ಮಂಗಳೂರು: ‘ಪ್ರತಿಯೊಬ್ಬ ಹಿಂದೂಗಳ ಮನೆಯಲ್ಲಿ ತಲವಾರು ಇರಲಿ. ಹೆಂಗಸರು ಚೂರಿ ಇಟ್ಟುಕೊಳ್ಳಿ. ಇವತ್ತಿನ ಕಾಲಘಟ್ಟದಲ್ಲಿ ಇದು ಯೋಚನೆ ಮಾಡಬೇಕಾದ ಸಂಗತಿ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ರಾಜ್ಯದ ಗಡಿಭಾಗದಲ್ಲಿರುವ ಕೇರಳದ ವರ್ಕಾಡಿಯ ನೀರೊಳಿಕೆಯ ಶ್ರೀಮಾತಾ ಚಾರಿಟಬಲ್ ಟ್ರಸ್ಟ್ ಮತ್ತು ಶ್ರೀಮಾತಾ ಸೇವಾಶ್ರಮ ಈಚೆಗೆ ಆಯೋಜಿಸಿದ್ದ ದಶಮಾನೋತ್ಸವ ಚಂಡಿಕಾಯಾಗದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಹೆಣ್ಣು ಮಕ್ಕಳು ವ್ಯಾನಿಟ ಬ್ಯಾಗಿನಲ್ಲಿ ಸ್ನೋ, ಪೌಡರ್, ಬಾಚಣಿಗೆ ಇಟ್ಟುಕೊಂಡಿರುತ್ತಾರೆ. ಅದರ ಜೊತೆಗೆ ಚೂರಿಯನ್ನೂ ಇಟ್ಟುಕೊಳ್ಳಬೇಕು. ಆರು ಇಂಚಿನ ಚೂರಿ ಇಟ್ಟುಕೊಳ್ಳಲು ಪರವಾನಗಿ ಬೇಡ’ ಎಂದರು.

‘ಆಕ್ರಮಣದಿಂದ ತಪ್ಪಿಸಿಕೊಳ್ಳುವುದಕ್ಕೆ ಯತ್ನಿಸಿದರೆ ನೀವು ಹೋದಿರಿ ಎಂದೇ ಲೆಕ್ಕ. ನೀವು ಹೇಡಿಗಳಾದರೆ ಮಾತ್ರ ನಿಮ್ಮನ್ನು ಹೆದರಿಸುವುದು. ಅದರ ಬದಲು ಚೂರಿ ತೋರಿಸಿದರೆ ಸಾಕು. ಎದುರಿನವ ಪುಕ್ಕಲ’ ಎಂದರು.

‘ಮನೆಯಲ್ಲಿ ಒಂದೊಂದು ತಲವಾರು ಇಟ್ಟುಕೊಳ್ಳಬೇಕು. ಇವತ್ತಿನ ಕಾಲದ ಕರೆ ಅದು. ನಾವು ಶಕ್ತಿವಂತರಾಗಿ ಗಟ್ಟಿಯಾಗಿ ನಿಲ್ಲಬೇಕು. ನಮ್ಮ ಹತ್ತಿರ ಏನೂ ಇಲ್ಲದೇ, ನೂರು ಜನ ಇದ್ದೇವೆ ಎಂದರೆ ಅವರು ಕತ್ತರಿಸುವುದೇ. ಮೊನ್ನೆ ಪೆಹಲ್ಗಾಮ್ನಲ್ಲಿ ಮಾಡಿದ ಹಾಗೆ, ಗುಂಡು ಹಾಕಿದರೆ ಮುಗೀತು ಕತೆ. ಮೊನ್ನೆ ಅಲ್ಲಿ ನೂರು ಜನ ಇದ್ದಿರಬಹುದು. ಯಾರಾದರೂ ಒಬ್ಬ ತಲವಾರು ತೋರಿಸಿದ್ದಿದ್ದರೆ ಕತೆಯೇ ಬೇರೆ ಆಗುತ್ತಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.