ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುತ್ತೂರು | ಗುಟ್ಟಾಗಿ ನಡೆದ ‘ದಸರಾ ಕ್ರೀಡಾ ಕೂಟ’

ಅವ್ಯವಸ್ಥೆ: ಸ್ಪರ್ಧಿಗಳ ಅಸಮಾಧಾನ
Published : 22 ಸೆಪ್ಟೆಂಬರ್ 2024, 6:36 IST
Last Updated : 22 ಸೆಪ್ಟೆಂಬರ್ 2024, 6:36 IST
ಫಾಲೋ ಮಾಡಿ
Comments

ಪುತ್ತೂರು: ದಸರಾ ಕ್ರೀಡಾಕೂಟದ ಬಗ್ಗೆ ಪ್ರಚಾರ ನೀಡದೆ ಪುತ್ತೂರು ನಗರದ ಕೊಂಬೆಟ್ಟು ತಾಲ್ಲೂಕು ಕ್ರೀಡಾಂಗಣದಲ್ಲಿ ಶನಿವಾರ ತಾಲ್ಲೂಕು ಮಟ್ಟದ ದಸರಾ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು. ಗ್ರಾಮೀಣ ಭಾಗದ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಬೇಕಾಗಿದ್ದ ಈ ಕ್ರೀಡಾಕೂಟ ಶಾಲೆ–ಕಾಲೇಜು ವಿದ್ಯಾರ್ಥಿಗಳ ಕೂಟವಾಗಿ ಬದಲಾಗಿತ್ತು. ತಾಲ್ಲೂಕಿನ ಯುವಕ ಹಾಗೂ ಯುವತಿ ಮಂಡಲಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ದಸರಾ ಗ್ರಾಮೀಣ ಕ್ರೀಡಾಕೂಟದಲ್ಲಿ ಪ್ರತಿ ವರ್ಷವೂ ಗ್ರಾಮೀಣ ಯುವಕ-ಯುವತಿ ಮಂಡಲಗಳ ಸದಸ್ಯರು ಹೆಚ್ಚಾಗಿ ಭಾಗವಹಿಸುತ್ತಿದ್ದರು. ಯುವಜನಸೇವಾ ಕ್ರೀಡಾ ಇಲಾಖೆ, ತಾಲ್ಲೂಕು ಪಂಚಾಯಿತಿ ಹಾಗೂ ಶಿಕ್ಷಕರ ಸಹಯೋಗದಲ್ಲಿ ದಸರಾ ಕ್ರೀಡಾಕೂಟವನ್ನು ಹಬ್ಬದ ಮಾದರಿಯಲ್ಲಿ ನಡೆಸಲಾಗುತ್ತಿತ್ತು. ಈ ಸಂಬಂಧ ಮಾದ್ಯಮಗಳ ಮೂಲಕ ಮಾಹಿತಿ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಪ್ರಚಾರ ನೀಡದೆ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ನಡೆಸಲಾಗಿದೆ.

ಯುವಜನಸೇವಾ ಇಲಾಖೆಯ ನೇತೃತ್ವದಲ್ಲಿ ಆಯೋಜನೆ ಮಾಡಲಾದ ಈ ಬಾರಿಯ ದಸರಾ ಗ್ರಾಮೀಣ ಕ್ರೀಡಾಕೂಟ ಗ್ರಾಮೀಣ ಪ್ರತಿಭೆಗಳ ಬದಲಾಗಿ ಶಾಲೆ– ಕಾಲೇಜುಗಳ ವಿದ್ಯಾರ್ಥಿಗಳೇ ಭಾಗವಹಿಸಿದ್ದರು.

ಅವ್ಯವಸ್ಥೆ: ಕೊಂಬೆಟ್ಟು ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜನೆಗೊಂಡ ಒಂದು ದಿನದ ಈ ದಸರಾ ಕ್ರೀಡಾಕೂಟ ಅವ್ಯವಸ್ಥೆಯ ಆಗರವಾಗಿತ್ತು. ಹೈಜಂಪ್‌ ಮತ್ತು ಲಾಆಂಗ್‌ ಜಂಪ್‌ ಸ್ಪರ್ಧೆಗಳ ಅಂಕಣಗಳನ್ನು ಮರಳು ಹಾಕಿ ಸಮತಟ್ಟು ಮಾಡಿಲ್ಲ. ಸಮತಟ್ಟಾಗಿಲ್ಲದ ಅಂಕಣದಲ್ಲಿ ಜಿಗಿದು ಸ್ಪರ್ಧಿಗಳು ನೋವು ಅನುಭವಿಸುತ್ತಿದ್ದರು. ಕೊಕ್ಕೊ ಅಂಕಣದಲ್ಲಿ ಗುಂಡಿಗಳೇ ತುಂಬಿದ್ದವು. ಮಳೆಗಾಲದಲ್ಲಿ ದುಃಸ್ಥಿತಿಯಲ್ಲಿದ್ದ ಟ್ರ್ಯಾಕ್ ಅನ್ನು ಸರಿಪಡಿಸಿಲ್ಲ. ಇದರಿಂದಾಗಿ ಸ್ಪರ್ಧಿಗಳು ಸಂಘಟಕರ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದರು.

ಕ್ರೀಡಾಕೂಟದ ಜವಾಬ್ದಾರಿ ಹೊತ್ತಿರುವ ಇಲಾಖೆ ಅಧಿಕಾರಿ, ನೋಡಲ್ ಅಧಿಕಾರಿ ‘ಸಮಯಾವಕಾಶ ಇಲ್ಲದ ಕಾರಣದಿಂದಾಗಿ ಸಮಸ್ಯೆಯಾಗಿದೆ’ ಎಂದು ಜಬಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT