ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ ಕೊಡುಗೆ ಮರೆತಿರುವುದು ವಿಷಾದನೀಯ: ಪ್ರೊ.ಕಾನೂನ್ಗೊ

Last Updated 30 ಜನವರಿ 2023, 4:43 IST
ಅಕ್ಷರ ಗಾತ್ರ

ಮುಡಿಪು: ಭಾರತದ ಪ್ರಜಾತಾಂತ್ರಿಕ ರಾಜಕಾರಣದ ವಿಕಾಸದಲ್ಲಿ ನೆಹರೂ ಅವರ ಕೊಡುಗೆ ಅಪಾರ. ಭಾರತದ ಪ್ರಜಾತಂತ್ರವನ್ನು ಸಾಂಸ್ಥಿಕ ರೂಪದಲ್ಲಿ ಅವರು ನೆಲೆಯೂರಿಸಿದ್ದಾರೆ. ಆದರೆ, ಇಂದು ಅವರ ಕೊಡುಗೆಗಳನ್ನು ಮರೆತಿರುವುದು ವಿಷಾದನೀಯ ಎಂದು ನೆದರ್‌ಲೆಂಡ್‌ ಲೈಡನ್ ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರಜ್ಞ ಪ್ರೊ.ಪ್ರಲಯ್ ಕಾನೂನ್ಗೊ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾಲಯದ ನೆಹರೂ ಚಿಂತನ ಕೇಂದ್ರವು ಇಂಗ್ಲಿಷ್ ಮತ್ತು ಸಮಾಜಶಾಸ್ತ್ರ ವಿಭಾಗಗಳ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ವಿಶೇಷ ಉಪನ್ಯಾಸಗಳ ಸರಣಿ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.

‘ಪ್ರಸ್ತುತ ಭಾರತದ ರಾಜಕಾರಣದಲ್ಲಿ ಹಿಂದುತ್ವದ ಪ್ರಭಾವ ನೆಲೆಯೂರಿದೆ. ಹಿಂದುತ್ವ ಭಾರತದ ರಾಜಕಾರಣದಲ್ಲಿ ಪ್ರಭಾವಶಾಲಿಯಾಗಿ ಮುಂಚೂಣಿಗೆ ಬರಲು ಅನೇಕ ಕಾರಣಗಳಿವೆ’ ಎಂದರು.

ಅವರು ಆಧುನಿಕ ಭಾರತದ ರಾಜಕಾರಣದ ವಿವಿಧ ಆಯಾಮಗಳ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು.

ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ.ಎಸ್ ಯಡಪಡಿತ್ತಾಯ ಉದ್ಘಾಟಿಸಿದರು. ನೆಹರೂ ಚಿಂತನ ಕೇಂದ್ರ ಪ್ರಭಾರ ನಿರ್ದೇಶಕ ಪ್ರೊ.ರಾಜಾರಾಮ ತೋಳ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ವಿನಯ್ ರಜತ್ ವಂದಿಸಿದರು. ಝೈಬುನೀಸ ರಝಾಕ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT