ಮಂಗಳೂರು: ತಾಲ್ಲೂಕಿನ ಬಾಳ ಗ್ರಾಮದಲ್ಲಿ ನೆಲದಡಿ ಬಂಡೆ ಕೊರೆದು ನಿರ್ಮಿಸಿರುವ, 80 ಸಾವಿರ ಟನ್ ಸಾಮರ್ಥ್ಯದ ದ್ರವೀಕೃತ ಪಟ್ರೋಲಿಯಂ ಅನಿಲ (ಎಲ್ಪಿಜಿ) ಸಂಗ್ರಹಾಗಾರ ನಿರ್ಮಾಣ ಪೂರ್ಣಗೊಂಡಿದೆ. ಇದು ದೇಶದ ಅತಿ ದೊಡ್ಡ ಎಲ್ಪಿಜಿ ಸಂಗ್ರಹಾಗಾರ.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಕಂಪನಿಗಾಗಿ ಮೇಘ ಎಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಕಂಪನಿಯು ಇದನ್ನು ನಿರ್ಮಿಸಿದೆ.

ಎಂಇಐಎಲ್ನ ತನ್ನ ಎಕ್ಸ್ ಖಾತೆಯ ಮೂಲಕ ಈ ಕುರಿತ ಮಾಹಿತಿಯನ್ನು ಈಚೆಗೆ ಹಂಚಿಕೊಂಡಿದ್ದು, ‘ಸಂಗ್ರಹಾಗಾರಕ್ಕೆ ಸಂಬಂಧಿಸಿದ ಎಲ್ಲ ಪರೀಕ್ಷೆಗಳನ್ನು ಜೂನ್ 6ರಂದು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಕಲ್ಲು ಕೊರೆದು ನಿರ್ಮಿಸಿದ ಗುಹೆಯಲ್ಲಿ ಎಲ್ಪಿಜಿಯನ್ನು ಸಂಗ್ರಹಿಸುವ ದೇಶದ ಎರಡನೇ ವ್ಯವಸ್ಥೆ ಇದು. ಇದುವರೆಗೆ ನಿರ್ಮಿಸಿರುವ ನೆಲದಡಿಯ ಸಂಗ್ರಹಾಗಾರಗಳಲ್ಲಿ ಇದು ಅತಿ ದೊಡ್ಡದು. ಇದರಲ್ಲಿ 80 ಸಾವಿರ ಟನ್ ಎಲ್ಪಿಜಿ ಸಂಗ್ರಹಿಸಲು ಸಾಧ್ಯ’ ಎಂದು ತಿಳಿಸಿದೆ.

ನೆಲದಡಿಯ ಅದ್ಭುತ ಸಂಗ್ರಹಾಗಾರ ಇದಾಗಿದೆ. ಇದಕ್ಕೆ ಸುರಂಗದ ಮೂಲಕ ಸಂಪರ್ಕಿಸುವ 1083 ಮೀ ಉದ್ದದ ದಾರಿ ಇದೆ. ಮೇಲ್ಭಾಗದಲ್ಲಿ ಹಾಗೂ ಕೆಳಗಡೆ ನೀರಿನ ಪರದೆಗಳಿವೆ. 486.2 ಮೀ ಉದ್ದದ ಸಂಪರ್ಕ ಸುರಂಗವಿದೆ. ಅನಿಲ ಸಂಗ್ರಹಿಸುವ ಎರಡು ಗುಹೆಗಳು 220 ಮೀ. ಹಾಗೂ 225 ಮೀ. ಆಳದಲ್ಲಿವೆ ಎಂದು ಕಂಪನಿಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.