ಮಂಗಳೂರು: ಬ್ಯಾರಿ ಭಾಷೆಗೆ ಮಾನ್ಯತೆ ನೀಡಿ, ರಾಜ್ಯ ಸರ್ಕಾರವು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪಿಸಿದ ದಿನ ಅಕ್ಟೋಬರ್ 3 ಅನ್ನು ‘ಬ್ಯಾರಿ ಭಾಷಾ ದಿನ’ವಾಗಿ ಬ್ಯಾರಿ ಸಮುದಾಯವು ಆಚರಿಸುತ್ತಾ ಬಂದಿದೆ.
ಬೇರೆಬೇರೆ ಕಡೆಗಳಲ್ಲಿರುವ ಬ್ಯಾರಿ ಭಾಷಿಗರು, ಸಂಘ- ಸಂಸ್ಥೆಗಳು ಈ ದಿನದಂದು ವಿವಿಧ ಕಾರ್ಯಕ್ರಮ ಆಯೋಜಿಸುವುದು, ಭಿತ್ತಿಪತ್ರ– ಬ್ಯಾನರ್ ಪ್ರದರ್ಶನದ ಮೂಲಕ ಬ್ಯಾರಿ ಭಾಷಾ ದಿನ ಆಚರಿಸಬೇಕು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಮನವಿ ಮಾಡಿದೆ.
ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಸಹಯೋಗದಲ್ಲಿ ಅ.3ರಂದು ಅಕಾಡೆಮಿಯು ಚಿಕ್ಕಮಗಳೂರಿನ ಕುವೆಂಪು ರಂಗಮಂದಿರದಲ್ಲಿ ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಂಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕಾರ್ಯಕ್ರಮ ಆಯೋಜಿಸುವವರು ಚುನಾವಣಾಧಿಕಾರಿಯಿಂದ ಪೂರ್ವಾನುಮತಿ ಪಡೆಯಬೇಕು.
ಮಾದರಿ ಭಿತ್ತಿಪತ್ರ, ಬ್ಯಾನರ್‌ಗಳಿಗಾಗಿ ಅಕಾಡೆಮಿಯ ದೂರವಾಣಿ ಸಂ: 0824-2412297, ಮೊ: 7483946578 ಅಥವಾ ಇ– ಮೇಲ್ bearyacademy@yahoo.in ಸಂಪರ್ಕಿಸಬಹುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.