ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿಯಲ್ಲಿ ನದಿಯಲ್ಲಿ ಮುಳುಗಿ ನೆರಿಯದ ಯುವಕ ಸಾವು

Published 18 ಜೂನ್ 2023, 16:13 IST
Last Updated 18 ಜೂನ್ 2023, 16:13 IST
ಅಕ್ಷರ ಗಾತ್ರ

ಬೆಳ್ತಂಗಡಿ : ನೆರಿಯ ಗ್ರಾಮದ ಬೋವಿನಡಿ ರಾಮ್ ಕುಮಾರ್ ಹಾಗೂ ಸುಶೀಲ ದಂಪತಿ ಪುತ್ರ ಕಾರ್ಕಳದ ನಿಟ್ಟೆ ಕಾಲೇಜಿನ ಉಪನ್ಯಾಸಕ ಪುನೀತ್ (38) ತೀರ್ಥಹಳ್ಳಿ ತಾಲ್ಲೂಕಿನ ತೀರ್ಥ ಮತ್ತೂರು ಗ್ರಾಮದ ಬಳಿ ತುಂಗಾ ನದಿಗೆ ಭಾನುವಾರ ಈಜಲು ತೆರಳಿದ್ದ ವೇಳೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಇವರು ಶನಿವಾರ ಕಾಲೇಜಿನ ತನ್ನ ಸ್ನೇಹಿತರ ಜತೆ ಪ್ರವಾಸಕ್ಕೆ ತೆರಳಿದ್ದು ತೀರ್ಥ ಮತ್ತೂರು ಮಠದ ಬಳಿಯ ಹೋಂ ಸ್ಟೇ ನಲ್ಲಿ ತಂಗಿದ್ದರು. ಭಾನುವಾರ ಬೆಳಿಗ್ಗೆ ಇವರು ಮತ್ತು ಇವರ ಗೆಳೆಯ ಬಾಲಾಜಿ ಎಂಬವರು ನದಿಗೆ ಈಜಲು ತೆರಳಿದ್ದಾರೆ ಎನ್ನಲಾಗಿದ್ದು ಇಬ್ಬರೂ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೃತ ಪುನೀತ್ ರ ಅಂತ್ಯ ಸಂಸ್ಕಾರ ಸೋಮವಾರ ಬೆಳಿಗ್ಗೆ ನೆರಿಯದ ಅವರ ಮನೆಯಲ್ಲಿ ನಡೆಯಲಿದೆ.

ಇವರಿಗೆ ತಂದೆ ರಾಮ್ ಕುಮಾರ್, ತಾಯಿ ಸುಶೀಲ, ಪತ್ನಿ ದಿವ್ಯಾ , ಒಂದು ಗಂಡು ಮಗು, ಓರ್ವ ಸಹೋದರ ಹಾಗೂ ಓರ್ವ ಸಹೋದರಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT