ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ತೆಕ್ಕೆಗೆ ಮಂಗಳೂರು ಮಹಾನಗರ ಪಾಲಿಕೆ

Last Updated 14 ನವೆಂಬರ್ 2019, 7:10 IST
ಅಕ್ಷರ ಗಾತ್ರ

ಮಂಗಳೂರು:ಮಹಾನಗರ ಪಾಲಿಕೆಯ 60 ವಾರ್ಡ್‌ಗಳ ಪೈಕಿ 44 ವಾರ್ಡ್‌ಗಳಲ್ಲಿ ಜಯಭೇರಿ ಭಾರಿಸುವ ಮೂಲಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಳೆದ ಬಾರಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈ ಬಾರಿ 14 ಸ್ಥಾನಗಳಿಗೆ ಕುಸಿದಿದೆ. ಎಸ್ ಡಿಪಿಐ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಕಳೆದ ಮಂಗಳವಾರ ಮತದಾನ ನಡೆದಿತ್ತು. ಒಟ್ಟು 394,894 ಮತದಾರರ ಪೈಕಿ 2,35,235 ಮಂದಿ ಮತ ಚಲಾಯಿಸಿದ್ದರು.

ಫಲಿತಾಂಶ ವಿವರ

ವಾರ್ಡ್ ಸಂಖ್ಯೆ 1 (ಸುರತ್ಕಲ್ ಪಶ್ಚಿಮ):ಬಿಜೆಪಿಯ ಶೋಭಾ ರಾಜೇಶ್ 225 ಮತಗಳ ಅಂತರದಿಂದ ಪಕ್ಷೇತರ ಅಭ್ಯರ್ಥಿ ರೇವತಿ ಪುತ್ರನ್ ಅವರನ್ನು ಸೋಲಿಸಿದ್ದಾರೆ. ಶೋಭಾ ರಾಜೇಶ್ 985 ಮತ ಗಳಿಸಿದ್ದಾರೆ. ರೇವತಿ ಪುತ್ರನ್ 760 ಮತ್ತು ಕಾಂಗ್ರೆಸ್ 21 ಮತ ಗಳಿಸಿದ್ದಾರೆ.

ವಾರ್ಡ್ ಸಂಖ್ಯೆ 2 (ಸುರತ್ಕಲ್ ಪೂರ್ವ):ಬಿಜೆಪಿಯ ಶ್ವೇತಾ ಎ. ಅವರು 1,363 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶ್ವೇತಾ 2496 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಇಂದಿರಾ1,133 ಮತ ಪಡೆದಿದ್ದಾರೆ.

ವಾರ್ಡ್ ಸಂಖ್ಯೆ 5 (ಕಾಟಿಪಳ್ಳ ಉತ್ತರ): ಎಸ್ ಡಿ ಪಿಐ ಅಭ್ಯರ್ಥಿ ಶಂಶಾದ್ ಅಬೂಬಕ್ಕರ್ 1832 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.
ಶಂಶಾದ್2766 ಮತ ಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಮಿಶ್ರಿಯಾ 934, ಕಾಂಗ್ರೆಸ್ ಅಭ್ಯರ್ಥಿ ಫಾತಿಮಾ‌ ಉಮರಬ್ಬ 882, ಬಿಜೆಪಿಯ ಸುರೈಯ್ಯಾ 648, ಪಕ್ಷೇತರ ಅಭ್ಯರ್ಥಿಯಾಗಿದ್ದ ಮಾಜಿ ಮೇಯರ್ ಗುಲ್ಜಾರ್ ಬಾನು 86 ಮತ ಗಳಿಸಿದ್ದಾರೆ.

ವಾರ್ಡ್ ಸಂಖ್ಯೆ 8 (ಹೊಸಬೆಟ್ಟು):ಬಿಜೆಪಿ ಅಭ್ಯರ್ಥಿ ವರುಣ್ ಚೌಟ 1361 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ವರುಣ್ 3025 ಮತ್ತು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಶೆಟ್ಟಿ 1764 ಮತ ಗಳಿಸಿದ್ದಾರೆ.

ವಾರ್ಡ್ ಸಂಖ್ಯೆ 9 (ಕುಳಾಯಿ):ಬಿಜೆಪಿಯ ಜಾನಕಿ ಯಾನೆ ವೇದಾವತಿ 2372 ಮತಗಳ ಅಂತರದಿಂದ ಗೆಲುವು.
ಜಾನಕಿ 3140 ಮತ್ತು ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಅರಾನ್ನ768 ಮತ ಗಳಿಸಿದ್ದಾರೆ.

ವಾರ್ಡ್ ಸಂಖ್ಯೆ 11 (ಪಣಂಬೂರು):ಬಿಜೆಪಿಯ ಸುನೀತಾ 155 ಮತಗಳ ಅಂತರದಿಂದ ಗೆಲುವು.
ಸುನೀತಾ 1236, ಕಾಂಗ್ರೆಸ್ ಅಭ್ಯರ್ಥಿ ಚಂದ್ರಿಕಾ 1081, ಸಿಪಿಎಂ ಅಭ್ಯರ್ಥಿ ಸುನೀತಾ ಕೃಷ್ಣ 888, ಜೆಡಿಎಸ್ ಅಭ್ಯರ್ಥಿ ಶೋಭಾ 369 ಮತ್ತು ಪಕ್ಷೇತರ ಅಭ್ಯರ್ಥಿ ಸುಶೀಲಾ 20 ಮತ ಗಳಿಸಿದ್ದಾರೆ.

ವಾರ್ಡ್ ಸಂಖ್ಯೆ 13 (ಕುಂಜತ್ತಬೈಲ್ ಉತ್ತರ): ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಉಪ ಮೇಯರ್ ಕೆ.ಮಹಮ್ಮದ್ 1241 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಶರತ್ ಕುಮಾರ್ 2950 ಮತ ಗಳಿಸಿದ್ದಾರೆ. ಮಹಮ್ಮದ್ ಅವರಿಗೆ 1709 ಮತಗಳು ಲಭಿಸಿವೆ.

ಬಿಜೆಪಿ ಅಭ್ಯರ್ಥಿ ವನಿತಾ ಪ್ರಸಾದ್
ಬಿಜೆಪಿ ಅಭ್ಯರ್ಥಿ ವನಿತಾ ಪ್ರಸಾದ್

ವಾರ್ಡ್ ಸಂಖ್ಯೆ 14 (ಮರಕಡ): ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಮೇಯರ್ ಹರಿನಾಥ್ 1351 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
ಬಿಜೆಪಿಯ ಲೋಹಿತ್ ಅಮೀನ್ 2055 ಮತ ಗಳಿಸಿ ಗೆಲುವು ಸಾಧಿಸಿದ್ದಾರೆ. ಹರಿನಾಥ್ 1704 ಮತ ಗಳಿಸಿದ್ದಾರೆ.

ವಾರ್ಡ್ ಸಂಖ್ಯೆ 21 (ಪದವು ಪಶ್ಚಿಮ):ಬಿಜೆಪಿ ಅಭ್ಯರ್ಥಿ ವನಿತಾ ಪ್ರಸಾದ್ 1051 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ವಾರ್ಡ್ ಸಂಖ್ಯೆ 24 (ದೇರೆಬೈಲು ದಕ್ಷಿಣ): ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಮೇಯರ್ ಎಂ.ಶಶಿಧರ ಹೆಗ್ಡೆ 327 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಶಶಿಧರ ಹೆಗ್ಡೆ 2235, ಬಿಜೆಪಿಯ ಚರಿತ್ ಕುಮಾರ್ 1908 ಮತ ಗಳಿಸಿದ್ದಾರೆ.

ಗಣೇಶ್
ಗಣೇಶ್

ವಾರ್ಡ್ ಸಂಖ್ಯೆ 26 (ದೇರೆಬೈಲ್ ನೈರುತ್ಯ):ಬಿಜೆಪಿ ಅಭ್ಯರ್ಥಿ ಗಣೇಶ್ 1777 ಮತಗಳ ಅಂತರದಿಂದ ಗೆಲುವು.

ವಾರ್ಡ್ ಸಂಖ್ಯೆ 28 (ಮಣ್ಣಗುಡ್ಡ): ಬಿಜೆಪಿ ಅಭ್ಯರ್ಥಿ ಸಂಧ್ಯಾ ಅವರು 2321 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಸಂಧ್ಯಾ 3019 ಮತ ಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಟೊಮ್ಯಾಟೊ ಡೆಲಿವರಿ ಸಿಬ್ಬಂದಿ ಮೇಘ್ನಾ ದಾಸ್ 698 ಮತ ಗಳಿಸಿದ್ದಾರೆ.

ವಾರ್ಡ್ ಸಂಖ್ಯೆ 31 (ಬಿಜೈ):ಕಾಂಗ್ರೆಸ್ ಅಭ್ಯರ್ಥಿ ಲ್ಯಾನ್ಸ್ ಲೋಟ್ ಪಿಂಟೊ 412 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಲ್ಯಾನ್ಸ್ ಲೋಟ್ ಪಿಂಟೊ 1938 ಮತ ಪಡೆದಿದ್ದಾರೆ. ಬಿಜೆಪಿಯ ಪ್ರಶಾಂತ್ ಆಳ್ವ 1527 ಮತ ಪಡೆದಿದ್ದಾರೆ.

ವಾರ್ಡ್ ಸಂಖ್ಯೆ 34 (ಶಿವಭಾಗ್):ಬಿಜೆಪಿಯ ಕಾವ್ಯಾ ನಟರಾಜ ಆಳ್ವ 41 ಮತಗಳ ಅಂತರದಿಂದ ಗೆಲುವು.
ಕಾವ್ಯಾ 1731 ಮತ್ತು ಕಾಂಗ್ರೆಸ್ ಅಭ್ಯರ್ಥಿ ಕಿರಣಾ ಜೇಮ್ಸ್ 1690 ಮತ ಗಳಿಸಿದ್ದಾರೆ.

ಮಾಜಿ ಮೇಯರ್ ಭಾಸ್ಕರ್
ಮಾಜಿ ಮೇಯರ್ ಭಾಸ್ಕರ್

ವಾರ್ಡ್ ಸಂಖ್ಯೆ36 (ಪದವು ಪೂರ್ವ): ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಮೇಯರ್ ಭಾಸ್ಕರ್ ಕೆ. 571 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಭಾಸ್ಕರ್ 2492 ಮತಗಳನ್ನು ಮತ್ತು ಬಿಜೆಪಿಯ ಸುಜನ್ ದಾಸ್ ಕೆ. 1921 ಮತ ಗಳಿಸಿದ್ದಾರೆ.

ವಾರ್ಡ್ ಸಂಖ್ಯೆ 37 (ಮರೋಳಿ): ಕಾಂಗ್ರೆಸ್ ಅಭ್ಯರ್ಥಿ ಕೇಶವ 26 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕೇಶವ 2037 ಮತ್ತು ಬಿಜೆಪಿ ಅಭ್ಯರ್ಥಿ ಕಿರಣ್ ಮರೋಳಿ 2011 ಮತ ಗಳಿಸಿದ್ದಾರೆ.

ವಾರ್ಡ್ ಸಂಖ್ಯೆ 38 (ಬೆಂದೂರ್): ಕಾಂಗ್ರೆಸ್ ಅಭ್ಯರ್ಥಿ ನವೀನ್ ಡಿಸೋಜ 822 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ನವೀನ್ ಡಿಸೋಜ 1598 ಮತ ಹಾಗೂ ಬಿಜೆಪಿಯ ಜೇಸೆಲ್ ಡಿಸೋಜ 760 ಮತ ಗಳಿಸಿದ್ದಾರೆ.

ವಾರ್ಡ್ ಸಂಖ್ಯೆ 40 (ಕೋರ್ಟ್):ಕಾಂಗ್ರೆಸ್ ಅಭ್ಯರ್ಥಿ ಎ.ಸಿ.ವಿನಯರಾಜ್ 238 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ವಿನಯರಾಜ್ 1137, ಬಿಜೆಪಿಯ ರಂಗನಾಥ ಕಿಣಿ 899, ಸಿಪಿಎಂ ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್ 183 ಮತ ಗಳಿಸಿದ್ದಾರೆ.

ಪೂರ್ಣಿಮಾ
ಪೂರ್ಣಿಮಾ

ವಾರ್ಡ್‌ ಸಂಖ್ಯೆ 41 (ಸೆಂಟ್ರಲ್ ಮಾರುಕಟ್ಟೆ):ಬಿಜೆಪಿಯ ಪೂರ್ಣಿಮಾ ಗೆಲುವು ಸಾಧಿಸಿದ್ದಾರೆ.

ವಾರ್ಡ್ ಸಂಖ್ಯೆ 43 (ಕುದ್ರೋಳಿ):ಕಾಂಗ್ರೆಸ್ ಅಭ್ಯರ್ಥಿ ಅಜೀಜ್ ಕುದ್ರೋಳಿ 135 ಮತಗಳ ಅಂತರದಿಂದ ಗೆಲುವು.
ಅಜೀಜ್ 1256 ಮತ್ತು ಎಸ್ ಡಿ ಪಿಐ ಅಭ್ಯರ್ಥಿ ಮಝೈನ್ ಕುದ್ರೋಳಿ1121, ಬಿಜೆಪಿಯ ಅರ್ಶಾದ್ ಪೋಪಿ877 ಮತ ಗಳಿಸಿದ್ದಾರೆ.

ವಾರ್ಡ್ ಸಂಖ್ಯೆ 44 (ಬಂದರ್):ಕಾಂಗ್ರೆಸ್ ಅಭ್ಯರ್ಥಿ ಝೀನತ್ ಸಂಶುದ್ದೀನ್ 41 ಮತಗಳ ಅಂತರದಿಂದ ಗೆಲುವು.
ಝೀನತ್ 1308 ಮತ್ತು ಬಿಜೆಪಿಯ ಪ್ರಿಯಾಂಕಾ 1271 ಮತ ಗಳಿಸಿದ್ದಾರೆ.

ವಾರ್ಡ್ ಸಂಖ್ಯೆ 45 (ಪೋರ್ಟ್): ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಲತೀಫ್ 555 ಮತಗಳಿಂದ ಗೆಲುವು. ಲತೀಫ್ 2048, ಬಿಜೆಪಿಯ ಅನಿಲ್ ಕುಮಾರ್ 1493, ಪಕ್ಷೇತರ ಅಭ್ಯರ್ಥಿಯಾಗಿದ್ದ ಮಾಜಿ‌ ಮೇಯರ್ ಕೆ.ಅಶ್ರಫ್ 252 ಮತ ಗಳಿಸಿದ್ದಾರೆ.

ವಾರ್ಡ್ ಸಂಖ್ಯೆ 50 (ಅಳಪೆ ಉತ್ತರ):ಬಿಜೆಪಿ ಅಭ್ಯರ್ಥಿ ರೂಪಶ್ರೀ ಪೂಜಾರಿ 66 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ರೂಪಶ್ರೀ 2073 ಮತ್ತು ಕಾಂಗ್ರೆಸ್ ಅಭ್ಯರ್ಥಿ ಶೋಭಾ 2007 ಮತ ಗಳಿಸಿದ್ದಾರೆ.

ವಾರ್ಡ್ ಸಂಖ್ಯೆ 57 (ಮಂಗಳಾದೇವಿ):ಬಿಜೆಪಿ ಅಭ್ಯರ್ಥಿ ಪ್ರೇಮಾನಂದ ಶೆಟ್ಟಿ 1,313 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪ್ರೇಮಾನಂದ ಶೆಟ್ಟಿ 2187, ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಬಿ.ರಾವ್ 874 ಮತ್ತು ಜೆಡಿಎಸ್ ಅಭ್ಯರ್ಥಿ ಎನ್.ಮಹೇಶ್ ರಾವ್ 60 ಮತ ಗಳಿಸಿದ್ದಾರೆ.

ವಾರ್ಡ್ ಸಂಖ್ಯೆ 60 (ಬೆಂಗರೆ):ಎಸ್ ಡಿಪಿಐ ಅಭ್ಯರ್ಥಿ ಮುನೀಬ್ ಬೆಂಗರೆ 203 ಮತಗಳ ಅಂತರದಿಂದ ಗೆಲುವು.
ಮುನೀಬ್ 1702, ಬಿಜೆಪಿಯ ಗಂಗಾಧರ ಸಾಲ್ಯಾನ್ 1498, ಕಾಂಗ್ರೆಸ್ ಅಭ್ಯರ್ಥಿ ಆಸಿಫ್ ಅಹಮ್ಮದ್ 1192 ಹಾಗೂ ಪಕ್ಷೇತರ ಅಭ್ಯರ್ಥಿ ಮುಹಮ್ಮದ್ ಅಬ್ದುಲ್ ರಹಮಾನ್ 340 ಮತ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT