ಭಾನುವಾರ, ಆಗಸ್ಟ್ 1, 2021
27 °C

ಮಾಲಾಡಿ : ನಾಯಿ ಮೇಲೆ ಚಿರತೆ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಾಪುರ: ಇಲ್ಲಿಗೆ ಸಮೀಪದ ತೆಕ್ಕಟ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಲಾಡಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ದೇವಾಡಿಗ ಮನೆ ಸಮೀಪ ಸೋಮವಾರ ಸಂಜೆ ದಾಳಿ ಮಾಡಿದ ಚಿರತೆ, ಸಾಕು ನಾಯಿಗೆ ಕಚ್ಚಿ ಗಾಯ ಮಾಡಿದೆ.

ಮಮತಾ ಅವರ ಪತಿ ಸುರೇಶ್ ದೇವಾಡಿಗರ ಸಹೋದರ ಸತೀಶ್ ದೇವಾಡಿಗ ಮನೆಯ ಹೊರಗಡೆ ಮಕ್ಕಳು ಪಠ್ಯ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ನಾಯಿ ಜೋರಾಗಿ ಬೊಗಳಲು ಪ್ರಾರಂಭಿಸಿತು. 

ಮನೆಯವರು ಬಂದು ನೋಡಿದಾಗ ಚಿರತೆ ನಾಯಿಯ ಮೇಲೆ ದಾಳಿ ಮಾಡಿತ್ತು. ಮನೆಯವರ ಕೂಗಿಗೆ ಹೆದರಿ, ನಾಯಿಯನ್ನು ಬಿಟ್ಟು ಚಿರತೆ ಓಡಿದೆ.

ಸೋಮವಾರ ಚಿರತೆ ಕಾಣಿಸಿಕೊಂಡಿರುವ ಮಾಲಾಡಿಯ ಭಾಗದಲ್ಲಿ ಈ ಹಿಂದೆಯೂ ಚಿರತೆಗಳು ಕಾಣಿಸಿಕೊಂಡಿದ್ದವು. ದೇವಸ್ಥಾನ, ಅಂಗನವಾಡಿ, ಶಾಲೆ ಹೀಗೆ ಜನವಸತಿ ಪ್ರದೇಶವಾಗಿರುವ ಈ ಪರಿಸರದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಒಂದೂವರೆ ವರ್ಷದಲ್ಲಿ ನಾಲ್ಕು ಚಿರತೆಗಳನ್ನು ಸೆರೆ ಹಿಡಿದಿತ್ತು.

ಈಗ ಮತ್ತೆ ಚಿರತೆ ದಾಳಿ ನಡೆಸಿದ್ದು, ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.

ಶೀಘ್ರದಲ್ಲಿ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.