ರಾಮ ಶೇರಿಗಾರ ಅವರಿಗೆ ನೊಟೇಷನ್ ಮಾಡಿಕೊಳ್ಳಲು ಸಾಧ್ಯವಿಲ್ಲದ ಕಾರಣ ಡಿಕೆಸಿಎ ಆಯೋಜಿಸಿರುವ ಟೂರ್ನಿಯ ಪ್ರತಿ ಪಂದ್ಯದಲ್ಲೂ 10 ನಿಮಿಷ ಕಡಿಮೆ ಅವಧಿಯನ್ನು ನೀಡಲಾಗಿದೆ. ‘ಇಬ್ಬರೂ ಆಟಗಾರರು ಒಪ್ಪಿ ಡ್ರಾ ಮಾಡಿಕೊಂಡರೆ ಸಮಸ್ಯೆ ಇಲ್ಲ. ಎದುರಾಳಿ ನಿಯಮ ಉಲ್ಲಂಘನೆ ಮಾಡಿದ್ದಾಗಿ ಸಂದೇಹ ಬಂದರೆ ಆಟಗಾರರು ಸವಾಲು ಹಾಕುತ್ತಾರೆ. ಆಗ ಪರಿಶೀಲನಗೆ ನೊಟೇಷನ್ ಅಗತ್ಯವಿರುತ್ತದೆ. ಕ್ಲಾಸಿಕಲ್ ಟೂರ್ನಿಯಲ್ಲಿ ರಾಮ ಶೇರಿಗಾರ ಅವರ ಎದುರಾಳಿಗೆ ಸಂದೇಹ ಇದ್ದರೆ ಸವಾಲು ಹಾಕುವ ಅವಕಾಶವಿಲ್ಲ. ಅದನ್ನು ಪ್ರತಿ ಸುತ್ತಿನ ಎದುರಾಳಿಗೂ ತಿಳಿಸಲಾಗುತ್ತಿದೆ’ ಎಂದು ಟೂರ್ನಿಯ ಮುಖ್ಯ ಆರ್ಬಿಟರ್ ಸಾಕ್ಷಾತ್ ಯು.ಕೆ ತಿಳಿಸಿದರು.