ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷ 20 ಕಂಬಳ: ಶೆಟ್ಟಿ

ಜಿಲ್ಲಾ ಕಂಬಳ ಸಮಿತಿಯ ಮಹಾಸಭೆ
Last Updated 6 ಅಕ್ಟೋಬರ್ 2019, 13:38 IST
ಅಕ್ಷರ ಗಾತ್ರ

ಮೂಡುಬಿದಿರೆ: ‘2019-20ನೇ ಸಾಲಿಗೆ ಜಿಲ್ಲೆಯಲ್ಲಿ ಸುಮಾರು 20 ಕಂಬಳಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ನವೆಂಬರ್ 23ರಿಂದ ಮಾರ್ಚಾ ಮೂರನೇ ವಾರದವರೆಗೆ ಕಂಬಳ ಕ್ರೀಡೆ ನಡೆಯಲಿದೆ. ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು’ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ ತಿಳಿಸಿದರು.

ಸಮಾಜಮಂದಿರದಲ್ಲಿ ಭಾನುವಾರ ನಡೆದ ಜಿಲ್ಲಾ ಕಂಬಳ ಸಮಿತಿಯ ಮಹಾಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಕಂಬಳ ಪ್ರಾರಂಭವಾಗಿ 24 ಗಂಟೆ ಒಳಗೆ ಮುಗಿಸುವುದು. ಕಾನೂನು ಪಾಲನೆ ಹೆಚ್ಚಿನ ಒತ್ತು ನೀಡಿ ಕಂಬಳ ಆಯೋಜಿಸುವುದು. ಕೋಣದ ಓಟಗಾರರಿಗೆ ಮತ್ತು ತರಬೇತಿದಾರರಿಗೆ ನಿಯಮಗಳನ್ನು ಅಳವಡಿಸಿಕೊಂಡು ಶಿಸ್ತುಬದ್ಧವಾಗಿ ಕಂಬಳ ನಡೆಸುವ ಕುರಿತು ಚರ್ಚೆನಡೆಯಿತು.

ಗೌರವಾಧ್ಯಕ್ಷ ಶಾಂತರಾಮ ಶೆಟ್ಟಿ ಬಾರ್ಕೂರು, ಸಾಂಪ್ರದಾಯಿಕ ಕಂಬಳದ ವೆಂಕಟ ಪೂಜಾರಿ, ಉಪಾಧ್ಯಕ್ಷರಾದ ದಿನೇಶ್ ಶೆಟ್ಟಿ ಮಾಳ, ಚಂದ್ರಹಾಸ ಸಾಧು ಸನಿಲ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಕೊಳಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ, ವಾಮಂಜೂರು ತಿರುವೈಲ್‌ಗುತ್ತು ನವೀನ್ ಚಂದ್ರ ಆಳ್ವ, ಪುತ್ತೂರು ಕಂಬಳ ಸಮಿತಿ ಚಂದ್ರಹಾಸ ಶೆಟ್ಟಿ, ಅನಿಲ್ ಶೆಟ್ಟಿ ಮಂಕುತೋಟಗುತ್ತು, ನಂದಳಿಕೆ ಶ್ರೀಕಾಂತ್ ಭಟ್, ಮುಚ್ಚೂರು ಲೋಕೇಶ್ ಶೆಟ್ಟಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೀವ್ ಶೆಟ್ಟಿ ಎಡ್ತೂರು, ತೀರ್ಪುಗಾರರ ಸಂಚಾಲಕ ಸುಧಾಕರ ಶೆಟ್ಟಿ, ತೀಪರ್ುಗಾರ ವಿದ್ಯಾಧರ ಜೈನ್, ಸಿದ್ಧಕಟ್ಟೆ ಕರ್ಪಿ ಜನಾರ್ದನ ನಾಯ್ಕ್, ಅಪ್ಪು ಯಾನೆ ವಲೇರಿಯನ್ ಡೇಸ, ಸುಧೀಶ್ ಆರಿಗ, ಪ್ರಕಾಶ ಕಜೆಕಾರು ಸಭೆಯಲ್ಲಿ ಸಲಹೆ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT