ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಬಿಗೆ ಹಾಂಗ್ಯೊ ಐಸ್‌ಕ್ರೀಮ್ ಸ್ವಾದ

Published 26 ಜನವರಿ 2024, 16:04 IST
Last Updated 26 ಜನವರಿ 2024, 16:04 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಯ ಹಾಂಗ್ಯೊ ಐಸ್‌ಕ್ರೀಮ್ ಕಂಪನಿಯು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಆಡುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಐಸ್‌ಕ್ರೀಮ್ ಪಾಲುದಾರ ಆಗಿದೆ.

ಈ ಕುರಿತ ಒಡಂಬಡಿಕೆಗೆ ಬೆಂಗಳೂರಿನಲ್ಲಿ ಈಚೆಗೆ ಆರ್‌ಸಿಬಿ ಮತ್ತು ಹ್ಯಾಂಗ್ಯೊದ ಮುಖ್ಯಸ್ಥರು ಸಹಿ ಮಾಡಿದ್ದು ಈ ಬಾರಿ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿಯ ಪ್ರತಿ ಪಂದ್ಯಗಳಲ್ಲೂ ಐಸ್‌ಕ್ರೀಮ್‌ನ ಸ್ವಾದ ಮೇಳೈಸಿ ಪ್ರೇಕ್ಷಕರಿಗೆ ಹೊಸ ಅನುಭೂತಿ ಸಿಗಲಿದೆ.

‘ಆರ್‌ಸಿಬಿ ಜೊತೆಯಲ್ಲಿ ರೋಮಾಂಚಕ ಪಯಣ ಆರಂಭವಾಗುತ್ತಿದ್ದು ಇದು ಐಸ್‌ಕ್ರೀಂ ಉದ್ಯಮಕ್ಕೆ ಹೊಸ ಭಾಷ್ಯ ಬರೆಯಲಿದೆ. ಕ್ರಿಕೆಟ್‌ನ ರೋಚಕತೆಯೊಂದಿಗೆ ಹಾಂಗ್ಯೊ ಐಸ್ ಕ್ರೀಮ್‌ನ ಹಲವು ಬಗೆಯ ಐಸ್‌ಕ್ರೀಮ್‌ಗಳು ಕ್ರೀಡಾಂಗಣದಲ್ಲಿ ಸಂಭ್ರಮ ಹೆಚ್ಚಿಸಲಿವೆ’ ಎಂದು ಹಾಂಗ್ಯೊ ಐಸ್‌ಕ್ರೀಮ್‌ ಕಂಪನಿಯ ಪ್ರಕಟಣೆ ತಿಳಿಸಿದೆ.

ಹಾಂಗ್ಯೊ ಐಸ್‌ಕ್ರೀಮ್‌ ಸದ್ಯ ಈ ಉದ್ಯಮದ ಟಾಪ್ ಬ್ರಾಂಡ್‌ಗಳಲ್ಲಿ ಒಂದಾಗಿದ್ದು 30 ಲಕ್ಷ ಗ್ರಾಹಕರನ್ನು ಹೊಂದಿದೆ. ದಿನಕ್ಕೆ 1.2 ಲಕ್ಷ ಲೀಟರ್‌ಗಳಷ್ಟು ಉತ್ಪಾದನಾ ಸಾಮರ್ಥ್ಯ ಕಂಪನಿಗೆ ಇದ್ದು 30 ಸಾವಿರ ರಿಟೇಲ್ ಶಾಪ್‌ಗಳನ್ನು ಹೊಂದಿದೆ. 330 ಚಾನಲ್ ಪಾಲುದಾರರು ಇದ್ದು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. 2002ರಲ್ಲಿ ಸ್ಥಾಪನೆಯಾದ ಕಂಪನಿ 7 ರಾಜ್ಯಗಳನ್ನು ವ್ಯಾಪಿಸಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT