ಮಂಗಳೂರು: ಅಪಘಾತ ಪ್ರಕರಣದಲ್ಲಿ ವಶಕ್ಕೆ ಪಡೆದ ಕಾರಿನ ಮೂಲ ದಾಖಲೆಯನ್ನು ಮರಳಿಸಲು ಕಾರಿನ ಮಾಲೀಕರಿಂದ ₹5 ಸಾವಿರ ಲಂಚ ಪಡೆದ ಆರೋಪದ ಮೇಲೆ ಕದ್ರಿಯ ಪೂರ್ವ ಸಂಚಾರ ಠಾಣೆಯ ಹೆಡ್ ಕಾನ್ಸ್ಟೆಬಲ್ ತಸ್ಲಿಂ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

‘ನಗರದ ನಂತೂರು ವೃತ್ತದಲ್ಲಿ ಕಾರು ಮತ್ತು ಸ್ಕೂಟರ್ ನಡುವೆ ಈಚೆಗೆ ಅಪಘಾತ ಸಂಭವಿಸಿದ್ದು, ಈ ಬಗ್ಗೆ ಕದ್ರಿಯ ಸಂಚಾರ ಪೂರ್ವ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಕಾರಿನ ದಾಖಲಾತಿಗಳನ್ನು ಠಾಣೆಗೆ ತಂದು ಕೊಡುವಂತೆ ಆರೋಪಿ ತಸ್ಲೀಂ ತಿಳಿಸಿದ್ದರು. ಅದರಂತೆ ಕಾರಿನ ಮಾಲೀಕರು ದಾಖಲಾತಿಗಳನ್ನು ಒದಗಿಸಿದ್ದರು. ಆ ಬಳಿಕ ಕಾರನ್ನು ಬಿಟ್ಟುಕೊಡುವುದಕ್ಕೆ ₹ 50 ಸಾವಿರ ಲಂಚ ನೀಡುವಂತೆ ಆರೋಪಿಯು ಬೇಡಿಕೆ ಇಟ್ಟಿದ್ದರು. ಈ ವಿಷಯವನ್ನು ಕಾರಿನ ಮಾಲೀಕರು ವಕೀಲರ ಬಳಿ ತಿಳಿಸಿದ್ದರು. ವಕೀಲರು ಠಾಣೆಗೆ ಭೇಟಿ ನೀಡಿದಾಗ ಠಾಣೆಯ ಸಿಬ್ಬಂದಿ ಕಾರಿನ ಮಾಲೀಕರಿಂದ ‘ಕಾರನ್ನು ಸ್ವೀಕರಿಸಿದ್ದೇನೆ’ ಎಂದು ಸಹಿ ಪಡೆದುಕೊಂಡಿದ್ದರು. ಆದರೆ, ಕಾರನ್ನು ಬಿಟ್ಟುಕೊಟ್ಟಿರಲಿಲ್ಲ. ಬಳಿಕ ಕಾರಿನ ಮಾಲೀಕರರ ಮೊಬೈಲನ್ನು ಬಲವಂತದಿಂದ ಪಡೆದುಕೊಂಡು, ನಂತರ ಕಾರನ್ನು ಬಿಟ್ಟುಕೊಟ್ಟಿದ್ದರು’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

‘ಮೊಬೈಲ್ ಮರಳಿಸಲು ಕಾರಿನ ಮೂಲ ಪರವಾನಗಿಯನ್ನು ತಂದು ಒಪ್ಪಿಸಬೇಕು. ಇಲ್ಲದಿದ್ದರ ₹ 50 ಸಾವಿರ ಲಂಚ ನೀಡಬೇಕು ಎಂದು ಆರೋಪಿ ಬೇಡಿಕೆ ಸಲ್ಲಿಸಿದ್ದರು. ಮೂಲ ಪರವಾನಗಿಯನ್ನು ಕಾರಿನ ಮಾಲೀಕರು ಒದಗಿಸಿದ್ದರು. ಅದನ್ನು ಮರಳಿ ಪಡೆಯಲು ಠಾಣೆಯ ಇನ್ನೊಬ್ಬ ಸಹೆಡ್ ಕಾನ್ಸ್ಟೆಬಲ್ ವಿಜಯ್ ಬಳಿ ₹ 30 ಸಾವಿರ ನೀಡಬೇಕು ಎಂದು ಆರೋಪಿ ತಸ್ಲಿಂ ಸೂಚಿಸಿದ್ದರು. ಬುಧವಾರ ಠಾಣೆಗೆ ಭೇಟಿ ನೀಡಿದಾಗ ಮೂಲ ಪರವಾನಗಿ ಮರಳಿಸಲು ₹ 10ಸಾವಿರ ನೀಡುವಂತೆ ತಸ್ಲೀಂ ತಿಳಿಸಿದ್ದರು. ತನ್ನಲ್ಲಿ ₹ 500 ಮಾತ್ರ ಇದೆ ಎಂದು ಕಾರಿನ ಮಾಲೀಕರು ತಿಳಿಸಿದಾಗ, ‘₹ 5ಸಾವಿರ ಇಲ್ಲದೇ ಠಾಣೆಯ ಕಡೆಗೆ ಬರಬೇಡ’ ಎಂದು ಬೈದು ಕಳುಹಿಸಿದ್ದರು.’

‘ಲಂಚ ನೀಡಲು ಬಯಸದ ಕಾರಿನ ಮಾಲೀಕರು ನಗರದ ಲೋಕಾಯುಕ್ತ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು. ಕದ್ರಿ ಸಂಚಾರ ಠಾಣೆಯ ಸಿಬ್ಬಂದಿ ತಸ್ಲಿಂ ಹಾಗೂ ವಿನೋದ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತಸ್ಲಿಂ ಅವರು ಕಾರಿನ ಮಾಲೀಕರಿಂದ ಗುರುವಾರ ₹ 5 ಸಾವಿರ ಪಡೆಯುತ್ತಿದ್ದಂತೆಯೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ’ ಎಂದು ಲೋಕಾಯುಕ್ತ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ (ಪ್ರಭಾರ) ಕುಮಾರಚಂದ್ರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆಯ ಡಿವೈಎಸ್ಪಿಗಳಾದ ಗಾನ ಪಿ ಕುಮಾರ್, ಸುರೇಶ್ ಕುಮಾರ್.ಪಿ, ಪೊಲೀಸ್ ಇನ್ಸ್ಪೆಕ್ಟರ್ಗಳಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದಾರೆ.
.ಲಂಚ: ಕ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತಲಕರ್ ಲೋಕಾಯುಕ್ತ ಬಲೆಗೆ.ಸಿ.ಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರೆ: ಸಚಿವ ಕೆ.ಎಚ್. ಮುನಿಯಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.