ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾರ್ದನ ಪೂಜಾರಿ– ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ: ಭಾವನಾತ್ಮಕ ವಿಡಿಯೊ ವೈರಲ್

Last Updated 12 ಅಕ್ಟೋಬರ್ 2021, 12:37 IST
ಅಕ್ಷರ ಗಾತ್ರ

ಮಂಗಳೂರು:ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಭಾನುವಾರ ‘ಮಂಗಳೂರು ದಸರಾ’ ಉದ್ಘಾಟನೆಗಾಗಿ ಬಂದಿದ್ದ ಕೇಂದ್ರದ ಮಾಜಿ ಸಚಿವ ಹಾಗೂ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಅವರನ್ನು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿಯಾದರು.

ಈ ಸಂದರ್ಭ ಸಚಿವರು ಮೊಣಕಾಲೂರಿ ಜನಾರ್ದನ ಪೂಜಾರಿ ಅವರಿಗೆ ನಮಸ್ಕರಿಸಿ, ಆತ್ಮೀಯವಾಗಿ ಮಾತುಕತೆ ನಡೆಸಿದ ಭಾವನಾತ್ಮಕ ಸನ್ನಿವೇಶದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಜೊತೆಯಲ್ಲಿದ್ದ ಸಚಿವಕೋಟ ಪುತ್ರಿ ಸಹ ಜನಾರ್ದನ ಪೂಜಾರಿಗೆ ಕಾಲಿಗೆ ನಮಸ್ಕರಿಸಿ ಗೌರವ ತೋರಿದ್ದಾರೆ.

ಈ ಸಂದರ್ಭ ಜನಾರ್ದನ ಪೂಜಾರಿಯವರು ಕೋಟ ಅವರಿ ಮತ್ತು ಅವರ ಮಗಳಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT