ಮಂಗಳೂರು: ಮಂಡ್ಯ ಮತ್ತು ಮೈಸೂರು ತಂಡದವರು ಇಲ್ಲಿ ಭಾನುವಾರ ನಡೆದ ದಸರಾ ಮೈಸೂರು ವಿಭಾಗ ಮಟ್ಟದ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗಗಳ ಪ್ರಶಸ್ತಿ ಗೆದ್ದುಕೊಂಡರು.

ಮಂಗಳ ಒಳಾಂಗಣ ಕ್ರೀಡಾಂಗಣದಲ್ಲಿ ರಾತ್ರಿ ನಡೆದ ಪುರುಷರ ರೋಚಕ ಫೈನಲ್‌ನಲ್ಲಿ ಮಂಡ್ಯ ತಂಡ ಹಾಸನ ವಿರುದ್ಧ 36–35ರಲ್ಲಿ ಜಯ ಸಾಧಿಸಿತು. ಮಹಿಳೆಯರ ಫೈನಲ್‌ನಲ್ಲಿ ಉಡುಪಿ ವಿರುದ್ಧ ಮೈಸೂರು 39–30ರಲ್ಲಿ ಗೆಲುವು ಸಾಧಿಸಿತು.

ಪುರುಷರ ಫೈನಲ್‌ನ ಮೊದಲ ಮೂರು ಕ್ವಾರ್ಟರ್‌ಗಳಲ್ಲಿ ಹಾಸನ ಮೇಲುಗೈ ಸಾಧಿಸಿತ್ತು. ಮೂರನೇ ಕ್ವಾರ್ಟರ್ ಮುಕ್ತಾಯಕ್ಕೆ ಹಾಸನ 27–22ರ ಮುನ್ನಡೆಯಲ್ಲಿತ್ತು. ಕೊನೆಯ ಕ್ವಾರ್ಟರ್‌ನಲ್ಲಿ ಮಂಡ್ಯ 14 ಪಾಯಿಂಟ್ ಕಲೆ ಹಾಕಿ 8 ಪಾಯಿಂಟ್ ಮಾತ್ರ ಬಿಟ್ಟುಕೊಟ್ಟಿತು.

ಮಹಿಳೆಯರ ಫೈನಲ್‌ನ ಪ್ರತಿ ಹಂತದಲ್ಲೂ ಜಿದ್ದಾಜಿದ್ದಿಯ ಹೋರಾಟ ಕಂಡುಬಂತು. ಮೊದಲಾರ್ಧದಲ್ಲಿ ಉಡುಪಿ 18–14ರ ಮುನ್ನಡೆ ಗಳಿಸಿತ್ತು. ಮೂರನೇ ಕ್ವಾರ್ಟರ್‌ನಲ್ಲಿ ಆಕ್ರಮಣಕಾರಿ ಆಟವಾಡಿದ ಮೈಸೂರು 17 ಪಾಯಿಂಟ್ ಗಳಿಸಿತು. ಕೇವಲ 7 ಪಾಯಿಂಟ್ ಬಿಟ್ಟುಕೊಟ್ಟಿತು. ಕೊನೆಯ ಕ್ವಾರ್ಟರ್‌ನಲ್ಲಿ ಎದುರಾಳಿ ತಂಡವನ್ನು ನಿಯಂತ್ರಿಸಿ ಪ್ರಶಸ್ತಿ ಗೆದ್ದುಕೊಂಡಿತು.

ಪುರುಷರ ಸೆಮಿಫೈನಲ್‌ಗಳಲ್ಲಿ ಮೈಸೂರು ವಿರುದ್ಧ ಮಂಡ್ಯ 34–16ರಲ್ಲಿ ಮತ್ತು ಚಾಮರಾಜನಗರ ವಿರುದ್ಧ ಹಾಸನ 54–31ರಲ್ಲಿ ಜಯ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.