ಮಂಗಳೂರು: ಇಂದು ಸಾಕಷ್ಟು ಸೌಲಭ್ಯ, ಅವಕಾಶಗಳಿದ್ದರೂ ನಮ್ಮ ದೇಶದಲ್ಲಿ ಕ್ರೀಡಾಪಟುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸ್ಪೋರ್ಟ್ಸ್ ಕೋಟಾದಡಿ ಉದ್ಯೋಗ ನೀಡುವುದು ಕಡಿಮೆಯಾಗುತ್ತಿದೆ ಎಂದು ಅಂತರರಾಷ್ಟ್ರೀಯ ದೇಹದಾರ್ಢ್ಯ ಪಟು, ಮಿ. ವರ್ಲ್ಡ್ ರೇಮಂಡ್ ಡಿಸೋಜ ಹೇಳಿದರು.

ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ‘ತಿಂಗಳ ಸಾಧಕರು’ ಸನ್ಮಾನ ಸ್ವೀಕರಿಸಿ ಸಂವಾದ ನಡೆಸಿದ ಅವರು ತಮ್ಮ ಜೀವನದ ಬಗ್ಗೆ ಮೆಲುಕು ಹಾಕಿದರು.

ಇಂದು ಭಾರ ಎತ್ತುವ ಸ್ಪರ್ಧೆಗಳಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮಾಯಾಗುತ್ತಿದೆ. ಒಲಿಂಪಿಕ್ನಲ್ಲಿ ಈ ಸ್ಪರ್ಧೆಗೆ ಹೆಚ್ಚಿನ ಮಹತ್ವವಿದೆ. ಆದ್ದರಿಂದ ಯುವಕರು ಮುಂದೆ ಬರಬೇಕು ಎಂದರು.

ಪ್ರಾಕೃತಿಕ ಆಹಾರ ಪದ್ಧತಿಯನ್ನೇ ಅನುಸರಿಸಬೇಕು. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ನಾನು ದೇಹದಾರ್ಢ್ಯ ಪಟುವಾಗಿದ್ದಾಗ ಡಯಟ್ನಲ್ಲಿ ಚಪಾತಿ, ಎಳನೀರು, ಅದರ ಗಂಜಿ ಜೊತೆ ಅವಲಕ್ಕಿ, ಹಾಲು, ನಾಟಿ ಕೋಳಿ ಮೊಟ್ಟೆ, ತರಕಾರಿ, ಸೊಪ್ಪು, ಗೆಡ್ಡೆ– ಗೆಣಸು ಸೇವಿಸುತ್ತಿದ್ದೆ ಎಂದು ಮೆಲುಕು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.