ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಎಕ್ಸ್‌ಪರ್ಟ್‌: 30 ವಿದ್ಯಾರ್ಥಿಗಳಿಗೆ 99 ಪರ್ಸೆಂಟೈಲ್‌ಗಿಂತ ಅಧಿಕ ಅಂಕ

Published 26 ಏಪ್ರಿಲ್ 2024, 3:58 IST
Last Updated 26 ಏಪ್ರಿಲ್ 2024, 3:58 IST
ಅಕ್ಷರ ಗಾತ್ರ

ಮಂಗಳೂರು: ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಎಕ್ಸ್‌ಪರ್ಟ್ ಪಿಯು ಕಾಲೇಜಿನ 30 ವಿದ್ಯಾರ್ಥಿಗಳು 99 ಪರ್ಸಂಟೈಲ್‌‌ಗಿಂತ ಅಧಿಕ ಅಂಕ, ನಾಲ್ವರು ವಿದ್ಯಾರ್ಥಿಗಳು ವಿಷಯವಾರು 100 ಪರ್ಸಂಟೈಲ್‌ ಪಡೆದು ಸಾಧನೆ ಮಾಡಿದ್ದಾರೆ.

ಪ್ರತೀಕ್ ಪಿ. ಗೌಡ ರಸಾಯನ ವಿಜ್ಞಾನದಲ್ಲಿ 100 ಪರ್ಸಂಟೈಲ್‌ ಪಡೆದು ಒಟ್ಟು 99.5733606 ಅಂಕ ಪಡೆದರೆ, ಭೌತ ವಿಜ್ಞಾನದಲ್ಲಿ 100 ಪರ್ಸಂಟೈಲ್‌ ಪಡೆದ ವಿದ್ಯಾರ್ಥಿಗಳಾದ ಸುಜನ್ ಶಿವಾನಂದ ಮುಳ್ಳಟ್ಟಿ 99.4584867 ಪರ್ಸಂಟೈಲ್‌, ಸಂಜನ್ ಡಿ. ಒಟ್ಟು 99.4142740 ಪರ್ಸಂಟೈಲ್‌, ಅನುರಾಗ್ ಜೀವಪ್ಪ ತಂಗಡಿ ಭೌತ ವಿಜ್ಞಾನದಲ್ಲಿ 100 ಪರ್ಸಂಟೈಲ್‌ ಪಡೆದಿದ್ದಾರೆ.

ಕಾಲೇಜಿನ 57 ವಿದ್ಯಾರ್ಥಿಗಳು 98 ಪರ್ಸಂಟೈಲ್‌ ಅಧಿಕ, 110 ವಿದ್ಯಾರ್ಥಿಗಳು 97 ಪರ್ಸಂಟೈಲ್‌‌ಗಿಂತ ಅಧಿಕ, 156 ವಿದ್ಯಾರ್ಥಿಗಳು 96 ಪರ್ಸಂಟೈಲ್‌‌ಗಿಂತ ಅಧಿಕ, 192 ವಿದ್ಯಾರ್ಥಿಗಳು 95 ಪರ್ಸಂಟೈಲ್‌‌ಗಿಂತ ಅಧಿಕ ಹಾಗೂ 363 ವಿದ್ಯಾರ್ಥಿಗಳು 90 ಪರ್ಸಂಟೈಲ್‌‌ಗಿಂತ ಅಧಿಕ ಅಂಕ ಗಳಿಸಿದ್ದಾರೆ. ಒಟ್ಟು 469 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ.

ಮಿಹಿರ್ ಗಿರೀಶ್ ಕಾಮತ್ 99.9280172 ಪರ್ಸಂಟೈಲ್‌‌ ಪಡೆದು ಅಖಿಲ ಭಾರತ ಮಟ್ಟದ ಸಾಮಾನ್ಯ ವಿಭಾಗದಲ್ಲಿ 1,312ನೇ ರ್‍ಯಾಂಕ್ ಪಡೆದರೆ, 99.7864881 ಪರ್ಸೆಂಟೈಲ್ ಪಡೆದ ಸಂಕೇತ್ ಕುಮಾರ್ 3,541ನೇ ರ್‍ಯಾಂಕ್‌ ಹಾಗೂ 99.7100341 ಪರ್ಸಂಟೈಲ್‌‌ ಪಡೆದ ರೋಹನ್ ಹೆಬ್ಬಾಲೆ 4,760ನೇ ರ್‍ಯಾಂಕ್ ಹಾಗೂ ಕೆಟಗರಿ 962 ರ್‍ಯಾಂಕ್ ಪಡೆದಿದ್ದಾರೆ.

ಸಾಮಾನ್ಯ ವಿಭಾಗದಲ್ಲಿ ಮೊದಲ 10 ಸಾವಿರ ರ್‍ಯಾಂಕ್‌ಗಳಲ್ಲಿ ಹತ್ತು ರ್‍ಯಾಂಕ್‌ಗಳನ್ನು ಎಕ್ಸ್‌ಪರ್ಟ್ ವಿದ್ಯಾರ್ಥಿಗಳು ಪಡೆದರೆ, ನಾನಾ ಕ್ಯಾಟಗರಿ ವಿಭಾಗದಲ್ಲಿ ಮೊದಲ 1,000 ರ್‍ಯಾಂಕ್‌ಗಳಲ್ಲಿ ಒಂಬತ್ತು ರ್‍ಯಾಂಕ್‌ಗಳನ್ನು ಎಕ್ಸ್‌ಪರ್ಟ್ ವಿದ್ಯಾರ್ಥಿಗಳು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಉತ್ಸವ್ ಆರ್. (99.686536), ಆದಿತ್ಯ ಆನಂದೆ (99.5770723), ಪ್ರತೀಕ್ ಪಿ. ಗೌಡ (99.5733606), ನಿಹಾರ್ ಎಸ್.ಆರ್. (99.4927977), ಸುಜನ್ ಶಿವಾನಂದ ಮುಳ್ಳಟ್ಟಿ (99.4584867), ಸಂಜನ್ ಡಿ. (99.414274), ಅಮಿತ್ ಗೌಡ ಕೆ. (99.406909), ಸಂಜನಾ ಸಂತೋಷ ಕಟ್ಟಿ (99.3539987), ಪ್ರೀತಮ್ ಕೆ.ಸಿ. (99.3469211), ಶಾನ್ವಿನ್ ರಾಯ್ಸ್ ಪಿರೇರಾ (99.3376471), ಆಕಾಶ್ ಶ್ರೀಶೈಲ ಕಂಕಣವಾಡಿ (99.3244446), ಮಹಿಜ್ ಉಮರ್ (99.3101978), ನಿತಿನ್ ಮೆನೇಜಸ್ (99.2695934), ಲೋಚನ್ ಬಿ.ಎಚ್. (99.2481585), ಅಮರ್ ಸಾಂಚಿ (99.2345839), ಕಿಶನ್ ಗೌಡ ಎಸ್.ಪಿ. (99.2063887), ಸಂಜೀವ್ ಆರ್. (99.2007816), ಸರ್ವಜ್ಞಾ ಬಸವರಾಜ ಹುಬ್ಬಳ್ಳಿ (99.1815106), ರಾಹುಲ್ ಎಂ.ಕಲ್ಲೋಳಿ (99.1659391), ಅರ್ಜುನ್ ಕಿಶೋರ್ (99.1563194), ಸಾಯಿ ಭೇಷಜ್ ಜಿ. (99.1386744), ಚಿರಾಗ್ ಎಂ. ಯಲಿಗಾರ (99.1386744), ಅನ್ವಿತ್ ಎಸ್. ಪಾಟೀಲ (99.1068763), ಅಮನ್ ಅಬ್ದುಲ್ ಹಕೀಂ (99.1015198), ಸುಹಾಸ್ ಎಂ. (99.0801655), ಗಗನ್ ಎಸ್.ಕೆ. (99.0604127), ಗೌತಮ್ ಗೌಡ ಎಂ.ಜೆ. (99.0396433) ಉತ್ತಮ ಅಂಕ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಪರವಾಗಿ ಎಕ್ಸ್‌ಪರ್ಟ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್‍ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT