ಮಂಗಳೂರು: ಇಲ್ಲಿನ ಕೋಡಿಯಾಲ್ ಬೈಲ್ ಭಗವತಿ ನಗರದಲ್ಲಿರುವ ಮಹಾಲಸಾ ದೃಶ್ಯಕಲಾ ಕಾಲೇಜಿನ 2024-25 ನೇ ಸಾಲಿನ ವಾರ್ಷಿಕ ಕಲಾಪ್ರದರ್ಶನ ಹಾಗೂ ವಾರ್ಷಿಕೋತ್ಸವ ಇದೇ 10ರಂದು ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಕಾಲೇಜಿನ ಚಿತ್ರಕಲಾ ವಿಭಾಗದ ಮುಖ್ಯಸ್ಥ ಎನ್.ಎಸ್.ಪತ್ತಾರ್, ‘ವಿದ್ಯಾರ್ಥಿಗಳು ರಚಿಸಿದ ರೇಖಾಚಿತ್ರ, ಸ್ಥಿರಚಿತ್ರಣ, 2ಡಿ ವಿನ್ಯಾಸ, ನಿಸರ್ಗಚಿತ್ರ, ಸೃಜನಶೀಲ ವರ್ಣಚಿತ್ರಗಳು, ಅಮೂರ್ತ ಕಲೆ, ಭಾವಚಿತ್ರ, ಸಾಂಪ್ರದಾಯಿಕ ಕಲಾಕೃತಿಗಳಾದ ಕಿನ್ನಾಳ ಕಲೆ, ಪಟಚಿತ್ರ, ಕಲಂಕಾರಿ, ತಂಜಾವೂರು ಮತ್ತು ಮಂಡಲ ಚಿತ್ರಗಳು, ಜಾಹೀರಾತು ಕಲೆ, ಸಾಂದರ್ಭಿಕ ಚಿತ್ರಗಳು ಹಾಗೂ ಡಿಜಿಟಲ್ ಕಲಾಕೃತಿಗಳು ಸೇರಿದಂತೆ ಸುಮಾರು 400 ಕ್ಕೂ ಹೆಚ್ಚು ವಿವಿಧ ಪ್ರಕಾರದ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ’ ಎಂದರು.

‘ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಲಾಗುವುದು. ಮಧ್ಯಾಹ್ನ 2 ಗಂಟೆಯಿಂದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ’ ಎಂದರು.

‘ಕಾರ್ಯಕ್ರಮವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಉದ್ಘಾಟಿಸಲಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಾದ ಕವಿತಾ ಕೆ.ಆರ್ ವಿದ್ಯಾರ್ಥಿಗಳ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಎಯುಎಮ್ ಅನಿಮೇಶನ್ ಸ್ಟುಡಿಯೊದ ವಿವೇಕ್ ಬೋಳಾರ್ ಭಾಗವಹಿಸಿದ್ದಾರೆ. ಮಹಾಲಸಾ ಶಿಕ್ಷಣ ಸಮಿತಿ ನಿರ್ದೇಶಕ ಬಾಬುರಾವ್ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಾಚಾರ್ಯ ಮೋಹನ್ ಕುಮಾರ್ ಬಿ.ಪಿ., ಆನ್ವಯಿಕ ಕಲಾ ವಿಭಾಗದ ಸೈಯದ್ ಆಸಿಫ್ ಅಲಿ, ಉಪನ್ಯಾಸಕ ನಾಗರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.