ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣದಲ್ಲಿ ರ್‍ಯಾಪಿಡ್‌ ಟೆಸ್ಟ್ ಯಂತ್ರ

ವಿದೇಶದಿಂದ ಬರುವ ಪ್ರಯಾಣಿಕರ ತಪಾಸಣೆಗೆ ವ್ಯವಸ್ಥೆ
Last Updated 7 ಡಿಸೆಂಬರ್ 2021, 16:42 IST
ಅಕ್ಷರ ಗಾತ್ರ

ಮಂಗಳೂರು: ಕೇಂದ್ರ ಆರೋಗ್ಯ ಸಚಿವಾಲಯದ ಕೋವಿಡ್ –19 ಮಾರ್ಗಸೂಚಿ ಅನ್ವಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಅನುಕೂಲಕ್ಕೆ ಎಲ್ಲ ರೀತಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಹೊಸ ತಳಿಯ ಓಮೈಕ್ರಾನ್ ವೈರಾಣು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಗಂಟಲು ದ್ರವ ಮಾದರಿ ಸಂಗ್ರಹದನಾಲ್ಕು ಬೂತ್‌ಗಳು, 30 ನಿಮಿಷಗಳಲ್ಲಿ ಫಲಿತಾಂಶ ನೀಡುವ 70 ರ್‍ಯಾಪಿಡ್ ಪಿಸಿಆರ್ ಯಂತ್ರಗಳು, ನಾಲ್ಕು ನೋಂದಣಿ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ.

ಸುಮಾರು 123 ಪ್ರಯಾಣಿಕರಿಗೆ ಕಾದು ಕುಳಿತುಕೊಳ್ಳಲು ಪ್ರತ್ಯೇಕ ಜಾಗ, ಅದಕ್ಕೆ ಹೊಂದಿಕೊಂಡು ಶೌಚಾಲಯ, ಆಹಾರ, ವೈಫೈ ಮತ್ತು ವಿದೇಶಿ ವಿನಿಮಯ ಸೇವೆಯನ್ನು ಒದಗಿಸಲಾಗಿದೆ. ಪ್ರಯಾಣಿಕರಿಗೆ ಸಹಕರಿಸಲು ಅಲ್ಲಿ ಸಿಬ್ಬಂದಿ ಕೂಡ ಲಭ್ಯ ಇರುತ್ತಾರೆ. ಪ್ರಯಾಣಿಕರು ಕ್ಯೂಆರ್‌ ಕೋಡ್ ಬಳಸಿ ಕೂಡ ತಪಾಸಣೆಯ ನೋಂದಣಿ ಮಾಡಿಕೊಳ್ಳಬಹುದು. ಸದ್ಯದಲ್ಲಿಯೇ ವಿಮಾನ ನಿಲ್ದಾಣ ಪ್ರಾಧಿಕಾರವು ಆರ್‌ಟಿಪಿಸಿಆರ್ ಪರೀಕ್ಷೆಗೆ ಆನ್‌ಲೈನ್‌ ಬುಕಿಂಗ್ ಕೂಡ ಆರಂಭಿಸಲಿದೆ.

ಪ್ರಯಾಣಿಕರು ಕುಳಿತುಕೊಳ್ಳುವ ಪ್ರದೇಶಗಳಲ್ಲಿ ಸ್ಯಾನಿಟೈಸೇಷನ್, ಸ್ವಚ್ಛತೆಗೆ ಒತ್ತು ನೀಡಲಾಗಿದೆ. ವಿದೇಶದಿಂದ ಬರುವ ಪ್ರಯಾಣಿಕರ ಕಾಳಜಿ ಹಾಗೂ ಸುರಕ್ಷೆಗೆ ಈ ಎಲ್ಲ ಸೌಲಭ್ಯಗಳು ಸಹಕಾರಿಯಾಗಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT