾರ ಸೋಮನಾಥ ಶಾಂತಿ, ಶಿರ್ತಾಡಿಯ ಅನಿಲ್ ಡಿಸೋಜ, ಪುರಸಭೆ ಸದಸ್ಯೆ ಕುಶಲ ಯಶೋಧರ, ದಿನೇಶ್ ಕುಮಾರ್ , ಬಿಜೆಪಿ ಮಂಡಲ ಪ್ರ.ಕಾರ್ಯದರ್ಶಿ ರಂಜಿತ್ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT