ಭಾನುವಾರ, ಅಕ್ಟೋಬರ್ 2, 2022
18 °C

ಮಂಗಳೂರು: ಜೆಇಇ ಮೇನ್‌–2: ಸಿಎಫ್‌ಎಎಲ್ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಜೆಇಇ ಮೇನ್‌–2 ಪರೀಕ್ಷೆ ಫಲಿತಾಂಶದಲ್ಲಿ ಇಲ್ಲಿನ ಸಿಎಫ್‌ಎಎಲ್‌ ವಿದ್ಯಾರ್ಥಿ ಅನಿಶ್ ಆರ್. ಜೋಯಿಷಿ 99.857 (ಎಐಆರ್ 1383) ಪರ್ಸೆಂಟೈಲ್‌ನೊಂದಿಗೆ ಅಖಿಲ ಭಾರತ ಶ್ರೇಣಿಯಲ್ಲಿ ಟಾಪರ್ ಆಗಿದ್ದಾರೆ.

ಎಂಟು ವಿದ್ಯಾರ್ಥಿಗಳು 99 ಪರ್ಸೆಂಟೈಲ್‍ಕ್ಕಿಂತ ಹೆಚ್ಚು ಮತ್ತು 14 ವಿದ್ಯಾರ್ಥಿಗಳು 98 ಪರ್ಸೆಂಟೈಲ್‍ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ರಾಷ್ಟ್ರೀಯ ಒಟ್ಟು ಸರಾಸರಿ ಶೇ 2ಕ್ಕೆ ಹೋಲಿಸಿದರೆ ಇದು ಸಾಧನೆಯಾಗಿದೆ.. ಜೆಇಇ-ಮೇನ್ ಅನ್ನು 31 ಎನ್‍ಐಟಿಗಳು, 25 ಐಐಐಟಿಗಳು, 28 ಸರ್ಕಾರಿ ಅನುದಾನಿತ ತಾಂತ್ರಿಕ ಸಂಸ್ಥೆಗಳು (ಜಿಎಫ್‍ಟಿಐಗಳು) ಮತ್ತು ಕೆಲವು ಖಾಸಗಿ ಸಂಸ್ಥೆಗಳಿಗೆ ಪ್ರವೇಶಕ್ಕಾಗಿ ನಡೆಸಲಾಗುತ್ತದೆ. ಹೆಚ್ಚುವರಿಯಾಗಿ, ಜೆಇಇ ಮೇನ್‍ನಲ್ಲಿ ಕಟ್-ಆಫ್ ಸ್ಕೋರ್ ಗಳಿಸಿದ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‌ಡ್‌ನಲ್ಲಿ ಪರೀಕ್ಷೆ ಬರೆಯಲು ಅರ್ಹತೆ ಪಡೆಯುತ್ತಾರೆ.

ಈ ವರ್ಷ ಜೆಇಇ ಅಡ್ವಾನ್ಸ್‌ಡ್‌ಗೆ ಅರ್ಜಿ ಸಲ್ಲಿಸಲು ಕಟ್-ಆಫ್ ಸ್ಕೋರ್ 88.412 ಪರ್ಸೆಂಟೈಲ್‌ ಆಗಿದೆ. ಸಿಎಫ್‌ಎಲ್‌ನಲ್ಲಿ ಪಾರ್ಥ್ ಪುಂಡಲೀಕ್ ಪೈ (99.6555), ಆರ್ಯನ್ ಅಜಿತ್ ದೇವ್ (99.5540), ಪ್ರಭಾವ್ ಶೆಟ್ಟಿ (99.5219), ಅನಂತಕೃಷ್ಣ ಕೆ (99.4279), ಉಪಾಸನಾ ನಾಯಕ್ (99.3807), ಶ್ರೇಯಸ್ ಎಸ್ (99.2401), ಸಂಜನಾ ಡಿ.ಎಸ್ (99.2048), ಅಡೆಲ್ ಸಾರಾ ಡಿಸೋಜ (98.7281647), ವಿಶಾಲ್ ಕಾಮತ್ (98.7096674), ವಾರಾಹಿ ಸುವರ್ಣ (98.4828599), ರಾಧಿಕಾ (98.4336024), ಶ್ರೇಯಸ್ ಅಡಿಗ (98.031154), ದೀಪಕ್ ಕೆ ನಾಯಕ್ (98.0293952), ಕೆ.ಆರ್. ರಕ್ಷಿತ್ (97.7441396), ಪ್ರಣೀತಾ ಪ್ರವೀಣ್ ಕಲ್ಬಾವಿ (97.6613972), ಅರವಿಂದ ಮಾಲಾ ಶೆಣೈ (97.6497211), ಕೆ ಎಲ್ ಗಿರೀಶ್ (97.6170412) ಮತ್ತು ಹರ್ಷ ಶ್ರೀಶ್ರೀಮಲ್ (97.1343904) ಸಾಧನೆ ಮಾಡಿದ್ದಾರೆ.
ಜೆಇಇ ಮೇನ್ ಪರೀಕ್ಷೆಯ ಮೀಸಲಾತಿ ವರ್ಗದಲ್ಲಿ ಪಾರ್ಥ್ ಪುಂಡಲೀಕ ಪೈ 385ನೇ ರ್‍ಯಾಂಕ್ ಮತ್ತು ದೀಪಕ್ ಸಿ ನಾಯಕ್ 486ನೇ ರ್‍ಯಾಂಕ್ ಪಡೆದಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.