ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಡ್ಲ ಹೋಮಿಯೊಕಾನ್ ನಾಳೆ

Published 29 ಜೂನ್ 2024, 6:17 IST
Last Updated 29 ಜೂನ್ 2024, 6:17 IST
ಅಕ್ಷರ ಗಾತ್ರ

ಮಂಗಳೂರು: ಭಾರತೀಯ ಹೋಮಿಯೊಪತಿ ವೈದ್ಯರ ಸಂಘದ ಕರ್ನಾಟಕ ಘಟಕದ ನೇತೃತ್ವದಲ್ಲಿ ‘ಕುಡ್ಲ ಹೋಮಿಯೊಕಾನ್’ ರಾಷ್ಟ್ರೀಯ ಹೋಮಿಯೊಪತಿ ಸಮ್ಮೇಳನ ಮತ್ತು ವಿಚಾರ ಸಂಕಿರಣವು ಜೂ.30ರಂದು ಅತ್ತಾವರದ ಅವತಾರ್ ಕನ್ವೆನ್ಶನ್ ಹಾಲ್‌ನಲ್ಲಿ ನಡೆಯಲಿದೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಹೋಮಿಯೊಪತಿ ವೈದ್ಯರ ಸಂಘದ ಕರ್ನಾಟಕ ಘಟಕದ ಅಧ್ಯಕ್ಷ ಡಾ. ಪ್ರವೀಣ್ ರಾಜ್ ಆಳ್ವ, ‘ಸಿದ್ಧಾಂತದಿಂದ ಕಾರ್ಯರೂಪಕ್ಕೆ’ ಎಂಬ ಧ್ಯೇಯವಾಕ್ಯದೊಂದಿಗೆ ದೇಶ– ವಿದೇಶಗಳ ಹೋಮಿಯೊಪತಿ ತಜ್ಞರು, ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಡಿ ಸೇರಿಸಲಾಗುವುದು. ಹೋಮಿಯೊಪತಿ ಕ್ಷೇತ್ರದಲ್ಲಿ ಆಗಿರುವ ಸಮೀಕ್ಷೆಗಳು, ಸಂಶೋಧನಾ ಪ್ರಬಂಧ, ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಪಿ.ವಿ. ವೆಂಕಟರಾಮನ್, ಡಾ. ವಿನೀತ್ ಸಿದ್ದಾರ್ಥನ್ ಭಾಗವಹಿಸುವರು. ಆಳ್ವಾಸ್ ಹೋಮಿಯೊಪತಿಕ್ ಮೆಡಿಕಲ್ ಕಾಲೇಜು, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಕಾರ್ಯಕ್ರಮಕ್ಕೆ ಸಹಯೋಗ ನೀಡಿವೆ. ಜೂ.30ರಂದು ಬೆಳಿಗ್ಗೆ 9 ಗಂಟೆಯಿಂದ ಗೋಷ್ಠಿಗಳು ಆರಂಭವಾಗಲಿದ್ದು, 12.15ಕ್ಕೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಸಮ್ಮೇಳನ ಉದ್ಘಾಟಿಸುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಆಯುಷ್ ಕಮಿನಷನರ್ ಶ್ರೀನಿವಾಸಲು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ, ಫಾದರ್ ಮುಲ್ಲರ್ ಶಿಕ್ಷಣ ಸಂಸ್ಥೆ ನಿರ್ದೇಶಕ ಫಾದರ್ ಫಾಸ್ಟಿನ್ ಲೋಬೊ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಇಕ್ಬಾಲ್ ಅಹಮ್ಮದ್ ಭಾಗವಹಿಸುವರು ಎಂದು ಹೇಳಿದರು.

ಸಂಘಟಕರಾದ ಡಾ. ಪ್ರವೀಣ್‌ಕುಮಾರ್ ರೈ, ಡಾ. ಅವಿನಾಶ್ ವಿ.ಎಸ್, ಡಾ. ತ್ರಿವೇಣಿ ಬಂಗೇರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT