ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಜಿರೆ: ಡಿ.12ರಂದು ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ

Published 10 ಡಿಸೆಂಬರ್ 2023, 13:07 IST
Last Updated 10 ಡಿಸೆಂಬರ್ 2023, 13:07 IST
ಅಕ್ಷರ ಗಾತ್ರ

ಉಜಿರೆ: ಧರ್ಮಸ್ಥಳದಲ್ಲಿ ಡಿ.12ರಂದು ಲಕ್ಷ ದೀಪೋತ್ಸವ ನಡೆಯಲಿದ್ದು, ಇದು ಕಾರ್ತಿಕ ಮಾಸದಲ್ಲಿ ಧರ್ಮಸ್ಥಳದಲ್ಲಿ ನಡೆಯುವ ವಿಶೇಷ ಉತ್ಸವವಾಗಿದೆ.

ನಾಡಿನೆಲ್ಲೆಡೆಯಿಂದ ಅಪಾರ ಭಕ್ತರು ಮಂಗಳವಾರ ರಾತ್ರಿ ಧರ್ಮಸ್ಥಳಕ್ಕೆ ಬರುತ್ತಾರೆ. ಧರ್ಮ, ಸಾಹಿತ್ಯ ಮತ್ತು ಲಲಿತಕಲೆಗಳ ತ್ರಿವೇಣಿ ಸಂಗಮವಾದ ಲಕ್ಷದೀಪೋತ್ಸವದಲ್ಲಿ ಸರ್ವಧರ್ಮ, ಸಾಹಿತ್ಯ ಸಮ್ಮೇಳನದಲ್ಲಿ ಧರ್ಮ ಮತ್ತು ಸಾಹಿತ್ಯದ ಬಗ್ಗೆ ಚಿಂತನ-ಮಂಥನ ನಡೆದರೆ, ರಾಜ್ಯಮಟ್ಟದ ವಸ್ತುಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಕ್ಕೆ ಮುದ ನೀಡುತ್ತವೆ.

ಭಕ್ತರು ಬೆಳೆದ ಹೂವು, ಹಣ್ಣುಗಳು, ತರಕಾರಿ ಹಾಗೂ ಧಾನ್ಯಗಳನ್ನು ತಂದು ಕಾಣಿಕೆಯಾಗಿ ಅರ್ಪಿಸುತ್ತಾರೆ.

ಮಂಗಳವಾರ ರಾತ್ರಿ ದೇವಸ್ಥಾನದ ಒಳಾಂಗಣದಲ್ಲಿ ಮಂಜುನಾಥ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಸುತ್ತು, ಚೆಂಡೆಸುತ್ತು, ನಾದಸ್ವರ ಸುತ್ತು, ಸಂಗೀತ ಸುತ್ತು, ಕೊಳಲು ಸುತ್ತು, ಸರ್ವವಾದ್ಯ ಸುತ್ತು ಸಹಿತ 16 ಸುತ್ತುಗಳನ್ನು ಪೂರೈಸಲಾಗುತ್ತದೆ. ಬಳಿಕ ಉತ್ಸವಮೂರ್ತಿಯನ್ನು ಬೆಳ್ಳಿರಥದ ಸ್ವರ್ಣಲೇಪಿತ ಪೀಠದಲ್ಲಿ ಇರಿಸಿ ದೇವಸ್ಥಾನದ ಬಳಿಯಿಂದ ಮುಖ್ಯ ಪ್ರವೇಶದ್ವಾರದ ಬಳಿ ಇರುವ ಗೌರಿಮಾರು ಕಟ್ಟೆಗೆ ಮೆರವಣಿಗೆ ನಡೆಸಿ ರಥೋತ್ಸವ ನಡೆಸಲಾಗುತ್ತದೆ.

ಬೆಂಗಳೂರಿನ ಭಕ್ತರು ಮಂಗಳವಾರ ರಾತ್ರಿ ಅನ್ನಪೂರ್ಣ ಛತ್ರದ ಹಿಂಬದಿಯಲ್ಲಿ ಸಾವಿರಾರು ಭಕ್ತರಿಗೆ ಅನ್ನದಾಸೋಹ ಮಾಡಲಿದ್ದಾರೆ.

ಕಲಾಸೇವೆ: ವಾಲಗ, ಶಂಖ, ಜಾಗಟೆ, ಕಹಳೆ, ಚೆಂಡೆ, ಕರಗ, ಯಕ್ಷಗಾನ ಮೊದಲಾದ ಜನಪದ ಕಲಾವಿದರು ಮಂಗಳವಾರ ಇಡೀ ರಾತ್ರಿ ಕಲಾಸೇವೆ ಅರ್ಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT